Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ತ್ರಿಭುಜಗಳಿವೆ; ನಿಮ್ಮ ಕಣ್ಣು, ಮೆದುಳು ಶಾರ್ಪ್ ಇದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಕಣ್ಣು ಹಾಗೂ ಮೆದುಳು ಚುರುಕು ಇರೋರಿಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಈ ಚಿತ್ರದಲ್ಲಿ ಒಟ್ಟು ಎಷ್ಟು ತ್ರಿಭುಜಗಳಿವೆ ಎಂದು ನೀವು 10 ಸೆಕೆಂಡ್ ಒಳಗೆ ಹೇಳಬೇಕು. ನಿಮಗಾಗಿ ಇಲ್ಲಿದೆ ಒಂದು ಹೊಸ ಚಾಲೆಂಜ್.

ಬ್ರೈನ್ ಟೀಸರ್‌ಗಳು ಹಲವು ರೂಪದಲ್ಲಿರುತ್ತವೆ. ಕೆಲವು ಪ್ರಶ್ನೆಗಳ ರೂಪದಲ್ಲಿ ಇದ್ದರೆ, ಇನ್ನೂ ಕೆಲವು ಚಿತ್ರಗಳ ರೂಪದಲ್ಲಿ ಇರುತ್ತವೆ. ಇನ್ನೂ ಕೆಲವು ಆಪ್ಟಿಕಲ್ ಇಲ್ಯೂಷನ್‌ಗಳ ರೂಪದಲ್ಲಿ ಇರುತ್ತವೆ. ಆದರೆ ಈ ಎಲ್ಲವೂ ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್ ಚಿತ್ರಗಳು ನೀಡುವ ಚಾಲೆಂಜ್‌ಗೆ ನಾವು ಸುಲಭವಾಗಿ ಉತ್ತರ ಹೇಳಲು ಸಾಧ್ಯವಾಗುವುದಿಲ್ಲ. ಇಂದಿನ ಬ್ರೈನ್ ಟೀಸರ್ ಚಿತ್ರ ಕೂಡ ಹಾಗೇ ಇದೆ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಹಲವು ತ್ರಿಭುಜಗಳಿರುವ ಒಂದು ಟ್ರೈ ಆ್ಯಂಗಲ್ ಚಿತ್ರವಿದೆ. ಇದರಲ್ಲಿ ಒಟ್ಟು ಎಷ್ಟು ತ್ರಿಭುಜಗಳಿವೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ಹಾಗಂತ ದಿನವಿಡೀ ಎಣಿಸುತ್ತಾ ಕೂರುವಂತಿಲ್ಲ. ಕೇವಲ 10 ಸೆಕೆಂಡ್ ಒಳಗೆ ಈ ಬ್ರೈನ್ ಟೀಸರ್‌ಗೆ ಸರಿ ಹತ್ತರ ಹೇಳಬೇಕು.
@polls.viral ಎನ್ನುವ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಚಿತ್ರ ಈಗ ಸಾಕಷ್ಟು ವೈರಲ್ ಆಗುತ್ತಿದೆ. ‘ಚಿತ್ರದಲ್ಲಿ ಎಷ್ಟು ತ್ರಿಭುಜಗಳು ನಿಮಗೆ ಕಾಣಿಸುತ್ತಿವೆ‘ ಎಂದು ಪ್ರಶ್ನೆ ಕೇಳಲಾಗಿದೆ. ಈ ಚಿತ್ರವನ್ನು ನೋಡಿದಾಗ ಇದಕ್ಕೆ ಉತ್ತರ ಹೇಳುವುದು ಕಷ್ಟ ಎಂದು ನಿಮಗೆ ಅನ್ನಿಸುವುದಿಲ್ಲ. ಆದರೆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿಮಗೆ ಉತ್ತರ ಸಿಗುವುದಕ್ಕಿಂತ ಕಣ್ಣು ನೋವು ಬರುತ್ತದೆ. ಆದರೂ ನಿಮ್ಮ ಕಣ್ಣು ಹಾಗೂ ಮೆದುಳು ಎರಡೂ ಶಾರ್ಪ್ ಇದ್ದರೆ ತಕ್ಷಣಕ್ಕೆ ಸರಿ ಉತ್ತರ ಸಿಗಬಾರದು ಅಂತೇನೂ ಇಲ್ಲ. ನೀವೂ ಟ್ರೈ ಮಾಡಿ, ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಕಳುಹಿಸಿ ಅವರಿಂದ ಏನು ಉತ್ತರ ಬರುತ್ತದೆ ನಿರೀಕ್ಷಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಜನ ಹುಡುಗಿಯರಿದ್ದಾರೆ, ಪಟ್ ಅಂತ ನೋಡಿ ಥಟ್ ಅಂತ ಉತ್ತರ ಹೇಳಿ, ನಿಮಗೊಂದು ಚಾಲೆಂಜ್
ಫೇಸ್‌ಬುಕ್‌ನಲ್ಲಿ ವೈರಲ್ ಆದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿದೆ. ಈ ಚಿತ್ರದಲ್ಲಿ ಎಷ್ಟು ಜನ ಹುಡುಗಿಯರಿದ್ದಾರೆ ಎಂದು 5 ಸೆಕೆಂಡ್‌ನಲ್ಲಿ ಹೇಳಬೇಕು. ಇದು ನಿಮಗಿರುವ ಸವಾಲು.
Brain Teaser: 9=54, 8=40, 6=18 ಆದರೆ 4= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್ ನೀವಾದ್ರೆ 9 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಗಣಿತದ ಪಜಲ್‌ಗೆ ಸರಿ ಉತ್ತರ ಕಂಡುಹಿಡಿಯಲು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಇದಕ್ಕೆ 9 ಸೆಕೆಂಡ್‌ನಲ್ಲಿ ಉತ್ತರ ಹೇಳಲು ಸಾಧ್ಯವೇ ನೋಡಿ.
ವಿಭಾಗ