Brain Teaser: ಗುಂಡನ ಬಳಿ ಒಟ್ಟು ಎಷ್ಟು ಹಣವಿದೆ, ನೀವು ನಿಜಕ್ಕೂ ಬುದ್ಧಿವಂತರಾದ್ರೆ ಥಟ್ಟಂತ ಉತ್ತರ ಹೇಳಿ
ಗುಂಡನಿಗೆ ಅಮ್ಮ–ಅಮ್ಮ, ಚಿಕ್ಕಪ್ಪ–ಚಿಕ್ಕಮ್ಮ ಎಲ್ಲರೂ ಹಣ ಕೊಡುತ್ತಾರೆ. ಗುಂಡನ ಬಳಿಯೂ ಒಂದಿಷ್ಟು ಹಣವಿತ್ತು, ಹಾಗಾದರೆ ಈಗ ಗುಂಡನ ಬಳಿ ಒಟ್ಟು ಎಷ್ಟು ಹಣವಿದೆ. ನೀವು ಗಣಿತದಲ್ಲಿ ಶಾರ್ಪ್ ಆದ್ರೆ ಥಟ್ಟಂತ ಉತ್ತರ ಹೇಳಿ.

ಅಂತರ್ಜಾಲದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಈ ಬ್ರೈನ್ ಟೀಸರ್ ಶಾಲಾ ದಿನಗಳ ನಮ್ಮ ಗಣಿತದ ಲೆಕ್ಕವನ್ನು ನೆನಪಿಸುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವವರಾದರೆ ಈ ಪ್ರಶ್ನೆ ಖಂಡಿತ ನಿಮಗೆ ಕಷ್ಟ ಎನ್ನಿಸೊಲ್ಲ. ಯಾಕೆಂದರೆ ನೀವು ಇದಕ್ಕಿಂತ ಕಷ್ಟದ ಲಾಜಿಕಲ್ ಪ್ರಶ್ನೆಗಳನ್ನು ಎದುರಿಸಿ ಇರುತ್ತೀರಿ.
ನಿಮಗೆ ಗಣಿತ ನಿಜಕ್ಕೂ ಇಷ್ಟ ಎಂದಾದರೆ ಈ ಪ್ರಶ್ನೆಗೆ ನೀವು ಥಟ್ಟಂತ ಉತ್ತರ ಹೇಳಬಹುದು. ಪ್ರಶ್ನೆ ಒಂಥರಾ ಕಿರಿಕ್ ಆಗಿದೆ, ಉತ್ತರ ಹುಡುಕಲು ನೀವು ಮೆದುಳಿಗೆ ಕಿಕ್ ಕೊಡಬೇಕು. ಇದಕ್ಕೆ ಉತ್ತರ ಕಂಡುಹಿಡಿಯಲು ಮೆದುಳಿಗೆ ಸ್ವಲ್ಪ ಕೆಲಸ ಕೊಡಿ. ಈ ಪ್ರಶ್ನೆಗೆ ನೀವು ಖಂಡಿತ ಸುಲಭವಾಗಿ ಉತ್ತರ ಕಂಡುಹಿಡಿಯಬಹುದು.
ಇಂತಹ ಬ್ರೈನ್ ಟೀಸರ್‌ಗಳು ಮೋಜು ನೀಡುವುದು ಮಾತ್ರವಲ್ಲ, ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುವಂತೆ ಮಾಡುತ್ತವೆ, ಇದಕ್ಕಾಗಿ ನಾವೊಂದಿಷ್ಟು ಹೊತ್ತ ಯಾರೆಲ್ಲಾ ಯೋಚನೆಗಳನ್ನು ಬದಿಗಿಟ್ಟು ನಮ್ಮ ಮೆದುಳನ್ನು ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಕೆಲಸಕ್ಕಾಗಿ ಉಪಯೋಗಿಸುತ್ತೇವೆ, ಇದರಿಂದ ನಮ್ಮ ಮನಸ್ಸಿನ ಒತ್ತಡ, ಚಿಂತೆ, ಆತಂಕವೂ ಮರೆಯಾಗುತ್ತದೆ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಇರುವ ಪ್ರಶ್ನೆ ಹೀಗಿದೆ: ಗುಂಡನ ಬಳಿ 13000 ರೂ ಇತ್ತು, ನಮ್ಮ ಅಮ್ಮ ಅವನಿಗೆ 10000 ರೂ ಕೊಟ್ಟರೆ, ಅಪ್ಪ 30000 ರೂ ಕೊಡುತ್ತಾರೆ. ಆಂಟಿ ಮತ್ತು ಅಂಕಲ್ 1 ಲಕ್ಷ ಕೊಡುತ್ತಾರೆ. ಗುಂಡನ ಬಳಿ ಇನ್ನೂ 5000 ರೂ ಇತ್ತು. ಹಾಗಾದರೆ ಈಗ ಗುಂಡನ ಬಳಿ ಒಟ್ಟು ಎಷ್ಟು ಹಣವಿದೆ? ಈ ಪ್ರಶ್ನೆಗೆ ನೀವು ಥಟ್ಟಂತ ಉತ್ತರ ಹೇಳಬೇಕಾಗಿದೆ.
ಈ ಮೆದುಳಿಗೆ ಹುಳ ಬಿಡುವ ಪ್ರಶ್ನೆಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾದರೆ ನೀವು ನಿಜಕ್ಕೂ ಬುದ್ಧಿವಂತರು, ನೀವು ಮಾತ್ರ ಬುದ್ಧಿವಂತರಾದ್ರೆ ಸಾಕಾ, ನಿಮ್ಮ ಸ್ನೇಹಿತರು ಎಷ್ಟು ಬುದ್ಧಿವಂತರು ಎಂದು ಪರೀಕ್ಷೆ ಮಾಡೋದು ಬೇಡ್ವಾ, ಅವರ ಬುದ್ಧಿವಂತಿಕೆಯನ್ನೂ ಪರೀಕ್ಷಿಸಿಲು ಈ ಬ್ರೈನ್ ಟೀಸರ್ ಪ್ರಶ್ನೆಯನ್ನು ಅವರಿಗೂ ಕಳುಹಿಸಿ, ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: 11=8, 33=216 ಆದರೆ 44 = ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ಥಟ್ಟಂತ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಈ ಟ್ರಿಕ್ಕಿ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಟ್ರೈ ಮಾಡಿ. 44 = ಎಷ್ಟು? ಥಟ್ಟಂತ ಹೇಳಿ.