Optical Illusion: ಮಹಿಳೆ, ಕೋಳಿ ಮೊದಲು ಕಾಣಿಸಿದ್ದೇನು; ನಿಮ್ಮ ಒಲವು ವೃತ್ತಿ ಮೇಲೋ, ಪ್ರೀತಿ ಮೇಲೋ ತಿಳಿಸುತ್ತೆ ಈ ಚಿತ್ರ
ಈ ಆಫ್ಟಿಕಲ್ ಇಲ್ಯೂಷನ್ ಚಿತ್ರ ನಿಮ್ಮ ಗಮನ ಹೆಚ್ಚು ಪ್ರೀತಿ ಮೇಲೆ ಇರುವುದೋ ಅಥವಾ ವೃತ್ತಿ ಮೇಲೆ ಇರುವುದೋ ಎಂಬುದನ್ನು ತಿಳಿಸಲಿದೆ. ಹಾಗಾದರೆ ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದು ಮಹಿಳೆನಾ, ಕೋಳಿನಾ?
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹಾಗೂ ವಿಡಿಯೊಗಳು ನಮ್ಮ ಕಣ್ಣು, ಮೆದುಳಿಗೆ ಕೆಲಸ ಕೊಡುವುದು ಮಾತ್ರವಲ್ಲ, ಇದು ನಮ್ಮ ವ್ಯಕ್ತಿತ್ವ ಪರೀಕ್ಷೆಯನ್ನೂ ಮಾಡುತ್ತದೆ. ಒಮ್ಮೆ ನೋಡಿದಾಗ ಒಂದು ರೂಪದಲ್ಲಿ ಕಾಣುವ ಚಿತ್ರ ಇನ್ನೊಮ್ಮೆ ನೋಡಿದಾಗ ಇನ್ನೊಂದು ರೂಪದಲ್ಲಿ ಕಾಣುತ್ತದೆ. ಆದರೆ ಮೊದಲು ಚಿತ್ರದಲ್ಲಿ ನಮಗೆ ಏನು ಕಾಣಿಸುತ್ತದೆ ನಮ್ಮ ವ್ಯಕ್ತಿತ್ವ ಹಾಗೆ ಇರುತ್ತದೆ ಎನ್ನುತ್ತದೆ ಆಪ್ಟಿಕಲ್ ಇಲ್ಯೂಷನ್ ಪಸರ್ನಾಲಿಟಿ ಟೆಸ್ಟ್. ಬಣ್ಣ, ಆಕಾರ, ಗಾತ್ರ ಈ ಎಲ್ಲವೂ ನಮ್ಮ ವ್ಯಕ್ತಿತ್ವವನ್ನು ತಿಳಿಸುವುದರಲ್ಲಿ ಎರಡು ಮಾತಿಲ್ಲ.
ಹಾಗಾದರೆ ಸರಿ ಇಲ್ಲಿರುವ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದು ಮಹಿಳೆಯೋ ಅಥವಾ ಕೋಳಿ ಹುಂಜವೊ ನೋಡಿ. ಈ ಚಿತ್ರವು ನಿಮ್ಮ ಒಲವು ಯಾವುದರ ಮೇಲಿದೆ ಎಂಬುದನ್ನು ತಿಳಿಸಲಿದೆ.
ಮಹಿಳೆ ಮೊದಲು ಕಾಣಿಸುವುದು
ಚಿತ್ರದಲ್ಲಿ ಮಹಿಳೆ ಮೊದಲು ಕಂಡವರು ನಾಚಿಕೆ ಸ್ವಭಾದವರು ಹಾಗೂ ಹೆಚ್ಚು ಮಾತನಾಡುವುದಿಲ್ಲ. ಆದರೆ ಇವರು ಒಂದಿಲ್ಲ ಒಂದು ದಿನ ಪ್ರೀತಿ ಹುಡುಕಿಕೊಳ್ಳುತ್ತಾರೆ. ಇವರಲ್ಲಿ ವಿನಮ್ರ ಸ್ವಭಾವವಿರುತ್ತದೆ. ನಿಮಗೆ ಜನ ನಿಮ್ಮನ್ನು ಗುರುತಿಸಬೇಕು ಎಂಬ ಭಾವನೆ ಇರುವುದಿಲ್ಲ. ಆದರೆ ಜನರಿಗೆ ನಿಮ್ಮ ಬಗ್ಗೆ ಸರಿಯಾಗಿ ತಿಳಿದಿಲ್ಲ ಎಂದು ನೀವು ಅಂದುಕೊಳ್ಳುತ್ತೀರಿ. ನೀವು ಹೊಸ ಜಾಗಗಳಿಗೆ ಹೋಗಲು ಇಷ್ಟಪಡುವುದಿಲ್ಲ. ಎಲ್ಲರೊಂದಿಗೂ ಬೆರೆಯಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ನಿಮಗೆ ಸಂಬಂಧವನ್ನು ಹುಡುಕಿಕೊಳ್ಳಲು ಕಷ್ಟವಾಗುತ್ತದೆ. ನೀವು ಮೊಂಡು ಸ್ವಭಾವದವರು. ನಿಮ್ಮ ತಪ್ಪುಗಳನ್ನು ಇತರರು ಗುರುತಿಸಿದರೆ ನಿಮಗೆ ಕೋಪ ಬರುತ್ತದೆ. ನಿಮಲ್ಲಿರುವ ಧೈರ್ಯದಿಂದ ನೀವು ಎಲ್ಲಾ ತೊಂದರೆಗಳನ್ನು ದಾಟಿ ಮುಂದೆ ಬರುತ್ತೀರಿ. ನಿಮ್ಮ ಮುಂದೆ ಎಂಥಹದ್ದೇ ಸಮಸ್ಯೆ ಇರಲಿ ಅದನ್ನು ಎದುರಿಸಿ ಮುಂದೆ ಸಾಗುತ್ತೀರಿ.
