Brain Teaser: ಮೆದುಳಿನ ಸಾಮರ್ಥ್ಯ ಪರೀಕ್ಷೆ ಮಾಡಲು ಇಲ್ಲಿದೆ ಒಂದು ಚಾಲೆಂಜ್‌, 15 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಮೆದುಳಿನ ಸಾಮರ್ಥ್ಯ ಪರೀಕ್ಷೆ ಮಾಡಲು ಇಲ್ಲಿದೆ ಒಂದು ಚಾಲೆಂಜ್‌, 15 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಿ

Brain Teaser: ಮೆದುಳಿನ ಸಾಮರ್ಥ್ಯ ಪರೀಕ್ಷೆ ಮಾಡಲು ಇಲ್ಲಿದೆ ಒಂದು ಚಾಲೆಂಜ್‌, 15 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಿ

ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಚಿತ್ರವಿದೆ. ಈ ಚಿತ್ರದಲ್ಲಿರುವ ಪ್ರಶ್ನೆಗೆ 15 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ. ಎಕ್ಸ್‌ನಲ್ಲಿ ವೈರಲ್‌ ಆದ ಈ ಬ್ರೈನ್‌ ಟೀಸರ್‌ ನಿಮ್ಮ ತಲೆಗೆ ಹುಳ ಬಿಡೋದು ಖಂಡಿತ.

15 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಸರಿ ಉತ್ತರ ಹೇಳಿ, ಮೆದುಳಿಗೊಂದು ಚಾಲೆಂಜ್‌
15 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಸರಿ ಉತ್ತರ ಹೇಳಿ, ಮೆದುಳಿಗೊಂದು ಚಾಲೆಂಜ್‌

ಸಾಮಾಜಿಕ ಜಾಲತಾಣಗಳು ಅಗ್ರಸ್ಥಾನ ಪಡೆದಿರುವ ಈ ಜಗತ್ತಿನಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಟ್ರೆಂಡ್‌ಗಳು ಬದಲಾಗುತ್ತಿರುತ್ತವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್‌ ಟೀಸರ್‌ ಟ್ರೆಂಡ್‌ಗಳು ಮಾತ್ರ ಬದಲಾಗದೇ ಉಳಿದಿವೆ. ಅದರಲ್ಲೂ ಗಣಿತದ ಪಜಲ್‌ ಇರುವ ಬ್ರೈನ್‌ ಟೀಸರ್‌ಗಳಿಗೆ ವಿಶೇಷ ಅಭಿಮಾನಿಗಳಿದ್ದಾರೆ. ನೆಟ್ಟಿಗರು ಈ ಬ್ರೈನ್‌ ಟೀಸರ್‌ಗಳಿಗೆ ಉತ್ತರ ಕಂಡುಹಿಡಿಯಲು ಕಾಯುತ್ತಿರುತ್ತಾರೆ. ಇದು ಹಲವರಿಗೆ ಟೈಮ್‌ಪಾಸ್‌ಗೆ ಹೇಳಿ ಮಾಡಿಸಿದ ಗೇಮ್‌ನಂತಾಗಿದೆ. ನೀವು ಕೂಡ ಬ್ರೈನ್‌ ಟೀಸರ್‌ ಪ್ರೇಮಿಯಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಚಿತ್ರವಿದೆ.

ಇಂದಿನ ಬ್ರೈನ್‌ ಟೀಸರ್‌ನಲ್ಲಿ ಇರೋದು ಗಣಿತದ ಪಜಲ್‌. ಹಾಗಂತ ಇದು ಸುಲಭ ಗಣಿತ ಖಂಡಿತ ಅಲ್ಲ. ಲಾಜಿಕಲ್‌ ಥಿಂಕಿಂಗ್‌ ಇರುವ ಈ ಗಣಿತದ ಪಜಲ್‌ ನಿಮ್ಮ ಮೆದುಳಿಗೆ ಒಂದಿಷ್ಟು ಕೆಲಸ ಕೊಡುತ್ತದೆ. ಇದರಲ್ಲಿ 4 ಪ್ರಶ್ನೆ ಇದ್ದು, 3 ಕ್ಕೆ ಉತ್ತರ ಕೊಡಲಾಗಿದೆ, 4 ನೇ ಸೂತ್ರಕ್ಕೆ ಸರಿ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಸವಾಲು.

Brainy Quiz ಎನ್ನುವ ಎಕ್ಸ್‌ ಪುಟದಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್ ಟೀಸರ್‌ ಇದಾಗಿದೆ. ಈ ಚಿತ್ರದಲ್ಲಿರುವ ಲಾಜಿಕಲ್‌ ಪ್ರಶ್ನೆಯು ನೆಟ್ಟಿಗರ ಗಮನ ಸೆಳೆದಿದೆ. ಈ ಪ್ರಶ್ನೆಗೆ ಕೇವಲ 15 ಸೆಕೆಂಡ್‌ ಒಳಗೆ ಸರಿ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಸವಾಲು.

12+21=3, 24+42=16, 36+63=27 ಆದರೆ 47+74= ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು. ಈ ಪ್ರಶ್ನೆ ವೈರಲ್‌ ಆಗಿದ್ದು, ಹಲವು ನೆಟ್ಟಿಗರು ಸರಿ ಉತ್ತರ ಕಂಡುಹಿಡಿಯುವ ಸಲುವಾಗಿ ಮೆದುಳಿಗೆ ಹುಳ ಬಿಟ್ಟುಕೊಂಡಿದ್ದಾರೆ. ನೀವು ಗಣಿತದಲ್ಲಿ ಎಕ್ಸ್‌ಪರ್ಟ್‌ ಅಂತಾದ್ರೆ, ಲಾಜಿಕಲ್‌ ರೀಸನಿಂಗ್‌ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯೋದು ನಿಮಗೆ ಇಷ್ಟ ಅಂತಾದ್ರೆ ಈ ಪ್ರಶ್ನೆಗೆ ಸರಿ ಉತ್ತರ ಹೇಳಲು ಪ್ರಯತ್ನಿಸಿ.

ಇಂತಹ ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹೇಳುವ ಪ್ರಯತ್ನ ಮಾಡುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ವೃದ್ಧಿಯಾಗುತ್ತದೆ. ಇದು ನಮಗೆ ಮೋಜು ನೀಡುತ್ತದೆ. ಇದರಿಂದ ನಾವು ಚಿಂತೆ, ಒತ್ತಡಗಳಿಂದ ಹೊರ ಬರಲು ಸಾಧ್ಯವಿದೆ. ಭಾನುವಾರದ ದಿನ ನಿಮ್ಮ ಬೇಸರ ಕಳೆಯಲು ಏನಾದ್ರೂ ಮಾಡ್ಬೇಕು ಅಂತಿದ್ರೆ ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿ. ಉತ್ತರ ಕಂಡುಹಿಡಿಯಲು ಸಾಧ್ಯವಾದರೆ ಇದನ್ನು ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಕಳುಹಿಸಿ ಅವರ ಜಾಣ್ಮೆಯನ್ನು ಪರೀಕ್ಷೆ ಮಾಡಿ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.