Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಕಲ್ಲಂಗಡಿಗಳಿವೆ; ಶೇ 99 ಮಂದಿಗೆ ಉತ್ತರ ಹೇಳಲು ಸಾಧ್ಯವಾಗದ ಈ ಪ್ರಶ್ನೆಗೆ ನಿಮ್ಮ ಉತ್ತರವೇನು
ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಸಖತ್ ವೈರಲ್ ಆಗಿದೆ. ಚಿತ್ರದಲ್ಲಿ ಒಟ್ಟು ಎಷ್ಟು ಕಲ್ಲಂಗಡಿ ಹಣ್ಣುಗಳಿವೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ನೀವು ಸರಿ ಉತ್ತರ ಹೇಳಲು ಟ್ರೈ ಮಾಡಿ.

ಖಾಲಿ ಕೂತು ಬೇಸರ ಆಗಿದ್ಯಾ, ಎಷ್ಟೊತ್ತು ಅಂತ ರೀಲ್ಸ್ ನೋಡ್ತೀರಾ. ಸ್ವಲ್ಪ ಹೊತ್ತು ನಿಮ್ಮ ಮೆದುಳಿಗೆ ಕೆಲಸ ಕೊಡಿ, ಮೆದುಳು ಚುರುಕಾಗುತ್ತೆ. ಹಾಗಂತ ಏನ್ ಕೆಲಸ ಕೊಡೋದು ಅಂತ ಯೋಚಿಸಬೇಡಿ. ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಮೆದುಳಿಗೆ ಖಂಡಿತ ಒಂದಿಷ್ಟು ಹೊತ್ತು ಕೆಲಸ ಸಿಗುತ್ತೆ.
ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಒಂದಿಷ್ಟು ಕತ್ತರಿಸಿದ ಕಲ್ಲಂಗಡಿ ಹಣ್ಣುಗಳಿವೆ. ಹಾಗಾದರೆ ಈ ಚಿತ್ರದಲ್ಲಿ ಒಟ್ಟು ಎಷ್ಟು ಕಲ್ಲಂಗಡಿರ್ ಹಣ್ಣುಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮ್ಮ ಮೆದುಳಿಗೆ ಕೆಲಸ ಕೊಡದೇ ಖಂಡಿತ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ.
ಅಮೆರಿಕದ ಮೂಲದ ಹಾಡುಗಾರ್ತಿ ಮಾಸಿ ಗ್ರೇ ಈ ಬ್ರೈನ್ ಟೀಸರ್ ಅನ್ನು ತಮ್ಮ ಪೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೊಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವಾಗಿದ್ದು, ನೀವು ಅಂದುಕೊಂಡಂತೆ ಇದಕ್ಕೆ ಸರಿ ಉತ್ತರ ಕಂಡುಹಿಡಿಯುವುದು ಖಂಡಿತ ಸುಲಭವಲ್ಲ. ಈ ಚಿತ್ರದಲ್ಲಿ ಒಟ್ಟು ಎಷ್ಟು ಕಲ್ಲಂಗಡಿ ಹಣ್ಣುಗಳಿವೆ ಎಂಬುದನ್ನು ಕಂಡುಹಿಡಿಯಲು ಶೇ 99ರಷ್ಟು ಮಂದಿಗೆ ಸಾಧ್ಯವಾಗಿಲ್ಲ. ಹಾಗಾದರೆ ನಿಮ್ಮಿಂದ ಇದಕ್ಕೆ ಸರಿ ಉತ್ತರ ಹೇಳಲು ಸಾಧ್ಯವೇ ಪ್ರಯತ್ನ ಮಾಡಿ.
ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣಿಗೆ ಮಾತ್ರ, ಮೆದುಳಿಗೂ ಕೂಡ ಸವಾಲು ಹಾಕುತ್ತವೆ. ಮೇಲ್ನೋಟಕ್ಕೆ ಕಾಣಿಸಿದ್ದಷ್ಟು ಸುಲಭವಾಗಿ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಇದಕ್ಕೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡುವುದರಿಂದ ನಮ್ಮ ಮೆದುಳು ಸಾಕಷ್ಟು ಚುರುಕಾಗುವುದು ಖಂಡಿತ, ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
ಇದನ್ನೂ ಓದಿ: Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಜನ ಹುಡುಗಿಯರಿದ್ದಾರೆ, ಪಟ್ ಅಂತ ನೋಡಿ ಥಟ್ ಅಂತ ಉತ್ತರ ಹೇಳಿ, ನಿಮಗೊಂದು ಚಾಲೆಂಜ್
ಫೇಸ್‌ಬುಕ್‌ನಲ್ಲಿ ವೈರಲ್ ಆದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿದೆ. ಈ ಚಿತ್ರದಲ್ಲಿ ಎಷ್ಟು ಜನ ಹುಡುಗಿಯರಿದ್ದಾರೆ ಎಂದು 5 ಸೆಕೆಂಡ್‌ನಲ್ಲಿ ಹೇಳಬೇಕು. ಇದು ನಿಮಗಿರುವ ಸವಾಲು.
Brain Teaser: ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಹುಡುಕಲು ನಿಮ್ಮಿಂದ ಸಾಧ್ಯವೇ? ನಿಮಗಿರೋದು 10 ಸೆಕೆಂಡ್ ಸಮಯ, ಟ್ರೈ ಮಾಡಿ
Optical Illusion: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಜಿಂಕೆ ಹುಡುಕುವ ಸವಾಲನ್ನು ನಿಮಗೆ ನೀಡುತ್ತದೆ. ಇದರಲ್ಲಿ ಗೆಲ್ಲಲು ಸಾಧ್ಯವೇ ಪ್ರಯತ್ನಿಸಿ.