ಕನ್ನಡ ಸುದ್ದಿ  /  Lifestyle  /  Viral Post Facebook User Shared Post Which He Found Notice Board At Ashoka Hotel In Bengaluru Rsm

Viral Post: ಈ ಹೋಟೆಲ್‌ಗೆ ಹೋದ್ರೆ ಆರ್ಡರ್‌ ಮಾಡಿ, ತಿಂದು ಬನ್ನಿ ಅಷ್ಟೇ; ಜಮೀನು ವ್ಯವಹಾರ, ವೈಯಕ್ತಿಕ ಮಾತುಕತೆ ಬೇಡ್ವೇ ಬೇಡ

Viral Post: ಹೋಟೆಲ್‌ನ್ನು ತಮ್ಮ ವ್ಯವಹಾರಗಳ ಸ್ಥಳವನ್ನಾಗಿ ಮಾಡಿಕೊಂಡಿರುವವರಿಗೆ ಬೆಂಗಳೂರಿನ ಅಶೋಕ ಗ್ರ್ಯಾಂಡ್‌ ಹೋಟೆಲ್‌ ಮಾಲೀಕರು ಸೂಚನಾ ಫಲಕದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹೋಟೆಲ್‌ನಲ್ಲಿ ನಿಮ್ಮ ವೈಯಕ್ತಿಕ ವಿಚಾರಗಳ ಚರ್ಚೆ ಬೇಡ ಎಂದು ಬರೆದಿರುವ ಬೋರ್ಡ್‌ ಎಲ್ಲರ ಗಮನ ಸೆಳೆಯುತ್ತಿದೆ.

 ಹೋಟೆಲ್‌ನಲ್ಲಿ ಗಮನ ಸೆಳೆಯುತ್ತಿರುವ ಬೋರ್ಡ್‌  (ಸಾಂದರ್ಬಿಕ ಚಿತ್ರ)
ಹೋಟೆಲ್‌ನಲ್ಲಿ ಗಮನ ಸೆಳೆಯುತ್ತಿರುವ ಬೋರ್ಡ್‌ (ಸಾಂದರ್ಬಿಕ ಚಿತ್ರ) (PC: Kaleem Ulla)

ಫೇಸ್‌ಬುಕ್‌ ಪೋಸ್ಟ್‌: ಪ್ರತಿದಿನ ಮನೆಯಲ್ಲಿ ಊಟ ಮಾಡಿದರೂ ಅಪರೂಪಕ್ಕೆ ಒಮ್ಮೆ ಹೋಟೆಲ್‌ಗೆ ಹೋಗಿ ತಿನ್ನಬೇಕು ಎನಿಸದೆ ಇರದು. ಅದರಲ್ಲೂ ನಮ್ಮ ಪ್ರೀತಿಪಾತ್ರರು ಸಿಕ್ಕರೆ ಸಾಕು ಅವರೊಂದಿಗೆ ಹೋಟೆಲ್‌ಗೆ ಹೋಗಿ ನಮ್ಮಿಷ್ಟದ ತಿಂಡಿ ತಿಂದು ಬಂದರೆ ಅದರಿಂದ ದೊರೆಯುವ ಖುಷಿ ಮತ್ತಾವುದರಲ್ಲೂ ದೊರೆಯುವುದಿಲ್ಲ.

