ರೈತನ ಹೊಲದಲ್ಲಿ ಒಟ್ಟು ಎಷ್ಟು ಕಾಲುಗಳಿವೆ, ನೀವು ಬುದ್ಧಿವಂತರಾದ್ರೆ ಸರಿ ಉತ್ತರ ಹೇಳಿ, ನಿಮಗಿರೋದು 10 ಸೆಕೆಂಡ್ ಸಮಯ
ಕನ್ನಡ ಸುದ್ದಿ  /  ಜೀವನಶೈಲಿ  /  ರೈತನ ಹೊಲದಲ್ಲಿ ಒಟ್ಟು ಎಷ್ಟು ಕಾಲುಗಳಿವೆ, ನೀವು ಬುದ್ಧಿವಂತರಾದ್ರೆ ಸರಿ ಉತ್ತರ ಹೇಳಿ, ನಿಮಗಿರೋದು 10 ಸೆಕೆಂಡ್ ಸಮಯ

ರೈತನ ಹೊಲದಲ್ಲಿ ಒಟ್ಟು ಎಷ್ಟು ಕಾಲುಗಳಿವೆ, ನೀವು ಬುದ್ಧಿವಂತರಾದ್ರೆ ಸರಿ ಉತ್ತರ ಹೇಳಿ, ನಿಮಗಿರೋದು 10 ಸೆಕೆಂಡ್ ಸಮಯ

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವೈರಲ್‌ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಟ್ರೈ ಮಾಡಿ, ನಿಮಗಿರೋದು 10 ಸೆಕೆಂಡ್ ಸಮಯ.

ರೈತನ ಹೊಲದಲ್ಲಿ ಒಟ್ಟು ಎಷ್ಟು ಕಾಲುಗಳಿವೆ, ನೀವು ಬುದ್ಧಿವಂತರಾದ್ರೆ ಸರಿ ಉತ್ತರ ಹೇಳಿ
ರೈತನ ಹೊಲದಲ್ಲಿ ಒಟ್ಟು ಎಷ್ಟು ಕಾಲುಗಳಿವೆ, ನೀವು ಬುದ್ಧಿವಂತರಾದ್ರೆ ಸರಿ ಉತ್ತರ ಹೇಳಿ

ಇಂದಿನ ತಂತ್ರಜ್ಞಾನದ ಜಗತ್ತಿನಲ್ಲಿ ಮೆದುಳಿಗೆ ಕೆಲಸ ಕೊಡೋರು ಕಡಿಮೆ ಅಂತಲೇ ಹೇಳಬಹುದು. ಈ ಗಡಿಬಿಡಿ ಬದುಕಿನಲ್ಲಿ ನಿಮ್ಮ ಮೆದುಳಿಗೆ ಕೊಂಚ ರಿಲ್ಯಾಕ್ಸ್ ಬೇಕು ಎಂದರೆ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವ ಪ್ರಯತ್ನ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಜನರಿಗೆ ಇವು ಸಾಕಷ್ಟು ಇಷ್ಟವಾಗುತ್ತಿವೆ. ಇದರಿಂದ ಮೆದುಳಿಗೆ ಕೆಲಸದ ಜೊತೆ ಮೋಜು ಕೂಡ ಸಿಗುತ್ತದೆ.

ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ ಪ್ರಶ್ನೆಯೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಇದರಲ್ಲಿರುವ ಪ್ರಶ್ನೆ ನೋಡಿದಾಗ ಉತ್ತರ ಹೇಳಬಹುದು ಎನ್ನಿಸಿದರೂ 10 ಸೆಕೆಂಡ್‌ನಲ್ಲಿ ಉತ್ತರ ಹೇಳೋದು ಖಂಡಿತ ಸುಲಭ ಎನ್ನಿಸುವುದಿಲ್ಲ.

