Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಜನ ಹುಡುಗಿಯರಿದ್ದಾರೆ, ಪಟ್ ಅಂತ ನೋಡಿ ಥಟ್ ಅಂತ ಉತ್ತರ ಹೇಳಿ, ನಿಮಗೊಂದು ಚಾಲೆಂಜ್‌
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಜನ ಹುಡುಗಿಯರಿದ್ದಾರೆ, ಪಟ್ ಅಂತ ನೋಡಿ ಥಟ್ ಅಂತ ಉತ್ತರ ಹೇಳಿ, ನಿಮಗೊಂದು ಚಾಲೆಂಜ್‌

Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಜನ ಹುಡುಗಿಯರಿದ್ದಾರೆ, ಪಟ್ ಅಂತ ನೋಡಿ ಥಟ್ ಅಂತ ಉತ್ತರ ಹೇಳಿ, ನಿಮಗೊಂದು ಚಾಲೆಂಜ್‌

ಫೇಸ್‌ಬುಕ್‌ನಲ್ಲಿ ವೈರಲ್ ಆದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿದೆ. ಈ ಚಿತ್ರದಲ್ಲಿ ಎಷ್ಟು ಜನ ಹುಡುಗಿಯರಿದ್ದಾರೆ ಎಂದು 5 ಸೆಕೆಂಡ್‌ನಲ್ಲಿ ಹೇಳಬೇಕು. ಇದು ನಿಮಗಿರುವ ಸವಾಲು.

ಚಿತ್ರದಲ್ಲಿ ಎಷ್ಟು ಜನ ಹುಡುಗಿಯರಿದ್ದಾರೆ, ಪಟ್ ಅಂತ ನೋಡಿ ಥಟ್ ಅಂತ ಹೇಳಿ
ಚಿತ್ರದಲ್ಲಿ ಎಷ್ಟು ಜನ ಹುಡುಗಿಯರಿದ್ದಾರೆ, ಪಟ್ ಅಂತ ನೋಡಿ ಥಟ್ ಅಂತ ಹೇಳಿ

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಅಥವಾ ಬ್ರೈನ್ ಟೀಸರ್‌ಗಳು ಎಂದರೆ ಕೇವಲ ಟೈಮ್ ಪಾಸ್ ಮಾಡಲು ಮಾತ್ರವಲ್ಲ, ಅದಕ್ಕೂ ಮೀರಿ ಈ ಚಿತ್ರಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುತ್ತವೆ. ಇವು ನಮ್ಮ ಕಣ್ಣು ಹಾಗೂ ಮೆದುಳಿಗೆ ಸವಾಲು ಹಾಕುತ್ತವೆ. ನಮ್ಮಲ್ಲಿರುವ ತಾಳ್ಮೆಯನ್ನು ಪರೀಕ್ಷೆ ಮಾಡುತ್ತವೆ. ನಮ್ಮ ಬುದ್ಧಿವಂತಿಕೆಯನ್ನು ಅಳೆಯುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಸರಿಯಾದ ಉತ್ತರ ಕಂಡು ಹಿಡಿಯಲು ಸಾಧ್ಯವಾಗದೇ ಇದ್ದರೂ, ಉತ್ತರ ಕಂಡುಹಿಡಿಯುವವರೆಗೂ ಅವರು ಬಿಡುವುದಿಲ್ಲ. ಯಾಕೆಂದರೆ ಬ್ರೈನ್ ಟೀಸರ್‌ಗಳ ಗುಣವೇ ಅಂಥದ್ದು. ಇವೊಂಥರಾ ಕ್ರೇಜಿ ಎನ್ನಿಸುವ ಕಾರಣಕ್ಕೆ ಹಲವರಿಗೆ ಇವು ಇಷ್ಟವಾಗುತ್ತದೆ.