ಹಾಗೇ ಹೋಟೆಲ್‌ಗೆ ಹೋಗಿ ಬರುವ ನಡುವೆ ಅಲ್ಲೇ ಒಂದಿಷ್ಟು ಹರಟೆ ಹೊಡೆದರೆ ಅದರ ಮಜಾವೇ ಬೇರೆ. ಹೋಟೆಲ್‌ಗೆ ಹೋದೊಡನೆ ನಮಗೆ ತೃಪ್ತಿ ಎನಿಸುವ ಸ್ಥಳದಲ್ಲಿ ಕುಳಿತು, ಎದುರಿಗಿದ್ದವರ ಕಷ್ಟ ಸುಖ ವಿಚಾರಿಸುತ್ತಾ ಮೆನು ನೋಡಿ ಫುಡ್‌ ಆರ್ಡರ್‌ ಮಾಡಿ, ಅದು ನಿಮ್ಮ ಟೇಬಲ್‌ಗೆ ಬಂದು ಸೇರುವವರೆಗೂ ನೂರಾರು ಮಾತುಗಳನ್ನಾಡಿರುತ್ತೇವೆ. ಇನ್ನ ಆರ್ಡರ್‌ ಮಾಡಿದ ಫುಡ್‌ ತಿನ್ನಲು ಆರಂಭಿಸಿದಾಗಿನಿಂದ ಕೈಗೆ ಬಿಲ್‌ ಸೇರುವವರೆಗೆ ಇನ್ನೊಂದಿಷ್ಟು ಮಾತು. ಹೀಗೆ ಹೋಟೆಲ್‌ನಲ್ಲೇ ಕನಿಷ್ಠ ಎಂದರೆ 1-2 ಗಂಟೆ ಸಮಯ ಕಳೆಯದೆ ಯಾರೂ ಬರುವುದಿಲ್ಲ.‌

ಗಮನ ಸೆಳೆಯುತ್ತಿದೆ ಅಶೋಕ ಗ್ರ್ಯಾಂಡ್‌ ಹೋಟೆಲ್‌ ಬೋರ್ಡ್‌

ಆದರೆ ನಮ್ಮಲ್ಲಿ ಬಹುತೇಕರು ಹೋಟೆಲ್‌ಗೆ ಊಟ, ತಿಂಡಿ ಮಾಡಲು ಹೋಗಿ ಅಲ್ಲಿ ಆತ್ಮೀಯರು ಸಿಕ್ಕಾಗ ಅವರೊಂದಿಗೆ ಸಮಯ ಕಳೆದರೆ ಇನ್ನೂ ಕೆಲವರು ತಮ್ಮ ವೈಯಕ್ತಿಕ ವಿಚಾರಗಳು, ಉದ್ಯಮಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಮಾತನಾಡಲು ಹೋಟೆಲ್‌ಗೆ ಹೋಗಿ ಬರುತ್ತಾರೆ. ಅವರ ಆ ಮಾತುಗಳು, ಚರ್ಚೆ ಅಕ್ಕ ಪಕ್ಕ ಕುಳಿತವರಿಗೂ ತೊಂದರೆ ಆಗದೆ ಇರದು. ಇದೇ ಕಾರಣಕ್ಕೆ ಕೆಲವೊಂದು ಹೋಟೆಲ್‌ಗಳಲ್ಲಿ ಕಟ್ಟು ನಿಟ್ಟಾಗಿ ಬೋರ್ಡ್‌ ಹಾಕಿರುತ್ತಾರೆ. ಅನ್ನ ವೇಸ್ಟ್‌ ಮಾಡಬೇಡಿ, ತಟ್ಟೆಯಲ್ಲಿ ಕೈ ತೊಳೆಯಬೇಡಿ ಎಂಬ ಬೋರ್ಡ್‌ ಹಾಕಿರುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಹೋಟೆಲ್‌ನಲ್ಲಿ ಹಾಕಿರುವ ಬೋರ್ಡ್‌ ಗಮನ ಸೆಳೆಯುತ್ತಿದೆ.

ಅಶೋಕ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಹೋಟೆಲ್‌ನಲ್ಲಿ ಜಮೀನು ವ್ಯವಹಾರ ಮತ್ತು ನಿಮ್ಮ ಯಾವುದೇ ಪರ್ಸನಲ್‌ ವ್ಯವಹಾರ ಮಾಡಬೇಡಿ ಎಂದು ವಿನಂತಿಸಿಕೊಳ್ಳುತ್ತೇವೆ ಎಂಬ ಬೋರ್ಡ್‌ ಎಲ್ಲರ ಗಮನ ಸೆಳೆಯುತ್ತಿದೆ. ಶಿವಮೊಗ್ಗದ ಕಲೀಂ ಕಲೀಂ ಉಲ್ಲಾ ಎನ್ನುವವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೋಟೆಲ್‌ನವರು ಹಾಕಿದ್ದ ಈ ಬೋರ್ಡ್‌ ಫೋಟೋ ಹಂಚಿಕೊಂಡಿದ್ದು ಈ ಪೋಸ್ಟ್‌ ವೈರಲ್‌ ಆಗುತ್ತಿದೆ.

