Brain Teaser: 2*3=9, 3*4=16 ಆದ್ರೆ 5*7= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ಈ ಪ್ರಶ್ನೆಗೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 2*3=9, 3*4=16 ಆದ್ರೆ 5*7= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ಈ ಪ್ರಶ್ನೆಗೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: 2*3=9, 3*4=16 ಆದ್ರೆ 5*7= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ಈ ಪ್ರಶ್ನೆಗೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ಒಂದು ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಶೇ 99 ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ. 5*7 = ಎಷ್ಟು ನೀವು ಹೇಳಬೇಕು, ನಿಮಗಿರೋದು 15 ಸೆಕೆಂಡ್ ಸಮಯ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಶಾಲಾ ದಿನಗಳಿಂದಲೂ ಹಲವರಿಗೆ ಗಣಿತ ಎಂದರೆ ಕಬ್ಬಿಣದ ಕಡಲೆಯಂತೆ. ಗಣಿತದ ಸೂತ್ರಗಳನ್ನು ಬಿಡಿಸುವುದು ಸವಾಲು ಎನ್ನಿಸುತ್ತದೆ. ಪ್ರಮೇಯಗಳು, ಸೂತ್ರಗಳು, ಸಮೀಕರಣಗಳು ಮೆದುಳಿಗೆ ಹುಳ ಬಿಟ್ಟಂತೆ ಅನ್ನಿಸುವುದು ಸುಳ್ಳಲ್ಲ. ಆದರೆ ಕೆಲವರಿಗೆ ಗಣಿತ ಇಷ್ಟದ ವಿಷಯವಾಗಿರುತ್ತದೆ. ಅವರು ಗಣಿತ ಸೂತ್ರಗಳಿಗೆ ಸುಲಭವಾಗಿ ಉತ್ತರ ಕಂಡುಹಿಡಿಯುತ್ತಾರೆ.

ನೀವು ಗಣಿತ ಪ್ರೇಮಿಯಾಗಿದ್ದರೆ ಈ ಬ್ರೈನ್ ಟೀಸರ್ ಗಮನಿಸಿ. ಇದರಲ್ಲಿ ಇರುವುದು ಗುಣಾಕಾರದ ಲೆಕ್ಕಾಚಾರ. ಇದಕ್ಕೆ 15 ಸೆಕೆಂಡ್‌ ಒಳಗೆ ನೀವು ಸರಿಯಾದ ಉತ್ತರ ಕಂಡುಹಿಡಿಯಬೇಕು. ನಿಮ್ಮಿಂದ ಇದಕ್ಕೆ ಸರಿ ಉತ್ತರ ಕಂಡುಹಿಡಿಯಲು ಸಾಧ್ಯವಾದರೆ ಖಂಡಿತ ನೀವು ಗಣಿತದಲ್ಲಿ ಪಂಟರು ಎಂದರ್ಥ. ಹಾಗಾದರೆ ಇಂದಿನ ಬ್ರೈನ್ ಟೀಸರ್‌ನಲ್ಲಿ ಏನಿದೆ ಎಂಬುದನ್ನು ನೋಡೋಣ.

ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಚೀಟಿಯಲ್ಲಿ ಗುಣಾಕಾರ ಲೆಕ್ಕ ಬರೆಯಲಾಗಿದೆ. ಮೇಲ್ಗಡೆ ಶೇ 99 ರಷ್ಟು ಮಂದಿ ಉತ್ತರ ಹೇಳಲು ಸೋತಿದ್ದಾರೆ ಎಂಬರ್ಥದಲ್ಲಿ ಬರೆಯಲಾಗಿದೆ. 2*3=9, 3*3=16, 4*5=25 ಆದರೆ 5*7= ಎಷ್ಟು? ಈ ಪ್ರಶ್ನೆಗೆ ನೀವು ಉತ್ತರ ಕಂಡುಹಿಡಿಯಬೇಕು.

Brainy Quiz ಎನ್ನುವ ಎಕ್ಸ್ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಈ ಪ್ರಶ್ನೆ ಹಲವರ ಮೆದುಳಿಗೆ ಹುಳ ಬಿಟ್ಟಿದ್ದು ಸಾಕಷ್ಟು ಮಂದಿ ಇದಕ್ಕೆ ಉತ್ತರ ಹೇಳಲು ಸಾಧ್ಯವಾಗದೆ ತಲೆ ಕೆಡಿಸಿಕೊಂಡಿದ್ದಾರೆ.

ನಿಮ್ಮಿಂದ ಸರಿ ಉತ್ತರ ಕಂಡುಹಿಡಿಯಲು ಸಾಧ್ಯವಾಗಿದ್ದರೆ ತಡ ಮಾಡದೇ ಇದನ್ನು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೆ ಕಳುಹಿಸಿ, ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ. ಅವರ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡಿ. ಇಂತಹ ಬ್ರೈನ್ ಟೀಸರ್‌ಗಳಿಂದ ನಮ್ಮ ಮೆದುಳು ಬುದ್ಧಿ ಚುರುಕಾಗುವುದು ಸುಳ್ಳಲ್ಲ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: 61=14, 62=16 ಆದ್ರೆ 66= ಎಷ್ಟು? ಗಣಿತ ಎಕ್ಸ್‌ಪರ್ಟ್‌ ನೀವಾದ್ರೆ ಈ ಪ್ರಶ್ನೆಗೆ 9 ಸೆಕೆಂಡ್‌ ಒಳಗೆ ಸರಿ ಉತ್ತರ ಹೇಳಿ

ಇಲ್ಲೊಂದು ಗಣಿತದ ಪಜಲ್ ಇದೆ, ಪಜಲ್‌ನ ಪ್ರಶ್ನೆಯಷ್ಟೇ ಉತ್ತರವೂ ಸುಲಭವಿದೆ. ಆದರೂ ಇದಕ್ಕೆ ಸರಿ ಉತ್ತರವನ್ನು ಕೇವಲ 9 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಅದು ನಿಮಗೆ ಸಾಧ್ಯವಾದರೆ ಖಂಡಿತ ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಎಂದರ್ಥ. ಇನ್ಯಾಕೆ ತಡ ನಿಮ್ಮ ಸಮಯ ಈಗ ಶುರು.

Brain Teaser: M ಅಕ್ಷರಗಳ ರಾಶಿ ಇರುವ ಈ ಚಿತ್ರದಲ್ಲಿ ಒಂದು ಕಡೆ N ಇದೆ, 10 ಸೆಕೆಂಡ್‌ನಲ್ಲಿ ಹುಡುಕಿ; ನಿಮಗೊಂದು ಚಾಲೆಂಜ್‌

ನಿಮ್ಮ ಕಣ್ಣು ತುಂಬಾನೇ ಶಾರ್ಪ್ ಆಗಿದೆ, ಯಾವುದೇ ಸೂಕ್ಷ್ಮವನ್ನಾದ್ರೂ ಬೇಗ ಗ್ರಹಿಸುತ್ತೆ ಅಂತಿದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಈ ಬ್ರೈನ್ ಟೀಸರ್ ಚಿತ್ರದಲ್ಲಿ ರಾಶಿ M ಅಕ್ಷರಗಳಿವೆ. ಇದರ ನಡುವೆ ಒಂದು ಕಡೆ N ಅಡಗಿದೆ. ಅದು ಎಲ್ಲಿದೆ ಎಂದು ನೀವು ಕಂಡು ಹಿಡಿಯಬೇಕು.

Whats_app_banner