Brain Teaser: ನಿಮ್ಮ ದೃಷ್ಟಿ ನಿಜಕ್ಕೂ ಸೂಕ್ಷ್ಮವಾಗಿದ್ರೆ ಚಿತ್ರದಲ್ಲಿ ಇನ್ನೊಬ್ಬ ವ್ಯಕ್ತಿ ಎಲ್ಲಿದ್ದಾನೆ ಹುಡುಕಿ; ನಿಮಗಿದು ಚಾಲೆಂಜ್‌
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ದೃಷ್ಟಿ ನಿಜಕ್ಕೂ ಸೂಕ್ಷ್ಮವಾಗಿದ್ರೆ ಚಿತ್ರದಲ್ಲಿ ಇನ್ನೊಬ್ಬ ವ್ಯಕ್ತಿ ಎಲ್ಲಿದ್ದಾನೆ ಹುಡುಕಿ; ನಿಮಗಿದು ಚಾಲೆಂಜ್‌

Brain Teaser: ನಿಮ್ಮ ದೃಷ್ಟಿ ನಿಜಕ್ಕೂ ಸೂಕ್ಷ್ಮವಾಗಿದ್ರೆ ಚಿತ್ರದಲ್ಲಿ ಇನ್ನೊಬ್ಬ ವ್ಯಕ್ತಿ ಎಲ್ಲಿದ್ದಾನೆ ಹುಡುಕಿ; ನಿಮಗಿದು ಚಾಲೆಂಜ್‌

ಹೊಳೆಯ ಸಮೀಪ ಹೋಗುತ್ತಿರುವ ಕಾಡು ಮನುಷ್ಯನ ಚಿತ್ರವಿರುವ ಈ ಬ್ರೈನ್ ಟೀಸರ್‌ನಲ್ಲಿ ಇನ್ನೊಬ್ಬ ಮನುಷ್ಯ ಇದ್ದಾನೆ. ಅವನು ಎಲ್ಲಿದ್ದಾನೆ ಎಂದು ನೀವು ಕಂಡುಹಿಡಿಯಬೇಕು. ಅದು ನಿಮಗಿರುವ ಚಾಲೆಂಜ್‌.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮೆಚ್ಚುಗೆ ಗಳಿಸುತ್ತಿದೆ. ಯಾಕೆಂದರೆ ಈ ಚಿತ್ರಗಳು ನೋಡಲು ವಿಭಿನ್ನವಾಗಿದ್ದು ಕಣ್ಣಿಗೆ ಸವಾಲು ಹಾಕುತ್ತವೆ. ಸುಂದರವಾಗಿದ್ದರೂ ವಿಲಕ್ಷಣವಾಗಿ ಕಾಣಿಸುವ ಈ ಚಿತ್ರಗಳಲ್ಲಿ ಕಣ್ಣು, ಮೆದುಳಿಗೆ ಪ್ರಶ್ನೆ ಹಾಕುವ ಸವಾಲುಗಳಿರುತ್ತವೆ. ಆ ಕಾರಣಕ್ಕೆ ಹಲವರು ಬ್ರೈನ್ ಟೀಸರ್, ಆಪ್ಟಿಕಲ್ ಇಲ್ಯೂಷನ್‌ಗಳನ್ನು ಇಷ್ಟಪಡುತ್ತಾರೆ.

ಬಹಳ ಬುದ್ಧಿವಂತಿಕೆಯಿಂದ ಈ ಚಿತ್ರಗಳನ್ನು ವಿನ್ಯಾಸ ಮಾಡಲಾಗುತ್ತದೆ. ಎಷ್ಟೇ ಬುದ್ಧಿವಂತರು ನೀವಾದ್ರೂ ಇದನ್ನು ಬೇಧಿಸಿ, ಉತ್ತರ ಕಂಡುಹಿಡಿಯಲು ಪರದಾಡಬೇಕಾಗುತ್ತದೆ. ಆದರೆ ಇದರಿಂದ ಮಜಾ ಸಿಗುವುದಂತೂ ಖಂಡಿತ. ಬ್ರೈನ್ ಟೀಸರ್‌ಗಳು ಟೈಮ್ ಪಾಸ್‌ ಮಾಡಲು ಉತ್ತಮ ಸರಕು ಎಂದರೂ ತಪ್ಪಾಗಲಿಕ್ಕಿಲ್ಲ. ಆ ಕಾರಣಕ್ಕೂ ಇದು ನೆಟ್ಟಿಗರಿಗೆ ಅಚ್ಚುಮೆಚ್ಚು ಎನ್ನಿಸಿದೆ.

