Brain Teaser: ನಿಮ್ಮ ಬುದ್ಧಿಶಕ್ತಿಗೊಂದು ಸವಾಲು; 30 ಸೆಕೆಂಡ್‌ಗಳಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಬುದ್ಧಿಶಕ್ತಿಗೊಂದು ಸವಾಲು; 30 ಸೆಕೆಂಡ್‌ಗಳಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ ನೋಡಿ

Brain Teaser: ನಿಮ್ಮ ಬುದ್ಧಿಶಕ್ತಿಗೊಂದು ಸವಾಲು; 30 ಸೆಕೆಂಡ್‌ಗಳಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ ನೋಡಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಕಷ್ಟು ಮಂದಿಗೆ ಸಾಧ್ಯವಾಗಿಲ್ಲ. ನೋಡೋಕೆ ತುಂಬಾ ಕ್ಲಿಷ್ಟಕರ ಅನಿಸಿದ್ರು ಸ್ವಲ್ಪ ತಲೆಗೆ ಕೆಲಸ ಕೊಟ್ಟರೆ ಉತ್ತರ ಹೇಳುವುದು ಕಷ್ಟವೇನಲ್ಲ. ನೀವು ಗಣಿತದಲ್ಲಿ ತುಂಬಾ ಬುದ್ಧಿವಂತರು, ಐಕ್ಯೂ ಪವರ್ ಚೆನ್ನಾಗಿ ಎಂದರೆ 30 ಸೆಕೆಂಡ್‌ಗಳಲ್ಲಿ ಉತ್ತರ ಕಂಡು ಹಿಡಿಯಿರಿ.

ಸಾಮಾಜಿಕ ಜಾಲಾತಣಗಳಲ್ಲಿ ವೈರಲ್ ಆಗಿರುವ ಈ ಪ್ರಶ್ನೆಗೆ 30 ಸೆಕೆಂಡ್ ಗಳಲ್ಲಿ ಉತ್ತರ ಹೇಳಿ.
ಸಾಮಾಜಿಕ ಜಾಲಾತಣಗಳಲ್ಲಿ ವೈರಲ್ ಆಗಿರುವ ಈ ಪ್ರಶ್ನೆಗೆ 30 ಸೆಕೆಂಡ್ ಗಳಲ್ಲಿ ಉತ್ತರ ಹೇಳಿ. (X/@brainyquiz_)

ಶಾಲಾ ದಿನಗಳಲ್ಲಿ ಬಹುತೇಕರಿಗೆ ಗಣಿತ ಕಬ್ಬಿಣದ ಕಡಲೆ, ಆದರೆ ಕೆಲವರಿಗೆ ಕಬ್ಬಿನ ಜೆಲ್ಲೆ, ಗಣಿತವನ್ನು ಇಷ್ಟಪಡುವವರಿಗೆ ಇದು ಯಾವಾಗಲೂ ಬೆಲ್ಲದಂತೆ ಕಾಣುತ್ತೆ. ಎಷ್ಟೇ ಪ್ರಯತ್ನಿಸಿದರೂ ಗಣಿತ ಅರ್ಥವಾಗದರಿಗೆ ಸಿರಪ್ ರೀತಿ ಕಹಿ ಎನಿಸುತ್ತೆ. ಜೀವನದಲ್ಲಿ ಲೆಕ್ಕಾಚಾರ ಬಹಳ ಮುಖ್ಯವಾಗಿರುತ್ತದೆ. ಸ್ವಲ್ಪ ಲೆಕ್ಕಾಚಾರ ತಪ್ಪಾದರೂ ಆರ್ಥಿಕ ಸಮಸ್ಥೆಗಳು ಎದುರಾಗೋದು ಗ್ಯಾರಂಟಿ. ಹೀಗಾಗಿ ಪುಸ್ತಕದ ಲೆಕ್ಕಕ್ಕೆ ಆಸಕ್ತಿ ತೋರದಿದ್ದರೂ ಜೀವನದ ಲೆಕ್ಕ ಮಾತ್ರ ಪಕ್ಕಾ ಇರಬೇಕು. ಗಣಿತಕ್ಕೆ ಸಂಬಂಧಿಸಿದಂತೆ ಕೆಲವೊಂದು ಬ್ರೈನ್ ಟೀಸರ್‌ಗಳು, ಫಜಲ್‌ಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಂದನ್ನು ನೋಡೋಕೆ ತುಂಬಾ ಸುಲಭ ಎನಿಸಿದರೆ ಉತ್ತರ ಹೇಳೋದು ಕಷ್ಟ. ಆದರೆ ಸ್ವಲ್ಪ ತಲೆ ಉಪಯೋಗಿಸಿದರೆ ಅಂತಹ ಕಷ್ಟವೇನು ಆಗಲ್ಲ. ಇವುಗಳಿಗೆ ಉತ್ತರ ಕಂಡಕೊಳ್ಳುವುದರ ಮೂಲಕ ಕೆಲವರು ರಜಾ ದಿನವನ್ನು ಮಜಾ ಮಾಡುತ್ತಾರೆ. ಸಮಯವನ್ನು ಕಳೆಯುವುದರ ಜೊತೆಗೆ ತಮ್ಮ ಬ್ರೈನ್ ಎಷ್ಟು ಚುರುಕಾಗಿ ಕೆಲಸ ಮಾಡುತ್ತೆ ಅನ್ನೋದನ್ನು ಆಗಾಗ ಖಾತ್ರಿ ಮಾಡಿಕೊಳ್ಳುತ್ತಾರೆ.

