Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಚುರುಕಾಗಿದ್ರೆ ಈ ಚಿತ್ರದಲ್ಲಿರುವ ನಂಬರ್ ಯಾವುದು ಹೇಳಿ, ನಿಮಗಿರೋದು 10 ಸೆಕೆಂಡ್ ಸಮಯ
ಇಂದಿನ ಬ್ರೈನ್ ಟೀಸರ್ ಚಿತ್ರವು ನಿಮಗೆ ತಲೆನೋವು ತರಿಸಬಹುದು.ಯಾಕೆಂದರೆ ಈ ಚಿತ್ರವನ್ನು ನೋಡುತ್ತಲೇ ಇದ್ದರೆ ತಲೆನೋವು ಬರೋದು ಖಂಡಿತ. ಹಾಗಂತ ನೋಡದೇ ಇದ್ದರೆ ಚಿತ್ರದಲ್ಲಿರುವ ನಂಬರ್ ಕಂಡುಹಿಡಿಯಲು ಸಾಧ್ಯವಿಲ್ಲ. ಕೇವಲ 10 ಸೆಕೆಂಡ್‌ನಲ್ಲಿ ಇಲ್ಲಿರುವ ಆಪ್ಟಿಕಲ್ ಇಲ್ಯೂಷನ್ ನಂಬರ್ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು…
![ಬ್ರೈನ್ ಟೀಸರ್ ಬ್ರೈನ್ ಟೀಸರ್](https://images.hindustantimes.com/kannada/img/2025/01/03/550x309/Reshma_Shetty__1735883940777_1735883945163.png)
ಬ್ರೈನ್ ಟೀಸರ್‌ಗಳು ಮಾತ್ರವಲ್ಲ, ಬ್ರೈನ್ ಟೀಸರ್‌ಗಳ ರೂಪದಲ್ಲಿರುವ ಆಪ್ಟಿಕಲ್ ಇಲ್ಯೂಷನ್‌ಗಳು ಕೂಡ ಮೆದುಳಿಗೆ ಹುಳ ಬಿಡುತ್ತವೆ. ಇದಕ್ಕೆ ಉತ್ತರ ಕಂಡುಕೊಳ್ಳುವುದು ನಿಜಕ್ಕೂ ಸುಲಭದ ಮಾತಾಗಿರುವುದಿಲ್ಲ. ಯಾಕೆಂದರೆ ಇದಕ್ಕಾಗಿ ನಾವು ನಮ್ಮ ಕಣ್ಣು ಮತ್ತು ಮೆದುಳಿಗೆ ಸಾಕಷ್ಟು ಕೆಲಸ ಕೊಡಬೇಕು. ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಚುರುಗಾಗಿರಬೇಕು. ಸೂಕ್ಷ್ಮದೃಷ್ಟಿ ನಮ್ಮದಾಗಿದ್ದರೆ ಮಾತ್ರ ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯ.
ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡುತ್ತಾ ಕೂತರೆ ತಲೆನೋವು ಶುರುವಾಗಬಹುದು. ಹಾಗಂತ ನೋಡದೇ ಇದ್ದರೆ ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ. ಚೌಚೌಕಾರದ ಡಿಸೈನ್ ಇರುವ ಈ ಚಿತ್ರದಲ್ಲಿ ನಂಬರ್ ಬರೆಯಲಾಗಿದೆ. ಚಿತ್ರವನ್ನ ಸೂಕ್ಷ್ಮವಾಗಿ ಗಮನಿಸಿ ಆ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು. ನಿಮಗಿರೋದು 10 ಸೆಕೆಂಡ್ ಸಮಯ ಮಾತ್ರ.
