Brain Teaser: ಲಿಂಡಾಗೆ ಈಗ 40 ವರ್ಷವಾದ್ರೆ ಮೇರಿಗೆ ಎಷ್ಟು? ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮ ಮೆದುಳು ತುಂಬಾನೇ ಚುರುಕಾಗಿರಬೇಕು. ಅದಕ್ಕೆ ಥಟ್ಟಂತ ಉತ್ತರ ಹೇಳಬೇಕು ಅಂದ್ರೆ ನಿಮ್ಮ ಐಕ್ಯೂ ಲೆವೆಲ್ ಹೈ ಇರಬೇಕು. ಹಾಗಾದ್ರೆ ಮೇರಿಗೆ ಈಗ ಎಷ್ಟು ವಯಸ್ಸು? ಈ ಪ್ರಶ್ನೆಗೆ ನೀವು ಎಷ್ಟು ಸೆಕೆಂಡ್‌ಗಳಲ್ಲಿ ಉತ್ತರ ಹೇಳ್ತಿರಾ ನೋಡೋಣ.
ಬ್ರೈನ್ ಟೀಸರ್‌ಗಳು ಮೆದುಳಿಗೆ ಸವಾಲು ಹಾಕುವಂತಹ ಪ್ರಶ್ನೆಗಳನ್ನೇ ಹೊಂದಿರುತ್ತವೆ. ಬ್ರೈನ್ ಟೀಸರ್ ಪ್ರಶ್ನೆಗಳಿಗೆ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. ಎಲ್ಲರಿಗೂ ಇಂತಹ ಪ್ರಶ್ನೆಗಳಿಗೆ ಉತ್ತರ ಹೇಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ನಿರ್ದಿಷ್ಟ ಸೆಕೆಂಡ್‌ಗಳಲ್ಲಿ ಉತ್ತರ ಹೇಳಬೇಕು ಎಂದರೆ ಮೆದುಳು ಸಾಕಷ್ಟು ಚುರುಕಾಗಿರಬೇಕು, ಜೊತೆಗೆ ನಮ್ಮ ಐಕ್ಯೂ ಕೂಡ ಹೈ ಇರಬೇಕು.
ಅದೇನೆ ಇರಲಿ, ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುವುದರಿಂದ ನಮ್ಮ ಮೆದುಳು ತುಂಬಾನೇ ಚುರುಕಾಗುವುದಂತೂ ಸತ್ಯ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ. ಮಾತ್ರವಲ್ಲ ಸಮಸ್ಯೆ ಪರಿಹರಿಸುವ ಗುಣ ವೃದ್ಧಿಯಾಗುತ್ತದೆ. ಇಂತಹ ಬ್ರೈನ್ ಟೀಸರ್‌ಗಳು ನಮಗೆ ಮೋಜು ಸಿಗುವಂತೆ ಮಾಡುತ್ತವೆ. ಇದು ಒತ್ತಡ ಕಡಿಮೆ ಮಾಡುವ ತಂತ್ರವೂ ಹೌದು.
ಇಂದಿನ ಬ್ರೈನ್ ಟೀಸರ್ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಇದರಲ್ಲಿರುವ ಪ್ರಶ್ನೆ ಹೀಗಿದೆ. ಲಿಂಡಾಗೆ 6 ವರ್ಷ ವಯಸ್ಸಿದ್ದಾಗ ಅವಳ ಸಹೋದರಿ ಮೇರಿಗೆ ಅವಳ ಅರ್ಧದಷ್ಟು ವಯಸ್ಸು. ಈಗ ಲಿಂಡಾಗೆ 40 ವರ್ಷ ವಯಸ್ಸಾದರೆ ಮೇರಿ ವಯಸ್ಸೆಷ್ಟು? ಇದಕ್ಕೆ ನೀವು ಯೋಚನೆ ಮಾಡಿ ಥಟ್ ಅಂತ ಉತ್ತರ ಹೇಳಬೇಕು.
@Brainy_Bits_Hub ಎನ್ನುವ ಎಕ್ಸ್ ಪುಟ ನಿರ್ವಹಿಸುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಪ್ರಶ್ನೆ ಸುಲಭವಾದ್ರೂ ಉತ್ತರ ಕಂಡುಹಿಡಿಯುವ ಸಲುವಾಗಿ ಹಲವರು ಮೆದುಳು ಕೆರೆದುಕೊಂಡಿದ್ದಾರೆ. ಹಾಗಾದರೆ ಈ ಪ್ರಶ್ನೆಗೆ ನಿಮ್ಮ ಉತ್ತರವೇನು?
ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವಾದರೆ ಇದನ್ನು ನಿಮ್ಮ ಸ್ನೇಹಿತರು, ಆಪ್ತರಿಗೂ ಹಂಚಿಕೊಳ್ಳಿ. ಅವರ ಬುದ್ಧಿವಂತಿಕೆ ಹೇಗಿದೆ ಪರೀಕ್ಷೆ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 20 ವರ್ಷಗಳ ನಂತರ ಗುಂಡನ ವಯಸ್ಸು ಎಷ್ಟಾಗುತ್ತೆ; ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ನಿಮ್ಮ ಉತ್ತರವೇನು?
ಇಂದಿನ ಬ್ರೈನ್ ಟೀಸರ್ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮ ಐಕ್ಯೂ ಲೆವೆಲ್ ಜಾಸ್ತಿ ಇರಬೇಕು. ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ವರ್ಷದ ನಂತರ ಗುಂಡನ ವಯಸ್ಸು ಎಷ್ಟಾಗುತ್ತದೆ ಎಂಬುದನ್ನು ಕಂಡುಹಿಡಿಯಿರಿ.
Brain Teaser: ಕಿಟಕಿ ಬಾಗಿಲುಗಳಿಲ್ಲದ ರೂಮ್ ಯಾವುದು; ಬುದ್ಧಿವಂತರಾದ್ರೆ ಯೋಚಿಸಿ ಉತ್ತರ ಹೇಳಿ, ನಿಮ್ಮ ಮೆದುಳಿಗೊಂದು ಸವಾಲ್
ಎಕ್ಸ್‌ನಲ್ಲಿ ವೈರಲ್ ಆದ ಪ್ರಶ್ನೆಯೊಂದು ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ನೀವು 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮ್ಮಲ್ಲಿ ಅಸಾಧಾರಣ ಬುದ್ಧಿವಂತಿಕೆ ಇದ್ರೆ ಮಾತ್ರ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯ. ಹಾಗಾದರೆ ಕಿಟಕಿ, ಬಾಗಿಲುಗಳಲ್ಲಿದ ರೂಮ್ ಯಾವುದು ಉತ್ತರ ಹೇಳಿ.