Brain Teaser: ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ನಿಮ್ಮ ಮೆದುಳು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ನಿಮ್ಮ ಮೆದುಳು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ

Brain Teaser: ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ನಿಮ್ಮ ಮೆದುಳು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ

ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು ಎಂದು ನೀವು ಹೇಳಬೇಕು. ನಿಮಗಿರೋದು 10 ಸೆಕೆಂಡ್ ಸಮಯ, ಟ್ರೈ ಮಾಡಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಗಣಿತದ ಪಜಲ್‌ಗಳು ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಅದಕ್ಕೆ ಉತ್ತರ ಕಂಡುಹಿಡಿಯಲು ನಾವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಪ್ರಶ್ನೆ ಸುಲಭವಾಗಿ ಕಂಡರೂ ಸರಿಯಾದ ಉತ್ತರ ಕಂಡು ಹಿಡಿಯುವುದು ನಿಜಕ್ಕೂ ಸುಲಭದ ಮಾತಲ್ಲ. ಯಾಕೆಂದರೆ ಇದರಲ್ಲಿ ಸಾಕಷ್ಟು ಟ್ವಿಸ್ಟ್ ಇರುತ್ತದೆ. ಹಾಗಂತ ಉತ್ತರ ಕಂಡುಹಿಡಿಯುವುದು ಅಸಾಧ್ಯವಾಗಿರುವುದಿಲ್ಲ.

ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಹಿಡಿಯುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಇದರಿಂದ ಏಕಾಗ್ರತೆ ವೃದ್ಧಿಯಾಗುತ್ತದೆ. ನಮ್ಮ ಮನಸ್ಸು ಒಂದಿಷ್ಟು ಹೊತ್ತು ಬೇರೇನನ್ನೂ ಯೋಚಿಸದೇ ಉತ್ತರ ಹುಡುಕುವ ಪ್ರಯತ್ನ ಮಾಡುವುದರಿಂದ ಬೇರೆಲ್ಲಾ ಚಿಂತೆಗಳು ದೂರಾಗುತ್ತವೆ. ಇದರಿಂದ ಮನಸ್ಸಿಗೆ ರಿಲ್ಯಾಕ್ಸ್ ಸಿಗುವುದು ಸುಳ್ಳಲ್ಲ. ಮೋಜು ನೀಡುವ ಬ್ರೈನ್ ಟೀಸರ್‌ಗಳು ಸವಾಲು ಹಾಕುತ್ತವೆ. ಇಂದಿನ ಬ್ರೈನ್ ಟೀಸರ್ ಗಣಿತಕ್ಕೆ ಸಂಬಂಧಿಸಿದ್ದಾಗಿದೆ.

@brain_teaser_1 ಎನ್ನುವ ಎಕ್ಸ್ ಪುಟವನ್ನು ನಿರ್ವಹಿಸುತ್ತಿರುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ನಿಮ್ಮಿಂದ ಉತ್ತರ ಕಂಡುಕೊಳ್ಳಲು ಸಾಧ್ಯವೇ ಎಂದು ಪ್ರಶ್ನೆ ಕೇಳಿ ಇದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಒಂದಿಷ್ಟು ನಂಬರ್‌ಗಳಿವೆ. 3,6, 12, 4, 8, 16, 5, 10 ನಂಬರ್‌ಗಳನ್ನು ಬರೆಯಲಾಗಿದ್ದು ಒಂದು ಸಂಖ್ಯೆ ಮಿಸ್ ಆಗಿದೆ. ಆ ಸಂಖ್ಯೆ ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು.

ಡಿಸೆಂಬರ್ 10 ರಂದು ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಚಿತ್ರ ಇದಾಗಿದೆ. ಈಗಾಗಲೇ 28 ಸಾವಿರಕ್ಕೂ ಅಧಿಕ ಮಂದಿ ಈ ಬ್ರೈನ್ ಟೀಸರ್ ಅನ್ನು ವೀಕ್ಷಿಸಿದ್ದಾರೆ. ಕೆಲವರು ಇದಕ್ಕೆ ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಬ್ರೈನ್ ಟೀಸರ್‌ಗೆ ಉತ್ತರ 20 ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಇದಕ್ಕೆ ನಿಜಕ್ಕೂ 20 ಸರಿಯಾದ ಉತ್ತರವೇ, ನಿಮ್ಮ ಉತ್ತರವೇನು ಹೇಳಿ. ನೀವು ಸರಿಯಾದ ಉತ್ತರ ಕಂಡುಹಿಡಿದ ಮೇಲೆ ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೂ ಈ ಬ್ರೈನ್ ಟೀಸರ್ ಚಿತ್ರವನ್ನು ಕಳುಹಿಸಿ ಅವರಿಂದ ಉತ್ತರ ಏನು ಬರುತ್ತದೆ ಎಂಬುದನ್ನು ನಿರೀಕ್ಷಿಸಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಇಲ್ಲಿರುವ 4 ಮಂದಿಯಲ್ಲಿ ಅತ್ಯಂತ ಮೂರ್ಖ ಯಾರು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಒಂದು ಮರ ಹಾಗೂ 4 ಜನ ಇರುವ ಈ ಬ್ರೈನ್ ಟೀಸರ್‌ನಲ್ಲಿ ಅತ್ಯಂತ ಮೂರ್ಖ ಯಾರು ಎಂದು ನೀವು ಕಂಡುಹಿಡಿಯಬೇಕು. ನಿಮ್ಮ ಐಕ್ಯೂ ನಿಜಕ್ಕೂ ಹೈ ಇದ್ದರೆ ನೀವು 5 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಈ ಬ್ರೈನ್ ಟೀಸರ್ ನಿಮ್ಮ ಬುದ್ಧಿವಂತಿಕೆ ಪರೀಕ್ಷೆ ಮಾಡುವುದು ಸುಳ್ಳಲ್ಲ. ನಿಮ್ಮ ಸಮಯ ಈಗ ಶುರು…

Brain Teaser: ಚಳಿಗಾಲದಲ್ಲೂ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತೆ ಅಂದ್ರೆ ಈ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ, ನಿಮಗೊಂದು ಸವಾಲ್

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ ಈಗ ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಇದರಲ್ಲಿರುವ ಗಣಿತದ ಪಜಲ್‌ಗೆ ಉತ್ತರ ಹೇಳಬೇಕಾಗಿರುವುದು ಇಂದಿನ ಸವಾಲು. ಇದರಲ್ಲಿ ಸುಲಭ ಗಣಿತ, ಆದರೆ ಉತ್ತರ ಖಂಡಿತ ಸುಲಭವಿಲ್ಲ. ನಿಮ್ಮ ಮೆದುಳು ಚುರುಕಾಗಿದ್ರೆ ಈ ಪ್ರಶ್ನೆಗೆ ಥಟ್ಟಂತ ಉತ್ತರ ಹೇಳಿ.

Whats_app_banner