Brain Teaser: 92+3=73, 75+2=22 ಆದ್ರೆ 97+1= ಎಷ್ಟು? ಉತ್ತರ ಖಂಡಿತ 98 ಅಲ್ಲ; ಹಾಗಾದ್ರೆ ಸರಿಯಾದ ಉತ್ತರವೇನು?
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 92+3=73, 75+2=22 ಆದ್ರೆ 97+1= ಎಷ್ಟು? ಉತ್ತರ ಖಂಡಿತ 98 ಅಲ್ಲ; ಹಾಗಾದ್ರೆ ಸರಿಯಾದ ಉತ್ತರವೇನು?

Brain Teaser: 92+3=73, 75+2=22 ಆದ್ರೆ 97+1= ಎಷ್ಟು? ಉತ್ತರ ಖಂಡಿತ 98 ಅಲ್ಲ; ಹಾಗಾದ್ರೆ ಸರಿಯಾದ ಉತ್ತರವೇನು?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಂದಿನ ಬ್ರೈನ್‌ ಟೀಸರ್‌ನಲ್ಲಿ ಇರುವುದು ಕೂಡಿಸುವ ಲೆಕ್ಕಾಚಾರ, ಆದರೂ ಇದರಲ್ಲಿ ಟ್ವಿಸ್ಟ್ ಇದೆ. ಇದರ ಪ್ರಕಾರ 92+3=73, 75+2=22 ಆಗುತ್ತೆ. 97+1= ಎಷ್ಟು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಗಣಿತ ಕಬ್ಬಿಣದ ಕಡಲೆಕಾಯಿ ಎಂಬ ಮಾತನ್ನು ನಾವು ಹಿಂದಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಕೆಲವೊಂದು ಗಣಿತ ಸೂತ್ರಗಳನ್ನು ನೋಡಿದಾಗ ಅದು ನಿಜ ಎಂದು ಅನ್ನಿಸುವುದು ಸುಳ್ಳಲ್ಲ. ಇಲ್ಲೊಂದು ಅಂಥದ್ದೇ ಮೆದುಳಿಗೆ ಹುಳ ಬಿಡುವ ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಇರುವುದು ಗಣಿತದ ಸೂತ್ರ.

ಈ ಗಣಿತದ ಸೂತ್ರದಲ್ಲಿರುವುದು ಕೂಡಿಸುವ ಲೆಕ್ಕಾಚಾರ. ಆದರೆ ಇದರಲ್ಲಿ ಟ್ವಿಸ್ಟ್ ನೀಡಲಾಗಿದೆ. ಈ ಟ್ವಿಸ್ಟ್‌ನಂತೆ 92+3=95 ಆಗದೇ 73 ಆಗುತ್ತೆ. ಇದೇ ರೀತಿ ಒಂದಿಷ್ಟು ಉತ್ತರಗಳನ್ನು ನೀಡಲಾಗಿದೆ. ಕೊನೆಯಲ್ಲಿ ಇರುವ ಸೂತ್ರಕ್ಕೆ ನೀವು ಉತ್ತರ ಕಂಡುಹಿಡಿಯಬೇಕು. ಗಣಿತ ಕಷ್ಟ ಎನ್ನುವವರಿಗೆ ಇದು ಕಷ್ಟ ಎನ್ನಿಸಿದ್ರೂ ಗಣಿತದಲ್ಲಿ ಪಂಟರಾಗಿರುವವರಿಗೆ ಈ ಪ್ರಶ್ನೆ ಖಂಡಿತ ಸುಲಭ ಎನ್ನಿಸುತ್ತೆ. ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಅಂಥದ್ದೇನಿದೆ ಅಂತೀರಾ? ಮುಂದೆ ನೋಡಿ.

