Brain Teaser: ಚಿತ್ರದಲ್ಲಿ ಎಷ್ಟು ಬಾಲ್‌ಗಳಿವೆ, ನೀವು ನಿಜಕ್ಕೂ ಸೂಕ್ಷ್ಮ ದೃಷ್ಟಿ ಹೊಂದಿದ್ರೆ 15 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ
ನಿಮ್ಮ ಕಣ್ಣಿನ ದೃಷ್ಟಿ ಸೂಕ್ಷ್ಮವಾಗಿದೆ ಅಂತಂದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಲ್ಲಿರುವ ಚಿತ್ರದಲ್ಲಿ ಒಟ್ಟು ಎಷ್ಟು ಬಾಲ್‌ಗಳಿವೆ ಎಂದು ನೀವು ಹೇಳಬೇಕು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ.

ಸಾಮಾಜಿಕ ಜಾಲತಾಣಗಳನ್ನು ಸ್ಕ್ರಾಲ್ ಮಾಡುವವರಿಗೆ ಬ್ರೈನ್ ಟೀಸರ್‌ಗಳು ಕಣ್ಣಿಗೆ ಕಾಣಿಸದೇ ಇರಲು ಸಾಧ್ಯವಿಲ್ಲ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಯಾವುದೇ ಸೋಷಿಯಲ್ ಮಿಡಿಯಾದಲ್ಲೂ ಬ್ರೈನ್ ಟೀಸರ್‌ಗಳು ನಿಮ್ಮ ಗಮನ ಸೆಳೆಯುತ್ತವೆ. ಅದಕ್ಕಿಂತ ಒಂದು ಭಿನ್ನವಾದ ಪ್ರಶ್ನೆಗಳನ್ನು ಹೊಂದಿರುವ ಬ್ರೈನ್ ಟೀಸರ್‌ಗಳು ಮೆದುಳಿಗೆ ಹುಳ ಬಿಡೋದು ಖಂಡಿತ.
ಬ್ರೈನ್ ಟೀಸರ್‌ನಲ್ಲಿ ಆಪ್ಟಿಕಲ್ ಇಲ್ಯೂಷನ್ ಕೂಡ ಒಂದು ವಿಭಾಗ. ಇಂತಹ ಚಿತ್ರಗಳಲ್ಲಿ ನಿಮ್ಮ ಕಣ್ಣಿಗೆ ಒಮ್ಮೆ ಕಾಣಿಸಿದ್ದು, ಇನ್ನೊಮ್ಮೆ ಕಾಣಿಸದೇ ಇರಬಹುದು. ಒಮ್ಮೆ ಚಿತ್ರದಲ್ಲಿ 10 ಬಾಲ್‌ಗಳು ಕಾಣಿಸಿದರೆ, ಇನ್ನೊಮ್ಮೆ 12 ಕಾಣಿಸಬಹುದು. ಹೀಗೆ ಗೊಂದಲ ಮೂಡಿಸುವ ಚಿತ್ರದಲ್ಲಿ ಸರಿ ಯಾವುದು ಎಂದು ಕಂಡು ಹಿಡಿಯುವುದು ನಿಮಗಿರುವ ಸವಾಲಾಗಿರುತ್ತದೆ.
ಬ್ರೈನ್ ಟೀಸರ್‌ಗಳು ಮೆದುಳಿಗೆ ಸವಾಲು ಹಾಕಿದರೂ ಅವು ಮೋಜು ಕೂಡ ನೀಡುತ್ತವೆ. ಇದರಿಂದ ನಮ್ಮ ಬುದ್ಧಿಶಕ್ತಿಯೂ ಚುರುಕಾಗುತ್ತದೆ. ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ನಮ್ಮ ಯೋಚನಾಶಕ್ತಿಯೂ ವೃದ್ಧಿಯಾಗುತ್ತದೆ. ಹಾಗಾದರೆ ಇಂದಿನ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆ ಏನು ಗಮನಿಸಿ.
ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಬಣ್ಣ ಬಣ್ಣದ ಒಂದಿಷ್ಟು ಬಾಲ್‌ಗಳನ್ನು ತ್ರಿಭುಜಾಕೃತಿಯಲ್ಲಿ ಜೋಡಿಸಿ ಇಟ್ಟಿರುವುದನ್ನು ಕಾಣಬಹುದು. ಇದರಲ್ಲಿ ಒಟ್ಟು ಎಷ್ಟು ಬಾಲ್‌ಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಹಾಗಂತ ಇವತ್ತು ದಿನಪೂರ್ತಿ ಕೂತು ನೀವು ಬಾಲ್‌ಗಳನ್ನು ಎಣಿಸುವಂತಿಲ್ಲ. ಕೇವಲ 15 ಸೆಕೆಂಡ್ ಒಳಗೆ ಚಿತ್ರದಲ್ಲಿ ಎಷ್ಟು ಬಾಲ್‌ಗಳಿವೆ ಎಂಬುದನ್ನು ಕಂಡುಹಿಡಿಯಬೇಕು.
ನೀವು ನಿಜಕ್ಕೂ ಬುದ್ಧಿವಂತರಾದ್ರೆ ನೀವು ಸೂಕ್ಷ್ಮ ದೃಷ್ಟಿ ಹೊಂದಿದ್ದರೆ ಚಿತ್ರವನ್ನು ಸರಿಯಾಗಿಸಿ ಗಮನಿಸಿ. ಚಿತ್ರದಲ್ಲಿ ಎಷ್ಟು ಬಾಲ್‌ಗಳಿವೆ ಅಂತ ಯೋಚಿಸಿ ಉತ್ತರ ಕೊಡಿ. ಈ ಪ್ರಶ್ನೆಗೆ ಸರಿ ಉತ್ತರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವಾದರೆ ಈ ಚಿತ್ರವನ್ನು ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಕಳುಹಿಸಿ. ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ. ಅವರಿಗೆ ಇದಕ್ಕೆ ಸರಿ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವುದೇ ನೋಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಅಲಿಯ ವಯಸ್ಸೆಷ್ಟು? ನೀವು ನಿಜಕ್ಕೂ ಬುದ್ಧಿವಂತರಾದ್ರೆ ಈ ಪ್ರಶ್ನೆಗೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ಗೆ ಸರಿ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ. 15 ಸೆಕೆಂಡ್‌ನಲ್ಲಿ ಅಲಿಯ ನಿಜವಾದ ವಯಸ್ಸು ಎಷ್ಟು ಎಂದು ನೀವು ಕಂಡುಹಿಡಿಯಬೇಕು.