Brain Teaser: 9=54, 8=40, 6=18 ಆದರೆ 4= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್ ನೀವಾದ್ರೆ 9 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 9=54, 8=40, 6=18 ಆದರೆ 4= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್ ನೀವಾದ್ರೆ 9 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ

Brain Teaser: 9=54, 8=40, 6=18 ಆದರೆ 4= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್ ನೀವಾದ್ರೆ 9 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ

Math Puzzle: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಗಣಿತದ ಪಜಲ್‌ಗೆ ಸರಿ ಉತ್ತರ ಕಂಡುಹಿಡಿಯಲು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಇದಕ್ಕೆ 9 ಸೆಕೆಂಡ್‌ನಲ್ಲಿ ಉತ್ತರ ಹೇಳಲು ಸಾಧ್ಯವೇ ನೋಡಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

Brain Teaser: ಬ್ರೈನ್ ಟೀಸರ್‌ಗಳು ಮೆದುಳಿಗೆ ಹುಳ ಬಿಡದೇ ಇರಲು ಸಾಧ್ಯವಿಲ್ಲ. ಅದರಲ್ಲೂ ಗಣಿತದ ಪಜಲ್‌ಗಳು ಖಂಡಿತ ನಿಮ್ಮ ಮೆದುಳಿಗೆ ಸವಾಲು ಹಾಕುವಂತೆ ಇರುತ್ತವೆ. ಇವು ನಮ್ಮಲ್ಲಿ ಸೃಜನಾತ್ಮಕ ಯೋಚನೆಗಳು ವೃದ್ಧಿಯಾಗುವಂತೆ ಮಾಡುತ್ತವೆ. ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನೂ ಬೆಳೆಸುತ್ತವೆ. ಹಾಗಂತ ನೀವು ಇದಕ್ಕೆ ಉತ್ತರ ಕಂಡುಕೊಳ್ಳಲು ಮೆದುಳು ಕೆರೆದುಕೊಳ್ಳದೇ ಇರಲು ಕೂಡ ಸಾಧ್ಯವಿಲ್ಲ.

ಪ್ರಶ್ನೆಯನ್ನು ಚಿತ್ರದಲ್ಲಿ ಕಂಡಾದ ಇದೇನು, ಮಹಾ, ಇದಕ್ಕೆ ಉತ್ತರ ಕಂಡುಹಿಡಿಯುವುದು ಖಂಡಿತ ದೊಡ್ಡ ಕೆಲಸವೇನಲ್ಲ ಎಂದು ಅನ್ನಿಸುವುದು ಸಹಜ. ಆದರೆ ಉತ್ತರ ಹುಡುಕುತ್ತಾ ಹೊರಟಾಗ ನಿಜವಾಗಿಯೂ ಅದು ನಮಗೆ ಟ್ರಿಕ್ಕಿ ಎನ್ನಿಸುತ್ತದೆ. ಮಾತ್ರವಲ್ಲ ನೀಡಿರುವ ಸಮಯದಲ್ಲಿ ಉತ್ತರ ಕಂಡುಹಿಡಿಯವುದು ಸುಲಭವೇನಲ್ಲ. ಗಣಿತದ ಪಜಲ್‌ಗಳು ಬ್ರೈನ್ ಟೀಸರ್‌ನಲ್ಲಿ ಹೆಚ್ಚು ಟ್ರಿಕ್ಕಿ ಎನ್ನಿಸುವಂತೆ ಇರುವಂತೆ, ಗಣಿತದಲ್ಲಿ ಎಕ್ಸ್‌ಪರ್ಟ್ ಆದ್ರೂ ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡುಹಿಡಿಯಲು ಹಿಂದೆ ಮುಂದೆ ನೋಡಬೇಕಾಗುತ್ತದೆ.

‌ Brainy Quiz ಎನ್ನುವ ಎಕ್ಸ್‌ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್‌ ಚಿತ್ರವೊಂದು ಇಲ್ಲಿದೆ. ಇದು ಹಲವು ಬ್ರೈನ್ ಟೀಸರ್ ಪ್ರಿಯರ ಗಮನ ಸೆಳೆದಿದೆ. ಈ ಬ್ರೈನ್ ಟೀಸರ್‌ನಲ್ಲಿ ಗಣಿತದ ಪಜಲ್‌ನ ಪ್ರಶ್ನೆ ಹೀಗಿದೆ. ‘9 = 54, 8 = 40, 7 = 28, 6 = 18, 4 = ಎಷ್ಟು ಎಂಬುದು ಪ್ರಶ್ನೆಯಾಗಿದೆ.

