Brain Teaser: ನಿಮ್ಮ ಕಣ್ಣಿಗೊಂದು ಸವಾಲು, ಚಿತ್ರದಲ್ಲಿ ಯಾವ ನಂಬರ್ ಕಾಣಿಸುತ್ತಿದೆ? 9 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಎಂದರೆ ನಮ್ಮಲ್ಲಿ ಭ್ರಮೆ ಹುಟ್ಟಿಸುವುದು ಮಾತ್ರವಲ್ಲ, ನಮ್ಮ ಕಣ್ಣಿಗೆ ಸವಾಲು ಹಾಕುತ್ತವೆ. ಈ ಚಿತ್ರದಲ್ಲಿ ಯಾವ ನಂಬರ್ ಕಾಣುತ್ತಿದೆ, 9 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ.

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವಿಲಕ್ಷಣವಾಗಿರುತ್ತವೆ, ಅಂದರೆ ನಮ್ಮ ಕಣ್ಣಿಗೆ ಕಂಡಿದ್ದು ಇನ್ನೊಬ್ಬರ ಕಣ್ಣಿಗೆ ಬೇರೆಯದ್ದೇ ರೀತಿ ಕಾಣಿಸುತ್ತದೆ. ಜೊತೆಗೆ ಇದು ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಆ ಕಾರಣಕ್ಕೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತದೆ.
ಸವಾಲು ಹಾಕುವಂತಿದ್ದರೂ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನೆಟ್ಟಿಗರಿಗೆ ತುಂಬಾನೇ ಇಷ್ಟವಾಗುತ್ತದೆ. ಇದರಿಂದ ಮೋಜು ಸಿಗುತ್ತದೆ. ಜೊತೆಗೆ ಇದು ನಮ್ಮ ಬುದ್ಧಿಯನ್ನು ಚುರುಕು ಮಾಡುತ್ತದೆ. ಮಾತ್ರವಲ್ಲ ನಮ್ಮ ಯೋಚನಾಶಕ್ತಿಯನ್ನೂ ವೃದ್ಧಿಸುತ್ತದೆ. ಇಂದಿನ ಬ್ರೈನ್ ಟೀಸರ್‌ನಲ್ಲಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ಕಣ್ಣೇ ನಿಮಗೆ ಮೋಸ ಮಾಡುವಂತೆ ಮಾಡುವುದು ಸುಳ್ಳಲ್ಲ.
ಬ್ರೈನ್ ಟೀಸರ್‌ನಲ್ಲಿ ಏನಿದೆ?
ಇಂದಿನ ಬ್ರೈನ್ ಟೀಸರ್‌ನಲ್ಲಿ ಹಸಿರು ಬಣ್ಣದ ಒಂದು ಚಿತ್ರವಿದೆ. ಅದರಲ್ಲಿ ಕೆಲವು ನಂಬರ್‌ಗಳನ್ನು ಬರೆಯಲಾಗಿದೆ. ಆ ನಂಬರ್‌ಗಳು ಮೇಲ್ನೋಟಕ್ಕೆ ಕಾಣಿಸಲು ಸಾಧ್ಯವಿಲ್ಲ, ಸೂಕ್ಷ್ಮವಾಗಿ ನೋಡಿದಾಗ ನಂಬರ್ ಕಾಣಿಸುತ್ತದೆ. ಆದರೆ ಅಲ್ಲೂ ಒಂದು ಟ್ವಿಸ್ಟ್ ಇದೆ. ಏನೆಂದರೆ ಸೂಕ್ಷ್ಮವಾಗಿ ಕಂಡಾಗ ಕಾಣಿಸುವ ನಂಬರ್ ಒಮ್ಮೆ ಒಂದು ಕಂಡರೆ ಇನ್ನೊಮ್ಮೆ ಬೇರೆಯದೇ ಆಗಿ ಕಾಣಿಸುತ್ತದೆ. ಆದರೂ ಇದನ್ನು ಗಮನಿಸಿ 9 ಸೆಕೆಂಡ್ ಒಳಗೆ ಸರಿ ಉತ್ತರ ಹೇಳುವುದು ನಿಮಗಿರುವ ಸವಾಲು.