ಆಪ್ಟಿಕಲ್ ಮೈಂಡ್ ಎನ್ನುವ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್‌ಗೆ ನೀಡಿರುವ ಸಮಯದಲ್ಲಿ ಉತ್ತರ ಹೇಳುವುದು ಕಷ್ಟ ಎನ್ನಿಸಬಹುದು. ಯಾಕೆಂದರೆ ಈ ಬ್ರೈನ್ ಟೀಸರ್‌ಗೆ ಕೇವಲ 5 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಬೇಕು. ಈ ಚಿತ್ರದಲ್ಲಿ ಕನ್ನಡಿವೊಂದರ ಮುಂದೆ ಕುಳಿತ ಹುಡುಗಿಯರು ಹಾಗೂ ಅವರ ಪ್ರತಿಬಿಂಬವನ್ನು ತೋರಿಸುತ್ತದೆ. ಇದು ಉದ್ದಕ್ಕೆ ಹೆಣ್ಣುಮಕ್ಕಳು ಕುಳಿತಂತೆ ಕಾಣುತ್ತಿದೆ. ಈಗ ನಿಮಗಿರುವ ಸವಾಲು ಎಂದರೆ ಚಿತ್ರದಲ್ಲಿ ಒಂದು ಎಷ್ಟು ಮಂದಿ ಹೆಣ್ಣುಮಕ್ಕಳಿದ್ದಾರೆ ಎಂದು ಕಂಡುಹಿಡಿಯುವುದು.

ಇದಕ್ಕೆ ಉತ್ತರ ಹೇಳುವುದು ಸುಲಭ ಎನ್ನಿಸಿದರೂ ಇದು ಟ್ರಿಕ್ಕಿ ಆಗಿರುವುದು ಸುಳ್ಳಲ್ಲ. ಈ ಚಿತ್ರ ಹಾಗೂ ಕನ್ನಡಿಯಲ್ಲಿನ ಪ್ರತಿಬಿಂಬ ಎರಡನ್ನೂ ಕೂಡ ಗಮನಿಸಿದ ಮೇಲೂ ಚಿತ್ರದಲ್ಲಿ ಎಷ್ಟು ಜನ ಹುಡುಗಿಯರಿದ್ದಾರೆ ಎಂಬುದನ್ನು ಕಂಡುಹಿಡಿಯುವುದು ನಿಜಕ್ಕೂ ಕಷ್ಟವಾಗುತ್ತದೆ. ಆದರೂ ಈ ಸವಾಲು ಸ್ವೀಕರಿಸಿ 5 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ಎಷ್ಟು ಹುಡುಗಿಯರಿದ್ದಾರೆ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ ಗಮನಿಸಿ.

ಆಪ್ಟಿಕಲ್ ಇಲ್ಯೂಷನ್‌ಗಳು ಖ್ಯಾತಿ ಪಡೆಯಲು ಕಾರಣ

ಆಪ್ಟಿಕಲ್ ಇಲ್ಯೂಷನ್‌ಗಳು ಸೋಷಿಯಲ್ ಮಿಡಿಯಾಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಿವೆ, ಇದಕ್ಕೆ ಕಾರಣ ಇವು ಎಲ್ಲಾ ವಯೋಮಾನದವರಿಗೂ ಮನರಂಜನೆ ನೀಡುತ್ತವೆ. ಇದು ಮೋಜಿನ ಜೊತೆಗೆ ಮೆದುಳಿಗೆ ಸವಾಲು ಕೂಡ ನೀಡುತ್ತದೆ. ಸಾಕಷ್ಟು ಜನ ಬ್ರೈನ್ ಟೀಸರ್‌ ಪ್ರೇಮಿಗಳಿದ್ದು, ಅವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸುತ್ತಾರೆ. ಇದರಿಂದ ಹಲವರಿಗೆ ತಮ್ಮ ಉತ್ತರದೊಂದಿಗೆ ಅವರ ಉತ್ತರವನ್ನು ಹೋಲಿಸಿ ನೋಡಿಕೊಳ್ಳಲು ಕೂಡ ಇಷ್ಟವಾಗುತ್ತದೆ. ಇದರಿಂದ ಮೆದುಳು ಚುರುಕಾಗುತ್ತದೆ. ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.