ಬ್ರೈನ್ ಟೀಸರ್ ಪ್ರಶ್ನೆ ಹೀಗಿದೆ

ಒಬ್ಬ ರೈತನ ಹೊಲದಲ್ಲಿ 3 ಕುದುರೆಗಳು, 2 ಬಾತುಕೋಳಿ ಹಾಗೂ ಒಂದು ಹಂದಿ ಇದ್ದರೆ ಅವನ ಹೊಲದಲ್ಲಿ ಎಷ್ಟು ಕಾಲುಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನೀವು ಇದಕ್ಕೆ ಉತ್ತರ ಹೇಳೋದು ಸುಲಭ ಅಂದುಕೊಂಡರೆ ಖಂಡಿತ ಇದಕ್ಕೆ ಉತ್ತರ ಕಂಡುಹಿಡಿಯೋದು ಸುಲಭವಲ್ಲ, ಇದಕ್ಕೆ ಸರಿ ಉತ್ತರ ಕಂಡುಹಿಡಿಯಲು ನಿಮ್ಮ ಮೆದುಳಿಗೆ ಹುಳ ಬಿಟ್ಟುಕೊಳ್ಳಬೇಕಾಗುತ್ತದೆ.

ಇದರಲ್ಲಿ ಅಂಥದ್ದೇನಿದೆ 3 ಕುದುರೆ ಅಂದರೆ 4 ಕಾಲುಗಳು ಅಂದರೆ ಒಟ್ಟು 12, ಬಾತುಕೋಳಿ 2 ಅಂದರೆ 2 ಕಾಲು ಸೇರಿ ಒಟ್ಟು 4 ಕಾಲು, ಒಂದು ಹಂದಿ 4 ಕಾಲು ಈ ಎಲ್ಲವೂ 12+4+4= 20 ಎಂದು ನೀವು ಅಂದುಕೊಳ್ಳಬಹುದು. ಆದರೆ ಖಂಡಿತ ಈ ಬ್ರೈನ್ ಟೀಸರ್‌ಗೆ ಉತ್ತರ 20 ಖಂಡಿತ ಅಲ್ಲ. ಹಾಗಾದರೆ ಎಷ್ಟು ಅಂತ ಯೋಚಿಸಿ ನೀವು ಸರಿ ಉತ್ತರ ಹೇಳಿ.

ಎಷ್ಟೇ ಯೋಚಿಸಿದ್ರೂ ನಿಮಗೆ 20 ಸರಿ ಉತ್ತರ ಅಂತ ಅನ್ನಿಸ್ತಾ ಇದ್ಯಾ, ಹಾಗಾದರೆ ನಾವು ಹೇಳ್ತಿವಿ ಕೇಳಿ. ಸರಿ ಉತ್ತರ 22 ಯಾಕೆ ಅಂತೀರಾ, ರೈತ ಹೊಲದಲ್ಲಿ ಪ್ರಾಣಿಗಳ ಜೊತೆ ರೈತ ಕೂಡ ಇದ್ದ. ಹಾಗಾಗಿ ಅವರ 2 ಕಾಲು ಸೇರಿ ಒಟ್ಟು 22 ಕಾಲುಗಳು ಅವನ ಹೊಲದಲ್ಲಿವೆ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

ಫ್ಲೆಮಿಂಗೊಗಳ ನಡುವೆ ಅಡಗಿರುವ ಮಹಿಳೆಯನ್ನು ಗುರುತಿಸಲು ನಿಮ್ಮಿಂದ ಸಾಧ್ಯವೇ? ಕಣ್ಣು ಸೂಕ್ಷ್ಮ ಇದ್ರೆ ಟ್ರೈ ಮಾಡಿ

ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ರಾಶಿ ಫ್ಲೆಮಿಂಗೊಗಳಿವೆ. ಈ ಸುಂದರ ಪಕ್ಷಿಗಳ ನಡುವೆ ಮಹಿಳೆಯೊಬ್ಬಳು ಅವಿತಿದ್ದಾಳೆ. ಅವಳು ಎಲ್ಲಿದ್ದಾಳೆ ಎಂದು ನೀವು ಕಂಡುಹಿಡಿಯಬೇಕು.

ಚಿರತೆ ಮಲಗಿರುವ ಈ ಚಿತ್ರದಲ್ಲಿ ಮೀನೊಂದು ಅಡಗಿದೆ, ಅದು ಎಲ್ಲಿದೆ; ಕಣ್ಣು ಸೂಕ್ಷ್ಮ ಇದ್ರೆ ಥಟ್ಟಂತ ಉತ್ತರ ಹೇಳಿ

ಚಿರತೆಯೊಂದು ಮರದ ಮೇಲೆ ಮಲಗಿರುವ ಈ ಚಿತ್ರದಲ್ಲಿ ಒಂದು ಮೀನು ಕೂಡ ಅಡಗಿದೆ. ಅದು ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮಗಿರೋದು ಕೇವಲ 10 ಸೆಕೆಂಡ್ ಸಮಯ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.