Brainy Bits Hub ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಈಗ ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಸಾಕಷ್ಟು ಜನ ಇದಕ್ಕೆ ಉತ್ತರ ಕಂಡು ಹಿಡಿಯಲು ಸಾಧ್ಯವಾಗದೇ ತಲೆ ಕೆಡಿಸಿಕೊಂಡಿದ್ದಾರೆ. ನಿಮಗೆ ಇದಕ್ಕೆ ಸರಿ ಉತ್ತರ ಕಂಡುಹಿಡಿಯಲು ಸಾಧ್ಯವಾದರೇ ಇದನ್ನು ನಿಮ್ಮ ಸ್ನೇಹಿತರು, ಆತ್ಮೀಯರೊಂದಿಗೂ ಹಂಚಿಕೊಳ್ಳಿ. ಅವರಿಂದ ಸರಿ ಉತ್ತರ ಕಂಡುಹಿಡಿಯಲು ಸಾಧ್ಯವಾಗುವುದೇ ಎಂಬುದನ್ನು ಪರಿಶೀಲನೆ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಇದ್ರೆ ಚಿತ್ರದಲ್ಲಿ ಬೆಕ್ಕು ಎಲ್ಲಿ ಅವಿತಿದೆ ಹುಡುಕಿ, ನಿಮಗಿರೋದು 10 ಸೆಕೆಂಡ್ ಸಮಯ
ಇಲ್ಲೊಂದು ಬ್ಲರ್ ಆಗಿರುವ ಚಿತ್ರವಿದೆ. ಈ ಚಿತ್ರದಲ್ಲಿ ನೋಡೋಕೆ ಟೈಲ್ಸ್ ಹಾಗೂ ಒಂದೆರಡು ಕಂಬಗಳು ಮಾತ್ರ ಕಾಣಿಸುತ್ತಿವೆ. ಆದರೆ ಇದರಲ್ಲಿ ಒಂದು ಬೆಕ್ಕು ಅಡಗಿದೆ. ಆ ಬೆಕ್ಕು ಎಲ್ಲಿದೆ ಒಂದು ನೀವು ಕಂಡುಹಿಡಿಯಬೇಕು. ನಿಮಗಿರೋದು 10 ಸೆಕೆಂಡ್ ಸಮಯ.
Brain Teaser: ಗಣಿತದಲ್ಲಿ ಪಂಟರಾದ್ರೆ ನಿಮಗಾಗಿ ಇಲ್ಲೊಂದು ಸವಾಲಿದೆ, ಈ ಪ್ರಶ್ನೆಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕಾಗುತ್ತಾ ಟ್ರೈ ಮಾಡಿ
ಗಣಿತದ ಪಜಲ್‌ಗಳು ಮೆದುಳಿಗೆ ಹುಳ ಬಿಡದೇ ಇರಲು ಸಾಧ್ಯವಿಲ್ಲ. ಗಣಿತದಲ್ಲಿ ಎಕ್ಸ್‌ಪರ್ಟ್ ಆದ್ರೂ ಈ ಪ್ರಶ್ನೆಗಳು ನಿಮಗೆ ಸವಾಲು ಹಾಕದೇ ಇರುವುದಿಲ್ಲ. ಅಂತಹ ಪ್ರಶ್ನೆಯೊಂದು ಇದೀಗ ಎಕ್ಸ್‌ನಲ್ಲಿ ವೈರಲ್ ಆಗಿದೆ. ಇದಕ್ಕೆ ಉತ್ತರ ಕಂಡುಹಿಡಿಯಲು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ನೀವು ಉತ್ತರ ಹೇಳಲು ಟ್ರೈ ಮಾಡಿ.