ಇಂದಿನ ಬ್ರೈನ್ ಟೀಸರ್‌ನಲ್ಲಿ 4 ಗಣಿತದ ಸೂತ್ರಗಳಿವೆ. ಇದರಲ್ಲಿ 3ಕ್ಕೆ ಉತ್ತರ ನೀಡಲಾಗಿದೆ. ಕೊನೆಯದ್ದಕ್ಕೆ ಉತ್ತರ ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು. 92+3=73, 75+2=22, 84+3=43 ಆದ್ರೆ 97+1= ಎಷ್ಟು ಎಂದು ನೀವು ಕಂಡುಹಿಡಿಯಬೇಕು.

ಈ ಬ್ರೈನ್ ಟೀಸರ್ ಪ್ರಶ್ನೆ ವಿಚಿತ್ರವಾಗಿ ಕಂಡರೂ ಉತ್ತರ ಕಂಡುಹಿಡಿಯುವುದು ಖಂಡಿತ ಕಷ್ಟವೇನಲ್ಲ. ಇದಕ್ಕಾಗಿ ನೀವು ಕೊಂಚ ಯೋಚಿಸಬೇಕಾಗುತ್ತದೆ. ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಬುದ್ಧಿವಂತಿಕೆಯನ್ನು ಪ್ರಶ್ನೆ ಮಾಡುವ ಜೊತೆಗೆ ನಮ್ಮಲ್ಲಿ ಯೋಚನಾಶಕ್ತಿಯನ್ನೂ ವೃದ್ಧಿಸುತ್ತವೆ. ನೀವು ನಿಜಕ್ಕೂ ಗಣಿತದಲ್ಲಿ ಎಕ್ಸ್‌ಪರ್ಟ್‌ ಆದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಿ. ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕಳುಹಿಸಿ. ಇದರಿಂದ ಉತ್ತರ ಏನು ಬರುತ್ತದೆ, ಅವರೆಷ್ಟು ಬುದ್ಧಿವಂತಿರೂ ಎಂಬುದನ್ನೂ ಕಂಡುಕೊಳ್ಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಇಲ್ಲಿರುವ 4 ಮಂದಿಯಲ್ಲಿ ಅತ್ಯಂತ ಮೂರ್ಖ ಯಾರು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಒಂದು ಮರ ಹಾಗೂ 4 ಜನ ಇರುವ ಈ ಬ್ರೈನ್ ಟೀಸರ್‌ನಲ್ಲಿ ಅತ್ಯಂತ ಮೂರ್ಖ ಯಾರು ಎಂದು ನೀವು ಕಂಡುಹಿಡಿಯಬೇಕು. ನಿಮ್ಮ ಐಕ್ಯೂ ನಿಜಕ್ಕೂ ಹೈ ಇದ್ದರೆ ನೀವು 5 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಈ ಬ್ರೈನ್ ಟೀಸರ್ ನಿಮ್ಮ ಬುದ್ಧಿವಂತಿಕೆ ಪರೀಕ್ಷೆ ಮಾಡುವುದು ಸುಳ್ಳಲ್ಲ. ನಿಮ್ಮ ಸಮಯ ಈಗ ಶುರು…

Brain Teaser: ಈ ಇಬ್ಬರು ಮಹಿಳೆಯರಲ್ಲಿ ಯಾರು ಮನೆಗೆ ಹೆಚ್ಚು ನೀರು ತರುತ್ತಾರೆ, 20 ಸೆಕೆಂಡ್‌ನಲ್ಲಿ ಉತ್ತರಿಸಿ, ಮೆದುಳಿಗೊಂದು ಸವಾಲು

ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಇಬ್ಬರು ಮಹಿಳೆಯರು ನೀರು ತರುತ್ತಿರುವ ದೃಶ್ಯವಿದೆ. ಇಬ್ಬರಲ್ಲಿ ಯಾರು ಹೆಚ್ಚು ನೀರು ತರುತ್ತಿದ್ದಾರೆ ಎಂದು ನೀವು ಹೇಳಬೇಕು. ನಿಮಗಿರೋದು 20 ಸೆಕೆಂಡ್ ಸಮಯ, ಅಷ್ಟರಲ್ಲಿ ನೀವು ಸರಿಯಾದ ಉತ್ತರ ಕಂಡುಹಿಡಿಯಬೇಕು.

Whats_app_banner