Brain Teaser: M ಅಕ್ಷರಗಳ ರಾಶಿ ಇರುವ ಈ ಚಿತ್ರದಲ್ಲಿ ಒಂದು ಕಡೆ N ಇದೆ, 10 ಸೆಕೆಂಡ್‌ನಲ್ಲಿ ಹುಡುಕಿ; ನಿಮಗೊಂದು ಚಾಲೆಂಜ್‌
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: M ಅಕ್ಷರಗಳ ರಾಶಿ ಇರುವ ಈ ಚಿತ್ರದಲ್ಲಿ ಒಂದು ಕಡೆ N ಇದೆ, 10 ಸೆಕೆಂಡ್‌ನಲ್ಲಿ ಹುಡುಕಿ; ನಿಮಗೊಂದು ಚಾಲೆಂಜ್‌

Brain Teaser: M ಅಕ್ಷರಗಳ ರಾಶಿ ಇರುವ ಈ ಚಿತ್ರದಲ್ಲಿ ಒಂದು ಕಡೆ N ಇದೆ, 10 ಸೆಕೆಂಡ್‌ನಲ್ಲಿ ಹುಡುಕಿ; ನಿಮಗೊಂದು ಚಾಲೆಂಜ್‌

ನಿಮ್ಮ ಕಣ್ಣು ತುಂಬಾನೇ ಶಾರ್ಪ್ ಆಗಿದೆ, ಯಾವುದೇ ಸೂಕ್ಷ್ಮವನ್ನಾದ್ರೂ ಬೇಗ ಗ್ರಹಿಸುತ್ತೆ ಅಂತಿದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಈ ಬ್ರೈನ್ ಟೀಸರ್ ಚಿತ್ರದಲ್ಲಿ ರಾಶಿ M ಅಕ್ಷರಗಳಿವೆ. ಇದರ ನಡುವೆ ಒಂದು ಕಡೆ N ಅಡಗಿದೆ. ಅದು ಎಲ್ಲಿದೆ ಎಂದು ನೀವು ಕಂಡು ಹಿಡಿಯಬೇಕು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳು ಕೇವಲ ನಮ್ಮ ಮೆದುಳಿಗೆ ಮಾತ್ರವಲ್ಲ, ಕಣ್ಣಿಗೂ ಚಾಲೆಂಜ್ ಮಾಡುತ್ತವೆ. ಇಂತಹ ಚಿತ್ರಗಳು ನಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ಎಂದು ಅರಿತುಕೊಳ್ಳಲು ನಮಗೊಂದು ವೇದಿಕೆಯಾಗುತ್ತವೆ. ಈ ಚಿತ್ರದಲ್ಲಿ N ಅಕ್ಷರವನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ಬ್ರೈನ್ ಟೀಸರ್‌ಗಳು ಎಂದರೆ ಹಾಗೆ, ಇವು ನಮಗೆ ನಿರ್ದಿಷ್ಟ ಸಮಯದಲ್ಲಿ ಉತ್ತರ ಕಂಡುಹಿಡಿಯುವ ಸವಾಲು ಹಾಕುತ್ತವೆ. ಇದರಿಂದ ನಾವು ಚುರುಕಾಗಿ ಯೋಚನೆ ಮಾಡಬೇಕಾಗುತ್ತದೆ, ಜೊತೆಗೆ ಚುರುಕಾಗಿ ಗ್ರಹಿಸಬೇಕಾಗುತ್ತದೆ ಕೂಡ. ಇಂದಿನ ಬ್ರೈನ್ ಟೀಸರ್‌ಗೆ ನೀವು 10 ಸೆಕೆಂಡ್‌ನಲ್ಲಿ ಸರಿಯಾದ ಉತ್ತರ ಕಂಡುಹಿಡಿಯಬೇಕು.

ಬ್ರೈನ್ ಟೀಸರ್‌ನಲ್ಲಿ ಏನಿದೆ?

ಇಂದಿನ ಬ್ರೈನ್ ಟೀಸರ್‌ನಲ್ಲಿ ಇಂಗ್ಲಿಷ್‌ ಎಂ ಅಕ್ಷರಗಳನ್ನೇ ಉದ್ದಕ್ಕೆ ಅಡ್ಡಕ್ಕೆ ರಾಶಿ ಬರೆದಿರುವುದನ್ನು ನೀವು ಕಾಣಬಹುದು. ಹಸಿರು ಬಣ್ಣದಲ್ಲಿ ಬರೆಯಲಾದ ಈ ಎಂ ಅಕ್ಷರದ ಮಧ್ಯೆ ಒಂದೇ ಒಂದು ಕಡೆ ಎನ್ ಇದೆ. ಆ ಎನ್ (N) ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು.

ಚಿತ್ರವನ್ನು ಸರಿಯಾಗಿ ನೋಡಿ, ಮೇಲ್ನೋಟಕ್ಕೆ ಖಂಡಿತ ಇದರಲ್ಲಿ N ಹುಡುಕುವುದು ಸಾಧ್ಯವಿಲ್ಲ, ಯಾಕೆಂದರೆ ಇಲ್ಲಿ ಎಲ್ಲವೂ M ನಂತೆಯೇ ಕಾಣುತ್ತವೆ. ಆದರೆ ಒಂದು ಕಡೆ N ಇರುವುದು ಸುಳ್ಳಲ್ಲ. ಹಾಗಾಗಿ 10 ಸೆಕೆಂಡ್‌ನಲ್ಲಿ ಸೂಕ್ಷ್ಮವಾಗಿ ಚಿತ್ರ ಗಮನಿಸಿದ್ರೆ ನಿಮ್ಮಿಂದ N ಕಂಡುಹಿಡಿಯಲು ಸಾಧ್ಯವಿದೆ.

ನಿಮಗೆ N ಕಂಡು ಹಿಡಿಯಲು ಸಾಧ್ಯವಾದ್ರೆ ಅದೇ ಖುಷಿಯಲ್ಲಿ ಸುಮ್ಮನೆ ಕುಳಿತ ಬಿಡಿಬೇಡಿ, ಈ ಬ್ರೈನ್ ಟೀಸರ್ ಅನ್ನು ನಿಮ್ಮ ಸ್ನೇಹಿತರು ಆತ್ಮೀಯರಿಗೂ ಶೇರ್ ಮಾಡಿ. ಅವರಿಗೆ N ಕಂಡುಹಿಡಿಯುವ ಸವಾಲು ಹಾಕಿ. ಅವರಿಗೆ 10 ಸೆಕೆಂಡ್‌ನಲ್ಲಿ N ಕಂಡುಹಿಡಿಯಲು ಸಾಧ್ಯವಾಗುತ್ತಾ ನೋಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಈ ಸರಳ ಗಣಿತದ ಪಜಲ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ, 9=63, 6=24 ಆದ್ರೆ 4= ಎಷ್ಟು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ಮೆದುಳಿಗೆ ಹುಳ ಬಿಡುವಂತಿದೆ. ಈ ಪ್ರಶ್ನೆ ಸರಳವಾಗಿದ್ದರೂ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. ಇಲ್ಲಿ 9=63 ಆದರೆ 4= ಎಷ್ಟು ಎಂದು ನೀವು ಹೇಳಬೇಕು. ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಆದ್ರೆ ಉತ್ತರ ಹೇಳೋಕೆ ಟ್ರೈ ಮಾಡಿ.

Brain Teaser: ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ, 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ ಅನ್ನೋದು ಪ್ರಶ್ನೆಯಾಗಿದೆ. ಇದಕ್ಕೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

Whats_app_banner