Brain Teaser: ಅಲಿಯ ವಯಸ್ಸೆಷ್ಟು? ನೀವು ನಿಜಕ್ಕೂ ಬುದ್ಧಿವಂತರಾದ್ರೆ ಈ ಪ್ರಶ್ನೆಗೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ಗೆ ಸರಿ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ. 15 ಸೆಕೆಂಡ್‌ನಲ್ಲಿ ಅಲಿಯ ನಿಜವಾದ ವಯಸ್ಸು ಎಷ್ಟು ಎಂದು ನೀವು ಕಂಡುಹಿಡಿಯಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದರಲ್ಲಿ ಕೇಳುವ ಪ್ರಶ್ನೆಗಳು ಒಂದಕ್ಕಿಂತ ಒಂದು ಕ್ಲಿಷ್ಟಕರವಾಗಿದ್ದು, ನಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವಂತಿರುತ್ತದೆ. ಅದರಲ್ಲೂ ನಿರ್ದಿಷ್ಟ ಸಮಯದ ಒಳಗೆ ಹೇಳಬೇಕು ಎನ್ನುವ ಷರತ್ತು ಕೂಡ ವಿಧಿಸುವ ಕಾರಣದಿಂದ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಹಿಡಿಯುವಲ್ಲಿ ಹಲವರು ಸೋಲುತ್ತಾರೆ.
ಆದರೂ ಈ ಬ್ರೈನ್ ಟೀಸರ್‌ಗಳು ನೆಟ್ಟಿಗರಲ್ಲಿ ಕ್ರೇಜ್ ಹುಟ್ಟು ಹಾಕಿದ್ದು ಸುಳ್ಳಲ್ಲ. ಇವುಗಳಿಗೆ ಬರುವ ಕಾಮೆಂಟ್‌ಗಳನ್ನು ನೋಡಿದ್ರೆ ಜನರು ಇದರ ಮೇಲೆ ಎಷ್ಟು ಕ್ರೇಜ್ ಇರಿಸಿಕೊಂಡಿದ್ದಾರೆ ಎನ್ನುವುದು ನಿಮಗೂ ಅರ್ಥವಾಗುತ್ತದೆ. ಒಂದೆರಡು ಬ್ರೈನ್ ಟೀಸರ್‌ಗಳನ್ನು ಬಿಡಿಸುವ ಪ್ರಯತ್ನ ಮಾಡಿದರೆ ನಂತರ ನೀವೇ ಈ ಬ್ರೈನ್ ಟೀಸರ್‌ಗಳಿಗೆ ಅಭಿಮಾನಿಯಾಗುತ್ತೀರಿ.
ಇಂದಿನ ಬ್ರೈನ್ ಟೀಸರ್‌ನಲ್ಲಿರುವುದು ಒಂದು ಲಾಜಿಕಲ್ ಪ್ರಶ್ನೆ. ಈ ಪ್ರಶ್ನೆ ಎಂಥವರ ಮೆದುಳಿಗೂ ಹುಳ ಬಿಡುವಂತಿದೆ. ಇದಕ್ಕೆ ನೀವು ಕೇವಲ 15 ಸೆಕೆಂಡ್‌ನಲ್ಲಿ ಉತ್ತರ ಕಂಡುಹಿಡಿಯಬೇಕು. ಪ್ರಶ್ನೆ ನಿಮ್ಮಲ್ಲಿ ಗೊಂದಲ ಮೂಡಿಸಿದ್ರೂ ಉತ್ತರ ಕಂಡುಹಿಡಿಯೋದು ಖಂಡಿತ ಸವಾಲು ಎನ್ನಿಸುವುದಿಲ್ಲ.
ಈ ಬ್ರೈನ್ ಟೀಸರ್ ಪ್ರಶ್ನೆ ಹೀಗಿದೆ: ಜೇಕ್‌ಗೆ 9 ವರ್ಷವಿದ್ದಾಗ ಅಲಿ ಅವಗಿನಿಂತ 3 ಪಟ್ಟು ವಯಸ್ಸಿನಲ್ಲಿ ಚಿಕ್ಕವನಿದ್ದ. ಈಗ ಜೇಕ್‌ಗೆ 30 ವರ್ಷ. ಹಾಗಾದರೆ ಈಗ ಅಲಿಯ ವಯಸ್ಸೆಷ್ಟು?
ಈ ಪ್ರಶ್ನೆಗೆ ನಿಮ್ಮಿಂದ 15 ಸೆಕೆಂಡ್ ಒಳಗೆ ಸರಿ ಉತ್ತರ ಕಂಡು ಹಿಡಿಯಲು ಸಾಧ್ಯವೇ? ನೀವು ನಿಜಕ್ಕೂ ಬುದ್ಧಿವಂತರಾದ್ರೆ ಇದಕ್ಕೆ ನೀವು ಉತ್ತರ ಕಂಡುಹಿಡಿಯೋದು ಮಾತ್ರವಲ್ಲ, ಇದನ್ನು ನಿಮ್ಮ ಸ್ನೇಹಿತರಿಗೂ ಕಳುಹಿಸಿ ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ.
ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡುವುದರಿಂದ ನಮ್ಮ ಮೆದಳು ಚುರುಕಾಗುತ್ತದೆ. ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ಮನಸ್ಸಿಗೆ ಖುಷಿ ಸಿಗುತ್ತದೆ. ಜೊತೆಗೆ ಟೈಮ್‌ಪಾಸ್ ಕೂಡ ಆಗುತ್ತದೆ. ಆ ಕಾರಣಕ್ಕೆ ಈಗ ಬ್ರೈನ್ ಟೀಸರ್‌ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ.
ಈ ಬ್ರೈನ್ ಟೀಸರ್ ಅನ್ನೂ ಓದಿ: Brain Teaser: ಇಲ್ಲಿರುವ ಸೂತ್ರ ಬಳಸಿಕೊಂಡು ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಬೇಕು, ಗಣಿತ ಎಕ್ಸ್ಪರ್ಟ್ಸ್ ಟ್ರೈ ಮಾಡಿ