ಮನಸ್ಸನ್ನು ಪ್ರಶ್ನಿಸುವ ಈ ತಮಾಷೆಯ ಒಗಟುಗಳು ಅಥವಾ ಬ್ರೈನ್ ಟೀಸರುಗಳನ್ನು ಅನೇಕರು ಇಷ್ಟಪಡುತ್ತಾರೆ. ನೀವು ಅಂತಹ ಬ್ರೈನ್ ಟೀಸರ್ ಗಳ ಅಭಿಮಾನಿಯಾಗಿದ್ದರೆ, ಇಲ್ಲಿ ನೀಡಲಾಗಿರುವ ಪ್ರಶ್ನೆಗೆ ಉತ್ತರ ಕಂಡು ಹಿಡಿಯಬೇಕು. ಅದು ಕೂಡ ಅತಿ ಕಡಿಮೆ ಸಮಯದಲ್ಲಿ.

ಇತ್ತೀಚೆಗೆ, ಕುತೂಹಲಕಾರಿ ಒಗಟುಗಳಿಗೆ ಹೆಸರುವಾಸಿಯಾದ ಬ್ರೈನಿ ಕ್ವಿಜ್ ಎಂಬ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಆಕರ್ಷಕ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿದೆ. ಟೀಸರ್ ಹೀಗಿದೆ:

"ಐಕ್ಯೂ ಟೆಸ್ಟ್: 4 + 3 = 21, 2 + 5 = 35, 7 + 4 = ??"

ಬ್ರೈನ್ ಟೀಸರ್ ಇಲ್ಲಿದೆ ನೋಡಿ:

ಇಲ್ಲಿ ನೀಡಲಾಗಿರುವ ಪ್ರಶ್ನೆಗೆ ಸಾಂಪ್ರದಾಯಿಕ ಗಣಿತದ ನಿಯಮಗಳು ಅನ್ವಯಿಸುವುದಿಲ್ಲ. ಆದರೆ ಸ್ವಲ್ಪ ಲಾಜಿಕ್ ಬಳಸಿ ನೋಡಿದ್ರೆ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದು. ಈ ಲೆಕ್ಕದ ಪ್ರಶ್ನೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಬ್ರೈನಿ ಕ್ವಿಜ್ ತನ್ನ ಸವಾಲುಗಳೊಂದಿಗೆ ಅಂತರ್ಜಾಲದಲ್ಲಿ ನೆಟ್ಟಿಗರ ಗಮನವನ್ನು ಸೆಳೆಯುತ್ತಿರುವುದು ಇದೇ ಮೊದಲಲ್ಲ. ಈ ಪ್ರಶ್ನೆಗೆ ಕೆಲವರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಉತ್ತರ ಸರಳ ಎಂದರೆ, ಇನ್ನೂ ಕೆಲವರು ತಲೆಯನ್ನು ಕೆರೆದುಕೊಂಡಿದ್ದಾರೆ.

ನೆಟ್ಟಿಗರಿಗೆ ಮತ್ತೊಂದು ಬ್ರೈನ್ ಟೀಸರ್

ಈ ಹಿಂದೆ, ಇದೇ ಖಾತೆಯಿಂದ ಮತ್ತೊಂದು ಬ್ರೈನ್ ಟೀಸರ್ ಅನ್ನು ಗಮನ ಸೆಳೆದಿತ್ತು. ಅದು ಹೀಗಿತ್ತು:

"1 + 3 = 2, 2 + 6 = 4, 3 + 9 = ?"

ಈ ಎರಡೂ ಬ್ರೈನ್ ಟೀಸರ್‌ಗಳು ಗಣಿತವನ್ನು ಸೃಜನಾತ್ಮಕವಾಗಿಸಿವೆ. ಕೂಡುವುದು, ಕಳೆಯುವುದು, ಗುಣಕಾರ ಹಾಗೂ ಭಾಗಾಕಾರದ ತಂತ್ರಗಳನ್ನು ಉಪಯೋಗಿಸಿದರೆ ಮೇಲಿನ ಎರಡೂ ಬ್ರೈನ್ ಟೀಸರ್‌ಗಳಿಗೆ ಸುಲಭವಾಗಿ ಉತ್ತರಗಳನ್ನು ಕಂಡುಕೊಳ್ಳಬಹುದು.

ಬ್ರೈನ್ ಟೀಸರ್ಗಳು ಏಕೆ ವೈರಲ್ ಆಗುತ್ತವೆ?

ಮೆದುಳಿನ ಟೀಸರ್ಗಳು ನಿರಾಕರಿಸಲಾಗದ ಆಕರ್ಷಣೆಯನ್ನು ಹೊಂದಿವೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮದ ವೇಗದ ಜಗತ್ತಿನಲ್ಲಿ ಇವುಗಳು ಮೆದುಳಿಗೆ ಹಗುರವಾದ ಮತ್ತು ಸಂವಾದಾತ್ಮಕ ರೀತಿಯಲ್ಲಿ ಸವಾಲು ಹಾಕುವ ಸಾಮರ್ಥ್ಯ ಹೊಂದಿರುತ್ತವೆ. ನೋಡಿದ ತಕ್ಷಣ ಕುತೂಹಲವನ್ನು ಹೆಚ್ಚಿಸುತ್ತವೆ. ಮತ್ತೊಬ್ಬರಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತವೆ. ಯಾರು ಮೊದಲು ಪರಿಹರಿಸಬಹುದು ಎಂದು ಕೇಳಿದಾಗ ಒಂದು ಕೈ ನೋಡಿಯೇ ಬಿಡೋಣ ಅಂತ ಜನ ಪ್ರಯತ್ನಕ್ಕೆ ಮುಂದಾಗುತ್ತಾರೆ. ಈ ಸ್ಪರ್ಧೆಗೆ ತಮ್ಮ ಸ್ನೇಹಿತರನ್ನೂ ಆಹ್ವಾನಿಸುತ್ತಾರೆ.

 

Whats_app_banner