Brain Teaser: 2=8, 4=24 ಆದ್ರೆ 6= ಎಷ್ಟು? ಭಾನುವಾರದ ಹೊತ್ತು ಮೆದುಳಿಗೆ ಚೂರು ಕೆಲಸ ಕೊಡಿ, ಸರಿ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 2=8, 4=24 ಆದ್ರೆ 6= ಎಷ್ಟು? ಭಾನುವಾರದ ಹೊತ್ತು ಮೆದುಳಿಗೆ ಚೂರು ಕೆಲಸ ಕೊಡಿ, ಸರಿ ಉತ್ತರ ಹೇಳಿ

Brain Teaser: 2=8, 4=24 ಆದ್ರೆ 6= ಎಷ್ಟು? ಭಾನುವಾರದ ಹೊತ್ತು ಮೆದುಳಿಗೆ ಚೂರು ಕೆಲಸ ಕೊಡಿ, ಸರಿ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನೆಟ್ಟಿಗರ ಮೆದುಳಿಗೆ ಹುಳ ಬಿಟ್ಟಿದೆ. ಇದಕ್ಕೆ ಉತ್ತರ ಎಷ್ಟಿರಬಹುದು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಹಾಗಾದರೆ ಇಲ್ಲಿರುವ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನ ಮಾಡಿ, ಭಾನುವಾರದ ಹೊತ್ತು ಮೆದುಳಿಗೆ ಸ್ವಲ್ಪ ಕೆಲಸ ಕೊಡಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಗಣಿತ ಕೆಲವರಿಗೆ ಕಬ್ಬಿಣದ ಕಡಲೆ, ಎಷ್ಟೇ ಪ್ರಯತ್ನ ಪಟ್ಟರೂ ಲೆಕ್ಕ ತಲೆಗೆ ಹೋಗುವುದಿಲ್ಲ, ಆದ್ರೆ ಕೆಲವರಿಗೆ ಇದು ತುಂಬಾನೇ ಸುಲಭದ ವಿಷಯ. ಎಂತಹ ಟ್ರಿಕ್ಕಿ ಪ್ರಶ್ನೆ ಇದ್ರೂ ಥಟ್ ಅಂತ ಉತ್ತರ ಹೇಳ್ತಾರೆ, ಇದ್ರಲ್ಲಿ ನೀವು ಯಾವ ಕ್ಯಾಟಗರಿಗೆ ಸೇರುತ್ತೀರಾ, ಯಾಕಂದ್ರೆ ಇಲ್ಲಿ ಒಂದು ಗಣಿತದ ಪಜಲ್‌ ಇದೆ. ಇದು ನೋಡಲು ಸುಲಭವಾಗಿ ಕಂಡರೂ ಉತ್ತರ ಹೇಳುವುದು ಕಷ್ಟ.

ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ ಹಲವು ನೆಟ್ಟಿಗರ ಮೆದುಳಿಗೆ ಹುಳ ಬಿಟ್ಟಿದೆ. 6 = ಎಷ್ಟು ಎಂದು ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು. ಭಾನುವಾರದ ಹೊತ್ತು ಖಾಲಿ ಕೂತು ಬೇಸರವಾಗಿದ್ರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಈಗಾಗಲೇ ಹಲವು ಎಕ್ಸ್ ಬಳಕೆದಾರರು ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಸಲುವಾಗಿ ತಲೆ ಕೆಡಿಸಿಕೊಂಡಿದ್ದಾರಂತೆ.

Brainy Quiz ಎಂಬ ಎಕ್ಸ್‌ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಇದಾಗಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಅನ್ನು ವೀಕ್ಷಿಸಿದ್ದಾರೆ. ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆ ಹೀಗಿದೆ. 2 = 8, 3 = 15, 4 = 24, 6 = ಎಷ್ಟು?.

ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. 200ಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ. ಕೆಲವರ ಕಾಮೆಂಟ್‌ಗಳಂತೂ ಸಖತ್ ಮಜಾ ನೀಡುವಂತಿದೆ.

