Brain Teaser: 11=8, 33=216 ಆದರೆ 44 = ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ಥಟ್ಟಂತ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಈ ಟ್ರಿಕ್ಕಿ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಟ್ರೈ ಮಾಡಿ. 44 = ಎಷ್ಟು? ಥಟ್ಟಂತ ಹೇಳಿ.

ಬ್ರೈನ್ ಟೀಸರ್ ಪ್ರಿಯರಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿರುವ ಸವಾಲು ಹಾಕುವ ಚಿತ್ರಗಳಿರುತ್ತವೆ. ಬ್ರೈನ್ ಟೀಸರ್‌ಗಳಲ್ಲಿ ಗಣಿತದ ಪಜಲ್ ಹಲವರಿಗೆ ಇಷ್ಟವಾಗುತ್ತದೆ. ಇದರಲ್ಲಿ ಮೆದುಳಿಗೆ ಸವಾಲು ಹಾಕುವಂತಹ ಸಾಕಷ್ಟು ಪ್ರಶ್ನೆಗಳಿರುತ್ತವೆ. ಸೋಷಿಯಲ್ ಮಿಡಿಯಾಗಳಲ್ಲಿ ಗಣಿತದ ಪಜಲ್ ಪೋಸ್ಟ್ ಮಾಡುವ ಸಾಕಷ್ಟು ಪೇಜ್‌ಗಳು ಕೂಡ ಇವೆ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಟ್ರಿಕ್ಕಿ ಪ್ರಶ್ನೆ ಇದೆ. ಈ ಪ್ರಶ್ನೆಯೇ ನಿಮ್ಮಲ್ಲಿ ಗೊಂದಲ ಮೂಡಿಸುವುದು ಖಂಡಿತ. ಇದಕ್ಕೆ ಉತ್ತರ ಕಂಡುಹಿಡಿಯಲು ನೀವು ಸಾಕಷ್ಟು ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸವಾಲು.
ಮೆದುಳಿನ ಸವಾಲು ಸ್ವೀಕರಿಸುವುದು ನಿಮಗೆ ಇಷ್ಟವಾದರೆ ಈ ಬ್ರೈನ್ ಟೀಸರ್ ನಿಮಗೆ ಇಷ್ಟವಾಗುತ್ತದೆ. Brainy Quiz ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್ ಇದಾಗಿದೆ. 11 = 8, 22 = 64, 33 = 216, 44 = ಎಷ್ಟು ಎಂಬುದು ಪ್ರಶ್ನೆಯಾಗಿದೆ.
ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಆಗಿದ್ದು, ಗಣಿತ ನಿಮ್ಮಿಷ್ಟದ ಸಜ್ಬೆಕ್ಟ್ ಅಂತಾದ್ರೆ ಈ ಪ್ರಶ್ನೆಗೆ ಉತ್ತರವೇನು ಹೇಳಿ. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ. ನಿಮ್ಮ ಸಮಯ ಈಗ ಶುರು.
ಈ ಪ್ರಶ್ನೆಗೆ ನಿಮ್ಮಿಂದ ಸರಿಯಾದ ಉತ್ತರ ಕಂಡುಹಿಡಿಯಲು ಸಾಧ್ಯವಾದರೆ ನೀವು ಈ ಬ್ರೈನ್ ಟೀಸರ್ ಅನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕಳುಹಿಸಿ, ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ. ಅವರ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: 1+4=5, 3+6=21 ಆದರೆ 8+11= ಎಷ್ಟು? ಗಣಿತದಲ್ಲಿ ಪಂಟರಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ
ಫೇಸ್‌ಬುಕ್‌ನಲ್ಲಿ ವೈರಲ್ ಆದ ಗಣಿತದ ಪಜಲ್‌ವೊಂದು ಸಾಮಾಜಿಕ ಜಾಲತಾಣ ಬಳಕೆದಾರರ ಮೆದುಳಿಗೆ ಹುಳ ಬಿಟ್ಟಿದೆ. ಇಲ್ಲಿರುವ ಪ್ರಶ್ನೆಗೆ ಸರಿ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.