ಕೋಳಿ ಮೊದಲು ಕಾಣಿಸಿದರೆ
ನಿಮಗೆ ಕೋಳಿ ಮೊದಲು ಕಾಣಿಸಿದರೆ ನೀವು ಪ್ರೀತಿಗಾಗಿ ಹಂಬಲಿಸುತ್ತಿಲ್ಲ. ನೀವು ನಿಮ್ಮ ಗುರಿ ಹಾಗೂ ಭವಿಷ್ಯದ ಯಶಸ್ಸಿನ ಮೇಲೆ ಗಮನ ಹರಿಸಿದ್ದೀರಿ ಎಂದರ್ಥ. ʼನೀವು ಸದ್ಯ ನಿಮ್ಮ ಜೀವನಕ್ಕಾಗಿ ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದೀರಿ. ನೀವು ಬೇರೆ ಬೇರೆ ಹಲವು ವಿಚಾರಗಳ ಮೇಲೆ ಗಮನ ಹರಿಸಿರುವ ಕಾರಣದಿಂದ ಪ್ರೀತಿ ನಿಮಗೆ ಮುಖ್ಯ ಎಂದು ಅನ್ನಿಸದೇ ಇರಬಹುದು. ಸದ್ಯ ನೀವು ನಿಮ್ಮ ಗುರಿ ಮುಟ್ಟಲು ಸಹಾಯ ಮಾಡುವ ಮೆಂಟರ್ಗಾಗಿ ಹುಡುಕಾಟ ನಡೆಸುತ್ತಿರುತ್ತೀರಿ. ಜೀವನದಲ್ಲಿ ಯಶಸ್ಸು ಗಳಿಸಿದ ವ್ಯಕ್ತಿಗಳ ಜೊತೆ ಸ್ನೇಹ ಬೆಳೆಸಿ ಅವರಿಂದ ಕಲಿಯುವ ಆಸೆ ಹೊಂದಿರುತ್ತೀರಿ.
ನೋಡಿದ್ರ ನಿಮ್ಮ ಒಲವು ಯಾವುದರ ಮೇಲೆ ಇದೆ ಎಂಬುದನ್ನು. ಆಪ್ಟಿಕಲ್ ಇಲ್ಯೂಷನ್ಗಳು ಮೋಜು, ಮಸ್ತಿ ನೀಡುವುದು ಮಾತ್ರವಲ್ಲ, ಇದು ನಮ್ಮ ಕಣ್ಣು ಹಾಗೂ ಮೆದುಳಿನ ನಡುವಿನ ಸಂಪರ್ಕ ವೃದ್ಧಿಗೂ ಸಹಾಯ ಮಾಡುತ್ತದೆ.
ಇದನ್ನೂ ಓದಿ
Optical Illusion: ಬೆಂಕಿ ಜ್ವಾಲೆ, ಪೆಂಗ್ವಿನ್ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವ ಪರಿಚಯ ಮಾಡಲಿದೆ ಈ ಚಿತ್ರ
ದೀಪಾವಳಿ ಸಂಭ್ರಮದ ಕಾರಣ ಮನೆಮಂದಿಯೆಲ್ಲಾ ಸೇರುತ್ತೀರಿ. ಈ ಸಂದರ್ಭದಲ್ಲಿ ನೀವು ಮನೆಯವರೆಲ್ಲರ ವ್ಯಕ್ತಿತ್ವ ಪರೀಕ್ಷೆ ಮಾಡಬೇಕು ಎಂದರೆ ಈ ಆಪ್ಟಿಕಲ್ ಇಲ್ಯೂಷನ್ ನಿಮಗೆ ಸಹಾಯ ಮಾಡಬಲ್ಲದು. ಈ ಚಿತ್ರದಲ್ಲಿ ಮೊದಲು ಕಂಡಿದ್ದೇನು ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ನೀವು ದಯಾಮಾಯಿಯೇ ಅಥವಾ ಮಹತ್ವಾಕಾಂಕ್ಷೆ ಉಳ್ಳವರೇ ಎಂಬುದನ್ನು ಈ ಚಿತ್ರ ನಿರ್ಧಾರ ಮಾಡಲಿದೆ. ಚಿತ್ರವನ್ನು ಸರಿಯಾಗಿ ಗಮನಿಸಿ. ಇದರಲ್ಲಿ ಪ್ವೆಂಗಿನ್ ಹಾಗೂ ಬೆಂಕಿಯ ಜ್ವಾಲೆ ಇದೆ. ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಯಾವುದು ಕಾಣಿಸುತ್ತದೆ ಅದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ.
ವಿಭಾಗ