‘ಈ ಬ್ರೈನ್ ಟೀಸರ್ ಪ್ರಶ್ನೆಗೆ ಉತ್ತರ 35‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಗಣಿತ ಖಂಡಿತ ನನ್ನ ವ್ಯಾಪ್ತಿಗೆ ಬರುವುದಿಲ್ಲ, ನಾನು ಅದರ ವ್ಯಾಪ್ತಿಗೆ ಹೋಗುವುದಿಲ್ಲ. ನಮ್ಮಿಬ್ಬರ ನಡುವೆ ಅಂಡರ್‌ಸ್ಟ್ಯಾಂಡಿಂಗ್‌ ಇದೆ‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡುವ ಮೂಲಕ ತಮಾಷೆ ಮಾಡಿದ್ದಾರೆ. ‘ಇನ್ನೊಬ್ಬರು ಇದಕ್ಕೆ ಉತ್ತರ 42, ಈ ‍ಪ್ರಶ್ನೆ ಸ್ಪಷ್ಟವಾಗಿದೆ‘ ಎಂದು ಕಾಮೆಂಟ್ ಮಾಡಿದ್ದಾರೆ. ‘ನಾನು ಬಿಟ್ಟು ಕೊಡುತ್ತೇನೆ, ಪಜಲ್‌ ಮಜಾ ಇರುತ್ತೆ ನಿಜ, ಆದರೆ ತಲೆ ಹಾಳು ಮಾಡುತ್ತೆ ಅನ್ನೋದು ಸುಳ್ಳಲ್ಲ‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಇದಕ್ಕೆ ಉತ್ತರ ಕಾಫಿ, ಯಾಕೆಂದ್ರೆ ನಾನು ತಲೆನೋವಾದಾಗೆಲ್ಲ ಕಾಫಿ ಕುಡಿತೀನಿ‘ ಎಂದು ಇನ್ನೊಬ್ಬರು ಮಜವಾಗಿ ಕಾಮೆಂಟ್ ಮಾಡಿದ್ದಾರೆ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ನನಗೆ ಬೆಕ್ಕಿನಂತೆ ತಲೆ, ಪಾದವಿದೆ, ಆದರೆ ಬೆಕ್ಕಲ್ಲ; ಹಾಗಾದರೆ ನಾನ್ಯಾರು? ಥಟ್‌ ಅಂತ ಉತ್ತರ ಹೇಳಿ

ಇಲ್ಲೊಂದು ಸಖತ್‌ ಇಂಟ್ರೆಸ್ಟಿಂಗ್‌ ಆಗಿರೋ ಪ್ರಶ್ನೆ ಇದೆ. ಈ ಪ್ರಶ್ನೆ ಕೇಳೋಕೆ ಮಜಾ ಇದೆ. ಹಾಗಂತ ಉತ್ತರ ಹೇಳೋದು ಖಂಡಿತ ಸುಲಭವಲ್ಲ. ಯಾಕಂದ್ರೆ ಇದು ನಿಮ್ಮ ಮೆದುಳಿಗೆ ಹುಳ ಬಿಡುತ್ತೆ. ಪಾದ, ತಲೆ ಬೆಕ್ಕಿನಂತೆ ಕಂಡ್ರೂ ಇಲ್ಲಿರೋದು ಬೆಕ್ಕಲ್ಲ, ಹಾಗಾದ್ರೆ ಏನದು ಎಂಬುದನ್ನು ನೀವು ಕಂಡುಹಿಡಿಯಬೇಕು.

Brain Teaser: ಶೇ 99ರಷ್ಟು ಮಂದಿಗೆ ಸಾಧ್ಯವಾಗದ ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ; 8*8 ಎಷ್ಟು?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದಕ್ಕೆ ಶೇ 99 ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗಿಲ್ಲ. ಇಲ್ಲಿರುವುದು ಸುಲಭ ಗಣಿತವಾದ್ರೂ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. 8*8 ಎಷ್ಟು ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು. ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪರೀಕ್ಷಿಸಿ.

Whats_app_banner