Brain Teaser: 11+11=4, 13+13=8 ಆದರೆ 14+14= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಈ ಪ್ರಶ್ನೆಗೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದಕ್ಕೆ 950ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಇಲ್ಲಿರುವ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ನೋಡಿ. ನಿಮಗಿರೋದು ಕೇವಲ 20 ಸೆಕೆಂಡ್ ಸಮಯ. ನಿಮ್ಮ ಸಮಯ ಈಗ ಶುರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್ ಟೀಸರ್ ಹುಡುಕುವವರ ಪ್ರಮಾಣ ಹೆಚ್ಚಾಗಿದೆ. ಇದರಲ್ಲಿರುವ ಬ್ರೈನ್ ಟೀಸರ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಮೆದುಳಿಗೆ ಹುಳ ಬಿಡುವಂತಿರುತ್ತವೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಮೂಲಕ ನಾವು ತಮ್ಮ ಬುದ್ಧಿವಂತಿಕೆಯನ್ನು ಸಾಬೀತು ಪಡಿಸಬಹುದು. ಬ್ರೈನ್ ಟೀಸರ್‌ಗಳು ಹಲವರಿಗೆ ಟೈಮ್‌ಪಾಸ್‌ಗೆ ಹೇಳಿ ಮಾಡಿಸಿದ್ದು ಎಂಬುದು ಸುಳ್ಳಲ್ಲ.
ಬ್ರೈನ್ ಟೀಸರ್‌ನಲ್ಲಿರುವ ಗಣಿತದ ಪಜಲ್‌ಗಳು ನಮ್ಮ ಗಣಿತ ಜ್ಞಾನವನ್ನು ಹೆಚ್ಚಿಸುತ್ತವೆ. ನಮ್ಮಲ್ಲಿರುವ ಬುದ್ಧಿವಂತಿಕೆಗೆ ಸವಾಲು ಎಸೆಯುತ್ತವೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ. ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವವರೆಗೆ ಮೆದುಳು ಸುಮ್ಮನಿರುವುದಿಲ್ಲ. ಇವತ್ತು ಭಾನುವಾರ ಮನೆಯಲ್ಲೇ ಕುಳಿತ ಬೇಸರವಾಗಿದ್ರೆ ಈ ಬ್ರೈನ್ ಟೀಸರ್ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿ. ಇದಕ್ಕೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯವಾದರೇ ಇದನ್ನು ನಿಮ್ಮ ಸ್ನೇಹಿತರು ಆತ್ಮೀಯರಿಗೂ ಕಳುಹಿಸಿ ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ.
ಬ್ರೈನ್ ಟೀಸರ್‌ನಲ್ಲಿ ಏನಿದೆ?
Brainy Quiz ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಇದಾಗಿದೆ. ಇದರಲ್ಲಿ ಇರುವುದು ಕೂಡಿಸುವ ಲೆಕ್ಕಾಚಾರ. ಹಾಗಂತ ಇಲ್ಲಿ 11+11= 22 ಆಗುವುದಿಲ್ಲ. ಬದಲಾಗಿ 11+11=4 ಆಗುತ್ತದೆ. ‘11 + 11 = 4, 12 + 12 = 6, 13 + 13 = 8 ಆದರೆ 14 + 14 = ಎಷ್ಟು ಎಂದು ಕಂಡುಹಿಡಿಯಬೇಕು.
ಡಿಸೆಂಬ್ 20 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 18 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 950ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಈ ಬ್ರೈನ್ ಟೀಸರ್‌ಗೆ ಬಹುತೇಕರು ಉತ್ತರ 10 ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು 12, ಕೆಲವರು 5 ಎಂದು ಕೂಡ ತಿಳಿಸಿದ್ದಾರೆ. ಹಾಗಾದರೆ ಇದಕ್ಕೆ ನಿಮ್ಮ ಉತ್ತರವೇನು?
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 1+3=2, 2+6=4 ಆದ್ರೆ 3+9= ಎಷ್ಟು; ಗಣಿತ ಪ್ರೇಮಿ ನೀವಾದ್ರೆ 15 ಸೆಕೆಂಡ್ ಒಳಗೆ ಉತ್ತರ ಹೇಳಿ
ನೀವು ತುಂಬಾನೇ ಬುದ್ಧಿವಂತರು ಎಂಬ ಬಿರುದು ಪಡೆದಿದ್ದೀರಾ, ಗಣಿತದಲ್ಲಿ ನಿಮ್ಮನ್ನು ಮೀರಿಸುವವರಿಲ್ವಾ? ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿರುವ ಗಣಿತದ ಪಜಲ್‌ಗೆ ನೀವು 15 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಇದು ನಿಮ್ಮ ಬುದ್ಧಿವಂತಿಕೆಗೆ ಸವಾಲ್ ಅಷ್ಟೆ.
Brain Teaser: 20 ವರ್ಷಗಳ ನಂತರ ಗುಂಡನ ವಯಸ್ಸು ಎಷ್ಟಾಗುತ್ತೆ; ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ನಿಮ್ಮ ಉತ್ತರವೇನು?
ಇಂದಿನ ಬ್ರೈನ್ ಟೀಸರ್ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮ ಐಕ್ಯೂ ಲೆವೆಲ್ ಜಾಸ್ತಿ ಇರಬೇಕು. ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ವರ್ಷದ ನಂತರ ಗುಂಡನ ವಯಸ್ಸು ಎಷ್ಟಾಗುತ್ತದೆ ಎಂಬುದನ್ನು ಕಂಡುಹಿಡಿಯಿರಿ.
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.