Brain Teaser: ಈ ಮಕ್ಕಳ ನಿಜವಾದ ತಾಯಿ ಯಾರು, ನೀವು ನಿಜಕ್ಕೂ ಬುದ್ಧಿವಂತರಾದ್ರೆ 5 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಮಕ್ಕಳ ನಿಜವಾದ ತಾಯಿ ಯಾರು, ನೀವು ನಿಜಕ್ಕೂ ಬುದ್ಧಿವಂತರಾದ್ರೆ 5 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ

Brain Teaser: ಈ ಮಕ್ಕಳ ನಿಜವಾದ ತಾಯಿ ಯಾರು, ನೀವು ನಿಜಕ್ಕೂ ಬುದ್ಧಿವಂತರಾದ್ರೆ 5 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ

ನೀವು ತುಂಬಾನೇ ಬುದ್ಧಿವಂತರು, ನಿಮ್ಮ ಬುದ್ಧಿವಂತಿಕೆಗೆ ಸಾಟಿಯಿಲ್ಲ ಅಂತ ಅನ್ನಿಸ್ತಾ ಇದ್ಯಾ, ಹಾಗಾದರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಲ್ಲಿರುವ ಬ್ರೈನ್ ಟೀಸರ್‌ನಲ್ಲಿ ಈ ಮಕ್ಕಳ ನಿಜವಾದ ತಾಯಿ ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು. ಅದು ಕೇವಲ 5 ಸೆಕೆಂಡ್‌ ಒಳಗೆ, ನಿಮ್ಮ ಸಮಯ ಈಗ ಶುರು.

ಬ್ರೈನ್ ಟೀಸರ್
ಬ್ರೈನ್ ಟೀಸರ್ (PC: Brightside )

ಬ್ರೈನ್ ಟೀಸರ್‌ಗಳು ಎಂದರೆ ನಮಗೆ ಒಂದು ರೀತಿ ಮೋಜಿನ ಜೊತೆ ನಮ್ಮ ಮೆದುಳಿಗೂ ಸವಾಲು ಹಾಕುವಂತಹ ಚಿತ್ರಗಳು. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗಳು ನಮಗೆ ಸವಾಲು ಹಾಕುತ್ತವೆ, ಇದಕ್ಕಾಗಿ ನಮ್ಮ ಮೆದುಳು ಸಾಕಷ್ಟು ಯೋಚಿಸುವಂತೆ ಮಾಡುತ್ತವೆ. ಇದಕ್ಕೆ ಉತ್ತರ ಕಂಡುಹಿಡಿಯುವರೆಗೂ ನಾವು ಚಿಂತಿಸುತ್ತೇವೆ. ಸರಿ ಉತ್ತರ ಸಿಗದೇ ನಾವು ಬಿಡುವುದಿಲ್ಲ.

ಇಂದಿನ ಬ್ರೈನ್ ಟೀಸರ್‌ನಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿದ್ದಾರೆ. ಮೂವರು ತಾಯಂದಿರು ಅವರನ್ನು ನನ್ನ ಮಕ್ಕಳು, ನನ್ನ ಮಕ್ಕಳು ಎನ್ನುತ್ತಿದ್ದಾರೆ. ಆದರೆ ಈ ಮಕ್ಕಳ ನಿಜವಾದ ತಾಯಿ ಯಾರು ಎಂಬುದು ಈಗ ನಿಮ್ಮ ಮುಂದೆ ಇರುವ ಪ್ರಶ್ನೆ. ಈ ಚಿತ್ರವನ್ನು ಸರಿಯಾಗಿ ಗಮನಿಸಿ, ಇದರಲ್ಲಿ ಮಕ್ಕಳ ನಿಜವಾದ ತಾಯಿ ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು. ಆದರೆ ನಿಮಗಿರೋದು ಕೇವಲ 5 ಸೆಕೆಂಡ್ ಸಮಯ. ಅಷ್ಟರಲ್ಲಿ ಈ ಮಕ್ಕಳ ನಿಜವಾದ ತಾಯಿಯನ್ನು ನೀವು ಕಂಡುಹಿಡಿಯಬೇಕು.

ಚಿತ್ರವನ್ನು ಮೇಲ್ನೋಟಕ್ಕೆ ಕಂಡು ಸರಿ ಉತ್ತರ ಕಂಡುಹಿಡಿಯುವುದು ಖಂಡಿತ ಸುಲಭದ ಮಾತಲ್ಲ. ಯಾಕೆಂದರೆ ಯಾವುದೇ ಆಧಾರ ನಿಮಗೆ ಇರುವುದಿಲ್ಲ. ಚಿತ್ರವನ್ನು ನೋಡಿ, ಸರಿಯಾಗಿ ಗಮನಿಸಿ ಗ್ರಹಿಕೆಯ ಮೇಲಷ್ಟೇ ನೀವು ಸರಿ ಉತ್ತರ ಕಂಡುಹಿಡಿಯಬೇಕು. ಆ ಕಾರಣಕ್ಕೆ ಈ ನಿಮಗೆ ಚಾಲೆಂಜ್ ಅನ್ನಿಸುವುದು ಖಂಡಿತ.

ಮಕ್ಕಳಿಗಾಗಿ ಜಗಳವಾಡುತ್ತಿರುವ ಈ ಮೂವರು ತಾಯಂದಿರಲ್ಲಿ ಮಕ್ಕಳ ನಿಜವಾದ ತಾಯಿ ಯಾರು ಎಂಬುದನ್ನು ನಿಮ್ಮಿಂದ ಊಹಿಸಲು ಸಾಧ್ಯವಾಯ್ತೆ, 5 ಸೆಕೆಂಡ್ ಬಿಡಿ 5 ನಿಮಿಷ ಕಳೆದ್ರೂ ಸರಿ ಉತ್ತರ ಕಂಡುಹಿಡಿಯಲು ಸಾಧ್ಯವಾಗಿಲ್ಲ ಅಂದ್ರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಇದರಲ್ಲಿ 3ನೇ ಮಹಿಳೆ ಈ ಮಕ್ಕಳ ನಿಜವಾದ ಅಮ್ಮ. ಆ ಮಕ್ಕಳು ಹಾಗೂ ತಾಯಿ ಮೂವರ ಕೈಯನ್ನು ಗಮನಿಸಿ. ಅವರಿಗೆ ಒಂದೇ ರೀತಿ ಮಚ್ಚೆ ಥರದ ಕಲೆ ಇದೆ. ಹಾಗಾಗಿ ಮೂರನೇ ಮಹಿಳೆಯೇ ಈ ಮಕ್ಕಳ ನಿಜವಾದ ಅಮ್ಮ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: 2*3=9, 3*4=16 ಆದ್ರೆ 5*7= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ಈ ಪ್ರಶ್ನೆಗೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ಒಂದು ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಶೇ 99 ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ. 5*7 = ಎಷ್ಟು ನೀವು ಹೇಳಬೇಕು, ನಿಮಗಿರೋದು 15 ಸೆಕೆಂಡ್ ಸಮಯ.

Brain Teaser: ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ, 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ ಅನ್ನೋದು ಪ್ರಶ್ನೆಯಾಗಿದೆ. ಇದಕ್ಕೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

Whats_app_banner