ಪೋಸ್ಟ್‌ಗೆ ನಾನಾ ಕಾಮೆಂಟ್

ಕಲೀಂ ಅವರ ಪೋಸ್ಟ್‌ಗೆ ಫೇಸ್‌ಬುಕ್‌ ಯೂಸರ್‌ಗಳು ನಾನಾ ಕಾಮೆಂಟ್‌ ಮಾಡಿದ್ದಾರೆ. ರಿಯಲ್ ಎಸ್ಟೇಟ್ ದಂಧೆ ಮಾಡುವವರು ಇಂತಹ ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಗಂಟೆ ಗಟ್ಟಲೆ ಕೂತು ಮಿಕಗಳನ್ನು ಕೆಡವಿ ಕೊಂಡು ವ್ಯವಹಾರಗಳನ್ನು ಮಾಡ್ತಾರೆ ಅದಕ್ಕೆ ಇಂತಹ ಬೋರ್ಡ್ ಹಾಕಿ ಆದಷ್ಟು ಬೇಗ ಹೊರಗೆ ಹಾಕುವ ತಂತ್ರವಿದು ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರೆ, ಪ್ರೇಮಿಗಳಿಗೆ ಮಾತ್ರ ತೊಂದರೆ ಕೊಡಬಾರದು ಅಂತ ನಂದು ಒಂದು ಇದು ಎಂದು ಮತ್ತೊಬ್ಬರು ಅಭಿಪ್ರಾಯ ಹೊರ ಹಾಕಿದ್ದಾರೆ.

ಬೆಂಗಳೂರಿನ ಬಹುತೇಕ ಹೋಟೆಲ್‌ನ ತಲೆ ಬೇನೆ ಇದು. ಏಳೆಂಟು ಜನ ಬಂದು 2-3 ತಾಸು ಕುಳಿತುಬಿಡುತ್ತಾರೆ. ನೂರಾರು ರಿಯಲ್ ಎಸ್ಟೇಟ್ ಏಜೆಂಟರ ಅನಧಿಕೃತ ಕಚೇರಿಗಳು ಹೋಟೆಲ್‌ಗಳೇ. ಅಲ್ಲೇ ಎಲ್ಲ ವ್ಯವಹಾರವೂ ನಡೆಯುತ್ತದೆ. ಕೆಲವು ಏಜೆಂಟರು ಹತ್ತು ಗಂಟೆಗೆ ಬಂದು ಕೂತರೆ ಸಂಜೆ 4 ರವರೆಗೂ ಅಲ್ಲೇ ಜಂಡಾ ಊರುತ್ತಾರೆ. ಊಟ, ತಿಂಡಿ ಎಲ್ಲವೂ ಅಲ್ಲೇ. ಅಶೋಕಾ ಹೋಟೆಲ್ ಸ್ವಲ್ಪ ದೊಡ್ಡ ಮಟ್ಟದ ಬಿಸಿನೆಸ್‌ಗಳಿಗೆ, 10 ಕೋಟಿಗಿಂತ ಮೇಲಿನದಕ್ಕೆ ಎಂದು ಮತ್ತೊಬ್ಬ ಫೇಸ್‌ಬುಕ್‌ ಯೂಸರ್‌ ಬರೆದುಕೊಂಡಿದ್ದಾರೆ.

ನೀವೂ ಎಂದಾದರೂ ಹೀಗೆ ಹೋಟೆಲ್‌ನಲ್ಲಿ ನಿಮ್ಮ ವೈಯಕ್ತಿಕ ವ್ಯವಹಾರ ಮಾಡಿದ್ದೀರಾ? ಕಾಮೆಂಟ್‌ ಮಾಡಿ.