@br4inteaserhub ಎನ್ನುವ ಇನ್‌ಸ್ಟಾಗ್ರಾಂ ಪುಟದಲ್ಲಿ ವಿಭಿನ್ನವಾದ ಒಂದು ಬ್ರೈನ್ ಟೀಸರ್‌ ಅನ್ನು ಪೋಸ್ಟ್ ಮಾಡಲಾಗಿದೆ. ಹೊಳೆ ಹಾಗೂ ಕಾಡಿನ ದೃಶ್ಯವಿರುವ ಸುಂದರ ಚಿತ್ರಣದಲ್ಲಿ ಒಬ್ಬ ಬೇಟೆಗಾರ ಕಾಣಿಸುತ್ತಾನೆ. ಕೈಯಲ್ಲಿ ಕೊಡಲಿ ಹಿಡಿದಿರುವ ಬೇಟೆಗಾರನ ಹೆಗಲ ಮೇಲೆ ದೊಡ್ಡ ಪಕ್ಷಿಯೊಂದು ಕೂತಿದೆ. ಈ ಚಿತ್ರದಲ್ಲಿ ನಿಮಗೊಂದು ಸವಾಲಿದೆ. ಆ ಸವಾಲು ಏನು ಎಂದರೆ ಚಿತ್ರದಲ್ಲಿರುವ ಇನ್ನೊಬ್ಬ ಮನುಷ್ಯನನ್ನು ಹುಡುಕುವುದು.

ಮೇಲ್ನೋಟಕ್ಕೆ ಈ ಚಿತ್ರದಲ್ಲಿ ಇನ್ನೊಬ್ಬ ಮನುಷ್ಯ ಕಾಣಲು ಸಾಧ್ಯವೇ ಇಲ್ಲ. ಆದರೆ ಇದರಲ್ಲಿ ಇನ್ನೊಬ್ಬ ಮನುಷ್ಯ ಖಂಡಿತ ಇದ್ದಾನೆ. ನಿಮ್ಮ ಕಣ್ಣು ನಿಜಕ್ಕೂ ಸೂಕ್ಷ್ಮವಾಗಿದ್ರೆ ಇದರಲ್ಲಿ ಇನ್ನೊಬ್ಬ ಮನುಷ್ಯ ಎಲ್ಲಿದ್ದಾನೆ ಎಂದು ಹುಡುಕಿ.

ಇನ್ನೊಬ್ಬ ಮನುಷ್ಯನನ್ನು ನಿಮಗೆ ಹುಡುಕಲು ಸಾಧ್ಯವಾಯ್ತು ಎಂದರೆ ನಿಮ್ಮ ಕಣ್ಣಿನ ದೃಷ್ಟಿ ನಿಜಕ್ಕೂ ತೀಕ್ಷ್ಮವಾಗಿದೆ ಎಂದರ್ಥ. ಹಾಗಂತ ನಿಮ್ಮ ಕಣ್ಣಿನ ಪರೀಕ್ಷೆ ಮಾತ್ರ ಮಾಡಿದ್ರೆ ಸಾಕಾ, ನಿಮ್ಮ ಆತ್ಮೀಯರ ಪರೀಕ್ಷೆಯನ್ನು ಮಾಡೋದು ಬೇಡ್ವಾ. ಅದಕ್ಕಾಗಿ ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೂ ಈ ಬ್ರೈನ್ ಟೀಸರ್ ಚಿತ್ರವನ್ನು ಕಳುಹಿಸಿ, ಅವರಿಂದ ಇನ್ನೊಬ್ಬ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವೇ ನೋಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಈ ಮೂವರಲ್ಲಿ ಮಹಿಳೆಯ ವೇಷ ಧರಿಸಿದ ಪುರುಷ ಯಾರು, 10 ಸೆಕೆಂಡ್‌ ಒಳಗೆ ಕಂಡುಹಿಡಿಯಿರಿ; ನಿಮಗೊಂದು ಚಾಲೆಂಜ್‌

ಯಾವುದೇ ವಿಚಾರ ಅಥವಾ ಚಿತ್ರವನ್ನಾಗಲಿ ಗ್ರಹಿಸುವುದರಲ್ಲಿ ನೀವು ಪಂಟರು ಅಂತಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಚಿತ್ರದಲ್ಲಿ ಮಹಿಳೆಯ ವೇಷ ಧರಿಸಿದ ಪುರುಷ ಯಾರು ಎಂಬುದನ್ನು ಕಂಡುಹಿಡಿಯಿರಿ.

Brain Teaser: ನಿಮ್ಮ ಕಣ್ಣಿಗೊಂದು ಸವಾಲು, ಚಿತ್ರದಲ್ಲಿ ಯಾವ ನಂಬರ್ ಕಾಣಿಸುತ್ತಿದೆ? 9 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಎಂದರೆ ನಮ್ಮಲ್ಲಿ ಭ್ರಮೆ ಹುಟ್ಟಿಸುವುದು ಮಾತ್ರವಲ್ಲ, ನಮ್ಮ ಕಣ್ಣಿಗೆ ಸವಾಲು ಹಾಕುತ್ತವೆ. ಈ ಚಿತ್ರದಲ್ಲಿ ಯಾವ ನಂಬರ್ ಕಾಣುತ್ತಿದೆ, 9 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ.

 

Whats_app_banner