Brain Teaser: 1+3=4, 3+5=18 ಆದ್ರೆ, 4+6 ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನೆಟ್ಟಿಗರ ಮೆದುಳಿಗೆ ಹುಳ ಬಿಟ್ಟಿರುವುದು ಸುಳ್ಳಲ್ಲ. 2 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ನೀವು ಗಣಿತದಲ್ಲಿ ಪಂಟರಾಗಿರಬೇಕು. 1+3=4 ಆದರೆ, 4+6 ಎಷ್ಟು ಎಂದು ನೀವು ಕಂಡುಹಿಡಿಯಬೇಕು.
ಗಣಿತದ ಪಜಲ್‌ಗಳು ನೋಡಲು ಸುಲಭವಾಗಿ ಕಂಡರೂ ಇವುಗಳಿಗೆ ಉತ್ತರ ಕಂಡುಹಿಡಿಯುವುದು ಖಂಡಿತ ಸುಲಭದ ಮಾತಲ್ಲ. ಗಣಿತದ ಪಜಲ್‌ಗಳು ಮೆದುಳಿಗೆ ಹುಳ ಬಿಡುವಂತಿರುತ್ತವೆ. ಇದರಲ್ಲಿ ಇರುವುದು ಕೇವಲ ಕೂಡಿಸಿ, ಗುಣಿಸಿ, ಭಾಗಿಸುವ ಲೆಕ್ಕಾಚಾರವಾದರೂ ಇದಕ್ಕೆ ಉತ್ತರ ಕಂಡುಕೊಳ್ಳುವುದು ಖಂಡಿತ ಸುಲಭವಲ್ಲ.
ಆದರೆ ಗಣಿತ ಪಜಲ್‌ಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡುವುದರಿಂದ ನಿಮ್ಮಲ್ಲಿ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ಯೋಚನಾಶಕ್ತಿ ಬೆಳೆಯುತ್ತದೆ. ಜೊತೆಗೆ ನಿಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವೂ ವೃದ್ಧಿಸುತ್ತದೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ಹಲವರಿಗೆ ಇಷ್ಟವಾಗುತ್ತದೆ.
Brainy Bits Hub ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್ ಚಿತ್ರ ಇದಾಗಿದೆ. ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ ಇದು ಹಲವರ ಗಮನ ಸೆಳೆದಿದೆ. ಆದರೆ ಶೇ 99 ಮಂದಿ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವಲ್ಲಿ ಸೋತಿದ್ದಾರೆ.
ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಅಂಥದ್ದೇನಿದೆ ಅಂತೀರಾ? ಇಲ್ಲಿರುವ ಸುಲಭವಾದ ಕೂಡಿಸುವ ಲೆಕ್ಕಾಚಾರ. ಆದರೆ 1+3=4 ಆದರೆ 4+6= ಎಷ್ಟು ಎಂದು ನೀವು ಕಂಡುಹಿಡಿಯಬೇಕು. ‘1+3=4, 2+4=10, 3+5=18, and 4+6=?‘ ಇದು ಬ್ರೈನ್ ಟೀಸರ್‌ನಲ್ಲಿರುವ ಸೂತ್ರ.
ಈ ಬ್ರೈನ್ ಟೀಸರ್ ಪೋಸ್ಟ್ ಅನ್ನು 2000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವು ಪಜಲ್ ಪ್ರೇಮಿಗಳು ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಇದಕ್ಕೆ ಸರಿಯಾದ ಉತ್ತರ ಕೊಡುವಲ್ಲಿ ಹಲವರು ಸೋತಿದ್ದಾರೆ. ಇದಕ್ಕೆ ಕೆಲವರು 28 ಸರಿಯಾದ ಉತ್ತರ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ನಿಜಕ್ಕೂ ಇದಕ್ಕೆ ಸರಿಯಾದ ಉತ್ತರ 28 ಎಂದು ನಿಮಗೆ ಅನ್ನಿಸುತ್ತಾ, ನಿಮಗೆ ಬೇರೆ ಏನಾದ್ರೂ ಉತ್ತರ ಗೊತ್ತಿದೆಯೇ ತಿಳಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಈ ಇಬ್ಬರು ಮಹಿಳೆಯರಲ್ಲಿ ಯಾರು ಮನೆಗೆ ಹೆಚ್ಚು ನೀರು ತರುತ್ತಾರೆ, 20 ಸೆಕೆಂಡ್‌ನಲ್ಲಿ ಉತ್ತರಿಸಿ, ಮೆದುಳಿಗೊಂದು ಸವಾಲು
ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಇಬ್ಬರು ಮಹಿಳೆಯರು ನೀರು ತರುತ್ತಿರುವ ದೃಶ್ಯವಿದೆ. ಇಬ್ಬರಲ್ಲಿ ಯಾರು ಹೆಚ್ಚು ನೀರು ತರುತ್ತಿದ್ದಾರೆ ಎಂದು ನೀವು ಹೇಳಬೇಕು. ನಿಮಗಿರೋದು 20 ಸೆಕೆಂಡ್ ಸಮಯ, ಅಷ್ಟರಲ್ಲಿ ನೀವು ಸರಿಯಾದ ಉತ್ತರ ಕಂಡುಹಿಡಿಯಬೇಕು.
Brain Teaser: ಪತ್ತೇದಾರಿಕೆ ಮಾಡೋದ್ರಲ್ಲಿ ನೀವು ಪಂಟರಾದ್ರೆ ಈ 5 ಜನರಲ್ಲಿ ಕೊಲೆಗಾರ ಯಾರು ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ
ಪತ್ತೇದಾರಿ ಕೆಲಸ ಮಾಡೋದ್ರಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದು ಕೊಲೆ ನಡೆದಿರುವ ವಿವರ ಇದ್ದು, 5 ಜನರಲ್ಲಿ ಕೊಲೆಗಾರ ಯಾರು ಎಂದು ನೀವು ಕಂಡು ಹಿಡಿಯಬೇಕು. ಇದು ನಿಮಗಿರುವ ಸವಾಲು. ನಿಮ್ಮ ಸಮಯ ಈಗ ಶುರು.