Brain Teaser: ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ, 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ ಅನ್ನೋದು ಪ್ರಶ್ನೆಯಾಗಿದೆ. ಇದಕ್ಕೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.
![ಬ್ರೈನ್ ಟೀಸರ್ ಬ್ರೈನ್ ಟೀಸರ್](https://images.hindustantimes.com/kannada/img/2025/01/06/550x309/Brain_Teaser_1736142580302_1736142586575.png)
ಬ್ರೈನ್ ಟೀಸರ್‌ಗಳು ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇವು ನಮ್ಮ ಮನಸ್ಸಿನಲ್ಲಿ ಕುತೂಹಲ ಹುಟ್ಟುಹಾಕುತ್ತವೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತವೆ. ಇತ್ತೀಚೆಗೆ ಹಲವರು ಬ್ರೈನ್ ಟೀಸರ್‌ಗೆ ಅಭಿಮಾನಿಗಳಾಗುತ್ತಿದ್ದಾರೆ. ಯಾಕೆಂದರೆ ಇದು ಟೈಮ್‌ಪಾಸ್‌ಗೆ ಹೇಳಿ ಮಾಡಿಸಿದ್ದು. ಅಲ್ಲದೇ ಇದು ನಮ್ಮ ಮೆದುಳನ್ನು ಚುರುಕಾಗಿಸುತ್ತದೆ. ಸ್ನೇಹಿತರ ಜೊತೆ ಶೇರ್ ಮಾಡಿ, ಅವರ ತಲೆಗೂ ಹುಳ ಬಿಡಬಹುದು.
ನೀವು ನಿಜಕ್ಕೂ ಬ್ರೈನ್ ಟೀಸರ್ ಪ್ರೇಮಿಯಾಗಿದ್ದರೆ ನಿಮಗಾಗಿ ಇಲ್ಲೊಂದು ಟ್ರಿಕ್ಕಿ ಪ್ರಶ್ನೆ ಇದೆ. Brainy Bits Hub ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಇದಾಗಿದೆ. ಈ ಪ್ರಶ್ನೆ ಈಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ತಲೆಗೆ ಹುಳ ಬಿಟ್ಟಿರುವುದು ಸುಳ್ಳಲ್ಲ. ಶೇ 5 ಮಂದಿಗಷ್ಟೇ ಸರಿಯಾದ ಉತ್ತರ ಹೇಳಲು ಸಾಧ್ಯವಾಗಿದ್ದು, ಉಳಿದ ಶೇ 95 ರಷ್ಟು ಮಂದಿ ಸರಿಯಾದ ಉತ್ತರ ಹೇಳಲು ಸಾಧ್ಯವಾಗದೇ ತಲೆ ಕೆಡಿಸಿಕೊಂಡಿದ್ದಾರೆ. ಈ ಪ್ರಶ್ನೆ ಕೂಡ ಟ್ರಿಕ್ಕಿಯಾಗಿದೆ. ಇದಕ್ಕೆ ಉತ್ತರ ಹೇಳಲು ಖಂಡಿತ ನೀವು ಸಾಕಷ್ಟು ಯೋಚನೆ ಮಾಡಬೇಕು.
ಇಂದಿನ ಬ್ರೈನ್ ಟೀಸರ್‌ನ ಪ್ರಶ್ನೆ ಹೀಗಿದೆ. ‘ಇಂದು ಮಂಗಳವಾರವಾದ್ರೆ ಮುಂದಿನ 53 ದಿನಗಳ ನಂತರ ಈ ದಿನ ಯಾವ ದಿನವಾಗಿರುತ್ತದೆ? ಎಂಬುದಾಗಿದೆ. ಇದಕ್ಕೆ ನೀವು 15 ಸೆಕೆಂಡ್ ಒಳಗೆ ಸರಿಯಾದ ಉತ್ತರ ಕೊಡಬೇಕು. ಆಗ ಖಂಡಿತ ನಿಮ್ಮ ಐಕ್ಯೂ ಲೆವೆಲ್ ಹೈ ಇದೆ ಅಂತ ಅರ್ಥ. ಸರಿಯಾಗಿ ಯೋಚಿಸಿ, 15 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಸಾಧ್ಯವಾಗುತ್ತಾ ಟ್ರೈ ಮಾಡಿ.
ಈ ಪ್ರಶ್ನೆಗೆ ನಿಮಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಯ್ತು ಎಂದಾದರೆ ತಡ ಮಾಡಬೇಡಿ. ಇದನ್ನು ನಿಮ್ಮ ಸ್ಮೇಹಿತರು, ಆತ್ಮೀಯರಿಗೂ ಕಳುಹಿಸಿ. ಅವರಿಂದ ಸರಿಯಾದ ಉತ್ತರ ಏನು ಬರುತ್ತದೆ ಎಂಬುದನ್ನು ಕಂಡುಕೊಳ್ಳಿ, ಅವರ ಬುದ್ಧಿವಂತಿಕೆಯನ್ನೂ ಪರೀಕ್ಷಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಚುರುಕಾಗಿದ್ರೆ ಈ ಚಿತ್ರದಲ್ಲಿರುವ ನಂಬರ್ ಯಾವುದು ಹೇಳಿ, ನಿಮಗಿರೋದು 10 ಸೆಕೆಂಡ್ ಸಮಯ
ಇಂದಿನ ಬ್ರೈನ್ ಟೀಸರ್ ಚಿತ್ರವು ನಿಮಗೆ ತಲೆನೋವು ತರಿಸಬಹುದು.ಯಾಕೆಂದರೆ ಈ ಚಿತ್ರವನ್ನು ನೋಡುತ್ತಲೇ ಇದ್ದರೆ ತಲೆನೋವು ಬರೋದು ಖಂಡಿತ. ಹಾಗಂತ ನೋಡದೇ ಇದ್ದರೆ ಚಿತ್ರದಲ್ಲಿರುವ ನಂಬರ್ ಕಂಡುಹಿಡಿಯಲು ಸಾಧ್ಯವಿಲ್ಲ. ಕೇವಲ 10 ಸೆಕೆಂಡ್‌ನಲ್ಲಿ ಇಲ್ಲಿರುವ ಆಪ್ಟಿಕಲ್ ಇಲ್ಯೂಷನ್ ನಂಬರ್ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು…
Brain Teaser: ಚಿತ್ರದಲ್ಲಿರುವ ಮಹಿಳೆ ಗಂಡನನ್ನು ಹುಡುಕುತ್ತಿದ್ದಾಳೆ, ಅವಳ ಗಂಡ ಎಲ್ಲಿದ್ದಾನೆ? ಪತ್ತೆ ಮಾಡಲು ನಿಮ್ಮಿಂದ ಸಾಧ್ಯವೇ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ನಿಮಗೆ ಚಾಲೆಂಜ್ ಮಾಡುತ್ತಿದೆ. ಈ ಚಿತ್ರದಲ್ಲಿ ಹಸುವನ್ನು ಹಿಡಿದು ನಿಂತಿರುವ ಈ ಮಹಿಳೆ ತನ್ನ ಗಂಡನನ್ನು ಹುಡುಕುತ್ತಿದ್ದಾಳೆ. ಅವಳ ಗಂಡ ಎಲ್ಲಿದ್ದಾನೆ, ಅವನನ್ನು ಹುಡುಕಲು ನೀವು ಸಹಾಯ ಮಾಡಿ.
![Whats_app_banner Whats_app_banner](https://kannada.hindustantimes.com/static-content/1y/wBanner.png)