Brain Teaser: ಇಲ್ಲಿರುವ 4 ಮಂದಿಯಲ್ಲಿ ಅತ್ಯಂತ ಮೂರ್ಖ ಯಾರು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಒಂದು ಮರ ಹಾಗೂ 4 ಜನ ಇರುವ ಈ ಬ್ರೈನ್ ಟೀಸರ್‌ನಲ್ಲಿ ಅತ್ಯಂತ ಮೂರ್ಖ ಯಾರು ಎಂದು ನೀವು ಕಂಡುಹಿಡಿಯಬೇಕು. ನಿಮ್ಮ ಐಕ್ಯೂ ನಿಜಕ್ಕೂ ಹೈ ಇದ್ದರೆ ನೀವು 5 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಈ ಬ್ರೈನ್ ಟೀಸರ್ ನಿಮ್ಮ ಬುದ್ಧಿವಂತಿಕೆ ಪರೀಕ್ಷೆ ಮಾಡುವುದು ಸುಳ್ಳಲ್ಲ. ನಿಮ್ಮ ಸಮಯ ಈಗ ಶುರು…
ನೀವು ಬುದ್ಧಿವಂತರು ಎಂದು ನಿಮಗೆ ಅನ್ನಿಸುತ್ತಾ, ಹಾಗಾದರೆ ದಡ್ಡರನ್ನು ಹುಡುಕುವ ಸವಾಲು ನಿಮಗಾಗಿ ಇಲ‍್ಲಿದೆ. ಇಂದಿನ ಬ್ರೈನ್ ಟೀಸರ್ ಚಿತ್ರವು ದಡ್ಡರನ್ನು ಹುಡುಕುವ ಸವಾಲು ಹಾಕುತ್ತಿದೆ. ಮರದ ಹಾಗೂ 4 ಜನ ಇರುವ ಈ ಚಿತ್ರದಲ್ಲಿ ಅತ್ಯಂತ ದಡ್ಡ ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು.
ನಿಮ್ಮ ಗಮನಶಕ್ತಿ ಹಾಗೂ ಯೋಚನಾಶಕ್ತಿ ಎರಡನ್ನೂ ಉಪಯೋಗಿಸಿ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಬೇಕು. ಇಂತಹ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ನಿಮ್ಮಲ್ಲಿ ಯೋಚನಾಶಕ್ತಿ ವೃದ್ಧಿಸುತ್ತದೆ. ನಿಮ್ಮಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಈ ಎಲ್ಲದರ ಜೊತೆಗೆ ಬ್ರೈನ್ ಟೀಸರ್‌ಗಳು ಒಂದು ರೀತಿಯ ಮೋಜು ಸಿಗುವಂತೆ ಮಾಡುವುದು ಸುಳ್ಳಲ್ಲ.
ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಒಂದು ದೊಡ್ಡ ಮರವಿದೆ. ಇದರಲ್ಲಿ ಎಡಗಡೆಯ ಕೊಂಬೆಯ ಮೇಲೆ ಇಬ್ಬರು ವ್ಯಕ್ತಿಗಳು ಕುಳಿತಿದ್ದಾರೆ. ಬಲಗಡೆಯ ಕೊಂಬೆಯ ಮೇಲೆ ವ್ಯಕ್ತಿಯೊಬ್ಬ ಕುಳಿತಿದ್ದಾನೆ. ಎಡಗಡೆಯ ಕೊಂಬೆಯನ್ನು ಮೂರನೇ ವ್ಯಕ್ತಿ ಕತ್ತರಿಸುತ್ತಿದ್ದಾನೆ. 2ಎರಡನೇ ವ್ಯಕ್ತಿ ಕೂಡ ತಾನು ಕೂತಿರುವ ಕೊಂಬೆಯನ್ನು ಕತ್ತರಿಸುತ್ತಿದ್ದಾನೆ. ನಾಲ್ಕನೇ ವ್ಯಕ್ತಿ ಅಂದರೆ ಬಲಗಡೆ ಕೂತಿರುವ ವ್ಯಕ್ತಿ ತಾನು ಕೂತ ಕೊಂಬೆಯನ್ನು ಕತ್ತರಿಸುತ್ತಿದ್ದಾನೆ. ಮೊದಲನೇ ವ್ಯಕ್ತಿ ಮಾತ್ರ ಸುಮ್ಮನೆ ಕೂತಿದ್ದಾನೆ. ಹಾಗಾದರೆ ಈ 4 ಮಂದಿಯಲ್ಲಿ ಅತ್ಯಂತ ಮೂರ್ಖ ಯಾರು ಎಂದು ನೀವು ಕಂಡು ಹಿಡಿಯಬೇಕು. ನಿಮಗಿರೋದು ಕೇವಲ 5 ಸೆಕೆಂಡ್ ಸಮಯ. ಅಷ್ಟ್ರರಲ್ಲಿ ಮೂರ್ಖ ಯಾರು ಎಂದು ನೀವು ಕಂಡುಹಿಡಿಯಬೇಕು.
ಇದರಲ್ಲಿ ಮೂರ್ಖ ಯಾರು ಎಂದು 5 ಸೆಕೆಂಡ್‌ನಲ್ಲಿ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಯ್ತ, ಸಾಧ್ಯವಾಗಿಲ್ಲ ಎಂದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಚಿತ್ರವನ್ನು ಸರಿಯಾಗಿ ಗಮನಿಸಿ ನೋಡಿ. ಈಗಲೂ ತಿಳಿಯಲಿಲ್ಲ ಎಂದರೆ ಕೇಳಿ. ಈ ಚಿತ್ರದಲ್ಲಿ ಅತ್ಯಂತ ಮೂರ್ಖ ಎಂದರೆ 4ನೇ ವ್ಯಕ್ತಿ. ಯಾಕೆಂದರೆ ಅವನು ತಾನು ಕುಳಿತ ಕೊಂಬೆಯನ್ನು ತಾನೇ ಕತ್ತರಿಸಿಕೊಳ್ಳುತ್ತಿದ್ದಾನೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ನಿಮ್ಮ ಕಣ್ಣು ತುಂಬಾ ಸೂಕ್ಷ್ಮವಾಗಿದ್ಯಾ, ಚಿತ್ರದಲ್ಲಿ ಹುಲಿ ಎಲ್ಲಿದೆ ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ
ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಆಗಿದೆ ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಾಡಿನ ದೃಶ್ಯವಿದೆ. ಈ ಚಿತ್ರದಲ್ಲಿ ಹುಲಿಯೊಂದು ಅಡಗಿದೆ. ಆ ಹುಲಿ ಎಲ್ಲಿದೆ ಎಂದು ನೀವು 30 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗೆ ಇಲ್ಲಿದೆ ಸವಾಲು.
Brain Teaser: ಪತ್ತೇದಾರಿಕೆ ಮಾಡೋದ್ರಲ್ಲಿ ನೀವು ಪಂಟರಾದ್ರೆ ಈ 5 ಜನರಲ್ಲಿ ಕೊಲೆಗಾರ ಯಾರು ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ
ಪತ್ತೇದಾರಿ ಕೆಲಸ ಮಾಡೋದ್ರಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದು ಕೊಲೆ ನಡೆದಿರುವ ವಿವರ ಇದ್ದು, 5 ಜನರಲ್ಲಿ ಕೊಲೆಗಾರ ಯಾರು ಎಂದು ನೀವು ಕಂಡು ಹಿಡಿಯಬೇಕು. ಇದು ನಿಮಗಿರುವ ಸವಾಲು. ನಿಮ್ಮ ಸಮಯ ಈಗ ಶುರು.