Brainy Bits Hub ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್ ಇದಾಗಿದೆ. ಈ ಪುಟದಲ್ಲಿ ಆಗಾಗ ಮೆದುಳಿಗೆ ಹುಳ ಬಿಡುವ ಬ್ರೈನ್ ಟೀಸರ್‌ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಬ್ರೈನ್ ಟೀಸರ್ ಪ್ರಿಯರು ಇಲ್ಲಿರುವ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವ ಮೂಲಕ ತಾವೆಷ್ಟು ಜಾಣರು ಎಂಬುದನ್ನು ತೋರಿಸುತ್ತಾರೆ. ಈ ಬ್ರೈನ್ ಟೀಸರ್ ಪೋಸ್ಟ್ ಮಾಡಿ ಕೆಲವು ದಿನಗಳು ಕಳೆದಿವೆ. ಈಗಾಗಲೇ 4 ಸಾವಿರದಷ್ಟು ಮಂದಿ ಇದನ್ನು ನೋಡಿದ್ದು, 105ಕ್ಕೂ ಹೆಚ್ಚು ಜನ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.
387695 ಈ ಚಿತ್ರದಲ್ಲಿರುವ ನಂಬರ್ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಇದರಲ್ಲಿ ಇರುವುದು ನಿಜಕ್ಕೂ ಈ ನಂಬರೇನಾ, ನಿಮ್ಮ ಕಣ್ಣಿಗೂ ಇದೇ ನಂಬರ್ ಕಾಣಿಸುತ್ತಾ ನೋಡಿ. ನಿಮಗೆ ಯಾವುದು ಕಾಣಿಸಿತು ಎಂದು ಕಾಮೆಂಟ್ ಮಾಡಿ ತಿಳಿಸುವ ಜೊತೆಗೆ ಈ ಚಿತ್ರವನ್ನು ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಕಳುಹಿಸಲು ಮರೆಯಬೇಡಿ. ಅವರಿಂದ ಯಾವ ಉತ್ತರ ಬರಬಹುದು ನಿರೀಕ್ಷಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಚಿತ್ರದಲ್ಲಿ ಬೇಟೆಗಾರ ಎಲ್ಲಿ ಅಡಗಿದ್ದಾನೆ, ನಿಮ್ಮ ಕಣ್ಣು ಹದ್ದಿನ ಕಣ್ಣಿನಷ್ಟೇ ಚುರುಕಿದ್ರೆ ಕಂಡು ಹಿಡಿಯಿರಿ
ನಿಮ್ಮ ಕಣ್ಣು ತುಂಬಾನೇ ಚುರುಕಾಗಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದರೆ ನಿಮಗಾಗಿ ಇಲ್ಲೊಂದು ಸವಾಲಿದೆ. ಹೊಸ ವರ್ಷದ ಈ ದಿನ ನಿಮ್ಮ ಕಣ್ಣಿಗೊಂದು ಚಾಲೆಂಜ್ ನೀಡಿ. ಜಿಂಕೆಯನ್ನು ಬೇಟೆಯಾಡಲು ಕಾಯುತ್ತಿರುವ ಬೇಟೆಗಾರ ಎಲ್ಲಿ ಅಡಗಿದ್ದಾನೆ ಎಂಬುದನ್ನು ಕಂಡುಹಿಡಿಯಿರಿ. ನಿಮ್ಮ ಸಮಯ ಈಗ ಶುರು...
Brain Teaser: ಲಿಂಡಾಗೆ ಈಗ 40 ವರ್ಷವಾದ್ರೆ ಮೇರಿಗೆ ಎಷ್ಟು? ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮ ಮೆದುಳು ತುಂಬಾನೇ ಚುರುಕಾಗಿರಬೇಕು. ಅದಕ್ಕೆ ಥಟ್ಟಂತ ಉತ್ತರ ಹೇಳಬೇಕು ಅಂದ್ರೆ ನಿಮ್ಮ ಐಕ್ಯೂ ಲೆವೆಲ್ ಹೈ ಇರಬೇಕು. ಹಾಗಾದ್ರೆ ಮೇರಿಗೆ ಈಗ ಎಷ್ಟು ವಯಸ್ಸು? ಈ ಪ್ರಶ್ನೆಗೆ ನೀವು ಎಷ್ಟು ಸೆಕೆಂಡ್‌ಗಳಲ್ಲಿ ಉತ್ತರ ಹೇಳ್ತಿರಾ ನೋಡೋಣ.
![Whats_app_banner Whats_app_banner](https://kannada.hindustantimes.com/static-content/1y/wBanner.png)