Brain Teaser: 61=14, 62=16 ಆದ್ರೆ 66= ಎಷ್ಟು? ಗಣಿತ ಎಕ್ಸ್‌ಪರ್ಟ್‌ ನೀವಾದ್ರೆ ಈ ಪ್ರಶ್ನೆಗೆ 9 ಸೆಕೆಂಡ್‌ ಒಳಗೆ ಸರಿ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 61=14, 62=16 ಆದ್ರೆ 66= ಎಷ್ಟು? ಗಣಿತ ಎಕ್ಸ್‌ಪರ್ಟ್‌ ನೀವಾದ್ರೆ ಈ ಪ್ರಶ್ನೆಗೆ 9 ಸೆಕೆಂಡ್‌ ಒಳಗೆ ಸರಿ ಉತ್ತರ ಹೇಳಿ

Brain Teaser: 61=14, 62=16 ಆದ್ರೆ 66= ಎಷ್ಟು? ಗಣಿತ ಎಕ್ಸ್‌ಪರ್ಟ್‌ ನೀವಾದ್ರೆ ಈ ಪ್ರಶ್ನೆಗೆ 9 ಸೆಕೆಂಡ್‌ ಒಳಗೆ ಸರಿ ಉತ್ತರ ಹೇಳಿ

ಇಲ್ಲೊಂದು ಗಣಿತದ ಪಜಲ್ ಇದೆ, ಪಜಲ್‌ನ ಪ್ರಶ್ನೆಯಷ್ಟೇ ಉತ್ತರವೂ ಸುಲಭವಿದೆ. ಆದರೂ ಇದಕ್ಕೆ ಸರಿ ಉತ್ತರವನ್ನು ಕೇವಲ 9 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಅದು ನಿಮಗೆ ಸಾಧ್ಯವಾದರೆ ಖಂಡಿತ ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಎಂದರ್ಥ. ಇನ್ಯಾಕೆ ತಡ ನಿಮ್ಮ ಸಮಯ ಈಗ ಶುರು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಗಣಿತದ ಬಗ್ಗೆ ಶಾಲಾ ದಿನಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ಭಾವನೆ. ಕೆಲವರಿಗೆ ಗಣಿತ ಇಷ್ಟದ ವಿಷಯವಾದ್ರೆ ಇನ್ನೂ ಕೆಲವರಿಗೆ ಗಣಿತ ಕಬ್ಬಿಣದ ಕಡಲೆ. ಗಣಿತದ ಸೂತ್ರ, ಪ್ರಮೇಯಗಳನ್ನು ಬಿಡಿಸುವುದನ್ನು ಕೆಲವರು ಎಂಜಾಯ್ ಮಾಡಿದ್ರೆ, ಕೆಲವರು ಇದನ್ನು ಶಿಕ್ಷೆ ಅಂದುಕೊಳ್ಳುತ್ತಾರೆ. ಗಣಿತದ ಪಜಲ್‌ಗಳು ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಇದಕ್ಕೆ ಉತ್ತರ ಕಂಡುಹಿಡಿಯಲು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ.

ಇಂದಿನ ಬ್ರೈನ್ ಟೀಸರ್‌ನ ಪ್ರಶ್ನೆ ತುಂಬಾನೇ ಸರಳವಾಗಿದೆ, ಇದರ ಉತ್ತರವೂ ಕೂಡ ಸರಳ. ಆದರೆ ಇದಕ್ಕೆ ಕೇವಲ 9 ಸೆಕೆಂಡ್‌ ಒಳಗೆ ಸರಿಯಾದ ಉತ್ತರ ಕಂಡುಹಿಡಿಯುವುದು ನಿಮಗಿರುವ ಸವಾಲು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಗಣಿತದ ಪಜಲ್‌ ಇರುವ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ. ಇವು ನಮಗೆ ಮೋಜು ನೀಡುವ ಜೊತೆಗೆ ನಮ್ಮ ಬುದ್ಧಿವಂತಿಕೆಯನ್ನು ಖರ್ಚು ಮಾಡಲು ಒಂದಿಷ್ಟು ಅವಕಾಶವನ್ನು ಒದಗಿಸುತ್ತವೆ. ಇದಕ್ಕೆ ಉತ್ತರ ಕಂಡುಹಿಡಿಯುವ ಸಲುವಾಗಿ ನಾವು ಸಾಕಷ್ಟು ಯೋಚಿಸಬೇಕಾಗುತ್ತದೆ. ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ.

ಈ ಬ್ರೈನ್ ಟೀಸರ್ ಅನ್ನು Brainy Quiz ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಪುಟದಲ್ಲಿ ಇಂತಹ ಹಲವಾರು ಬ್ರೈನ್ ಟೀಸರ್‌ಗಳನ್ನು ನೀವು ನೋಡಬಹುದು. ಇದರಲ್ಲಿರುವ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳಲು ನೀವು ಮೆದುಳಿಗೆ ಕೆಲಸ ಕೊಡಬೇಕಾಗುತ್ತೆ ಅನ್ನೋದು ಸುಳ್ಳಲ್ಲ. ಆದರೂ ಇದರಿಂದ ಸಖತ್ ಮಜಾ ಸಿಗುತ್ತೆ. ಸರಿ ಹಾಗಾದ್ರೆ 9 ಸೆಕೆಂಡ್‌ ಒಳಗೆ 66 = ಎಷ್ಟು ಎಂದು ಕಂಡುಹಿಡಿಯಲು ನಿಮಗೆ ಸಾಧ್ಯವೇ ನೋಡಿ.

ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವಾದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೂ ಕಳುಹಿಸಿ. ಅವರಿಂದ ಇದಕ್ಕೆ ಯವ ಉತ್ತರ ಬರುತ್ತದೆ ಎಂಬುದನ್ನು ನಿರೀಕ್ಷಿಸಿ. ಅವರೆಷ್ಟು ಬುದ್ಧಿವಂತರು ಎಂಬುದನ್ನು ಪರೀಕ್ಷೆ ಮಾಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: 2=8, 4=24 ಆದ್ರೆ 6= ಎಷ್ಟು? ಭಾನುವಾರದ ಹೊತ್ತು ಮೆದುಳಿಗೆ ಚೂರು ಕೆಲಸ ಕೊಡಿ, ಸರಿ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನೆಟ್ಟಿಗರ ಮೆದುಳಿಗೆ ಹುಳ ಬಿಟ್ಟಿದೆ. ಇದಕ್ಕೆ ಉತ್ತರ ಎಷ್ಟಿರಬಹುದು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಹಾಗಾದರೆ ಇಲ್ಲಿರುವ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನ ಮಾಡಿ, ಭಾನುವಾರದ ಹೊತ್ತು ಮೆದುಳಿಗೆ ಸ್ವಲ್ಪ ಕೆಲಸ ಕೊಡಿ.

Brain Teaser: ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ, 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ ಅನ್ನೋದು ಪ್ರಶ್ನೆಯಾಗಿದೆ. ಇದಕ್ಕೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

Whats_app_banner