ಮೊದಲು ನೋಟದಲ್ಲಿ ಇದಕ್ಕೆ ಸರಿ ಉತ್ತರ ಹೇಳಲು ಸಾಧ್ಯವಾದರೆ ನಿಮ್ಮ ಐಕ್ಯೂ ಖಂಡಿತ ಹೈ ಇದೆ ಎಂದರ್ಥ. ಮೊದಲ ನೋಟದಲ್ಲಿ ಉತ್ತರ ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದರೆ ನೀವು ಈ ಬಗ್ಗೆ ಕೊಂಚ ಯೋಚಿಸಬೇಕಾಗುತ್ತದೆ. ಯೋಚಿಸಿದರೆ 4ರ ಮೌಲ್ಯ ಎಷ್ಟು ಎಂಬುದನ್ನು ಕಂಡುಹಿಡಿಯುವುದು ನಿಜಕ್ಕೂ ಕಷ್ಟವೇನಲ್ಲ.

ಇಂತಹ ಬ್ರೈನ್ ಟೀಸರ್ ಚಿತ್ರಗಳು ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುತ್ತವೆ. ಆದರೆ ಒಮ್ಮೆ ಉತ್ತರ ಕಂಡುಕೊಂಡರೆ ಏನೋ ಸಾಧನೆ ಮಾಡಿದ ಖುಷಿ ಸಿಗುವುದು ಸುಳ್ಳಲ್ಲ. ಇದರೊಂದಿಗೆ ಬ್ರೈನ್ ಟೀಸರ್‌ಗಳನ್ನು ಬಿಡಿಸುವುದು ಉತ್ತಮ ಟೈಮ್‌ಪಾಸ್ ಕೂಡ ಹೌದು. ಇದರಿಂದ ನಮ್ಮ ಮೆದುಳು ಕೂಡ ಚುರುಕಾಗುತ್ತದೆ. ಇನ್ಯಾಕೆ ತಡ, ನಿಮ್ಮ ಮೆದುಳು ಮಾತ್ರ ಚುರುಕಾದರೆ ಸಾಲದು, ನಿಮ್ಮ ಸ್ನೇಹಿತರ ಮೆದುಳನ್ನು ಚುರುಕು ಮಾಡಿ. ಅವರಿಗೂ ಇದನ್ನು ಕಳುಹಿಸಿ, ಅವರಿಂದ ಉತ್ತರ ಕಂಡುಹಿಡಿಯಲು ಪ್ರಯತ್ನಿಸಲು ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಚಿರತೆ ಮಲಗಿರುವ ಈ ಚಿತ್ರದಲ್ಲಿ ಮೀನೊಂದು ಅಡಗಿದೆ, ಅದು ಎಲ್ಲಿದೆ; ಕಣ್ಣು ಸೂಕ್ಷ್ಮ ಇದ್ರೆ ಥಟ್ಟಂತ ಉತ್ತರ ಹೇಳಿ

Optical Illusion: ಚಿರತೆಯೊಂದು ಮರದ ಮೇಲೆ ಮಲಗಿರುವ ಈ ಚಿತ್ರದಲ್ಲಿ ಒಂದು ಮೀನು ಕೂಡ ಅಡಗಿದೆ. ಅದು ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮಗಿರೋದು ಕೇವಲ 10 ಸೆಕೆಂಡ್ ಸಮಯ.

Brain Teaser: ಈ ಮೂವರಲ್ಲಿ ಹೆಚ್ಚು ಭಾರ ಹೊರುತ್ತಿರುವವರು ಯಾರು, ನೀವು ಬುದ್ಧಿವಂತರಾದ್ರೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನಿಮ್ಮ ಐಕ್ಯೂ ಲೆವೆಲ್ ನಿಜಕ್ಕೂ ಹೈ ಇದೆ ಅಂತನ್ನಿಸಿದ್ರೆ ನಿಮಗಾಗಿ ಇಲ್ಲೊಂದು ಸವಾಲಿದೆ. ಈ ಮೂವರಲ್ಲಿ ಹೆಚ್ಚು ಭಾರ ಹೊತ್ತವರು ಯಾರು? 5 ಸೆಕೆಂಡ್‌ನಲ್ಲಿ ಹೇಳಿ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner