Brain Teaser: ಶೇ 99ರಷ್ಟು ಮಂದಿಗೆ ಸಾಧ್ಯವಾಗದ ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ; 8*8 ಎಷ್ಟು?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದಕ್ಕೆ ಶೇ 99 ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗಿಲ್ಲ. ಇಲ್ಲಿರುವುದು ಸುಲಭ ಗಣಿತವಾದ್ರೂ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. 8*8 ಎಷ್ಟು ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು. ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪರೀಕ್ಷಿಸಿ.
ಬ್ರೈನ್ ಟೀಸರ್‌ಗಳು ನಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವ ಜೊತೆಗೆ ಮೋಜು ನೀಡುತ್ತವೆ. ಇದರಿಂದ ನಮ್ಮ ಮೆದುಳು ಚುರುಕಾಗುವುದು ಸುಳ್ಳಲ್ಲ. ಯಾಕೆಂದರೆ ಇದಕ್ಕೆ ಉತ್ತರ ಹೇಳುವ ಸಲುವಾಗಿ ನಾವು ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ಬ್ರೈನ್ ಟೀಸರ್‌ಗಳಲ್ಲಿ ಹೆಚ್ಚು ವೈರಲ್ ಆಗುವುದು ಗಣಿತದ ಪಜಲ್‌ಗಳು.
ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಗಣಿತದ ಪಜಲ್ ಇದೆ. ಇದು ಮೇಲ್ನೋಟಕ್ಕೆ ಶಾಲಾ ಮಕ್ಕಳ ಗಣಿತದಂತೆ ಸುಲಭವಾಗಿ ಕಾಣುತ್ತದೆ. ಈ ಪ್ರಶ್ನೆ ನೋಡಿದಾಗ ‘ಅಯ್ಯೋ, ಇದಕ್ಕೆ ಉತ್ತರ ಹೇಳಲು ಶೇ 99 ರಷ್ಟು ಜನರಿಗೆ ಸಾಧ್ಯವಾಗಿಲ್ವಾ, ಇದ್ರಲ್ಲೇನಿದೆ ಮಹಾ’ ಅಂತ ಅನ್ನಿಸೋದು ಸಹಜ. ಆದರೆ ಖಂಡಿತ ನೀವು ಅಂದುಕೊಂಡಂತೆ ಇದು ಸುಲಭವಿಲ್ಲ. ಅದಕ್ಕೆ ಉತ್ತರ ಕಂಡುಕೊಳ್ಳಲು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಏನಿದೆ ಎಂಬುದನ್ನು ನೋಡೋಣ. ಇದರಲ್ಲಿರುವ ಪ್ರಶ್ನೆ ಹೀಗಿದೆ 3*3 = 12, 4*4= 20, 5*5= 30, ಆದರೆ 8*8= ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು.
Brainy Quiz ಎನ್ನುವ ಎಕ್ಸ್ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದ್ದು, ಈ ಪೋಸ್ಟ್ ಹಲವರ ಗಮನ ಸೆಳೆದಿದೆ. ಹಲವರು ಇದಕ್ಕೆ ಉತ್ತರ ಹೇಳುವ ಸಲುವಾಗಿ ಮೆದುಳಿಗೆ ಹುಳ ಬಿಟ್ಟುಕೊಂಡಿದ್ದಾರೆ. ಡಿಸೆಂಬರ್ 30 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 70 ಸಾವಿರದಷ್ಟು ಜನ ವೀಕ್ಷಿಸಿದ್ದಾರೆ.
ಈ ಬ್ರೈನ್ ಟೀಸರ್‌ಗಳಿಗೆ ಬಂದ ಕಾಮೆಂಟ್‌ಗಳು ಸಖತ್ ಮಜವಾಗಿದೆ. ಎಕ್ಸ್ ಬಳಕೆದಾರರೊಬ್ಬರು ‘ಈ ಕಾರಣಕ್ಕೆ ನಾನು ಹೈಸ್ಕೂಲ್‌ಗೆ ಗಣಿತಕ್ಕೆ ಗುಡ್‌ಬೈ ಹೇಳಿದ್ದು‘ ಎಂದು ಕಾಮೆಂಟ್ ಮಾಡಿದ್ದಾರೆ. ‘ನನ್ನ ಮೆದುಳು ಯಾಕೋ ತಿರುಗ್ತಾ ಇದೆ‘ ಅಂತ ಎರಡನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ‘10 ನಿಮಿಷ ಕಳೆದ್ರೂ ಮೆದುಳಿಗೆ ಹೋಗಿಲ್ಲ, ಇನ್ನು ನನ್ನ ಕೈಯಲ್ಲಿ ಆಗೊಲ್ಲ‘ ಅಂತ ಇನ್ನೊಬ್ಬರು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ. ಅವರೆಲ್ಲರ ಕಥೆ ಬಿಡಿ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಚಿತ್ರದಲ್ಲಿರುವ ಮಹಿಳೆ ಗಂಡನನ್ನು ಹುಡುಕುತ್ತಿದ್ದಾಳೆ, ಅವಳ ಗಂಡ ಎಲ್ಲಿದ್ದಾನೆ? ಪತ್ತೆ ಮಾಡಲು ನಿಮ್ಮಿಂದ ಸಾಧ್ಯವೇ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ನಿಮಗೆ ಚಾಲೆಂಜ್ ಮಾಡುತ್ತಿದೆ. ಈ ಚಿತ್ರದಲ್ಲಿ ಹಸುವನ್ನು ಹಿಡಿದು ನಿಂತಿರುವ ಈ ಮಹಿಳೆ ತನ್ನ ಗಂಡನನ್ನು ಹುಡುಕುತ್ತಿದ್ದಾಳೆ. ಅವಳ ಗಂಡ ಎಲ್ಲಿದ್ದಾನೆ, ಅವನನ್ನು ಹುಡುಕಲು ನೀವು ಸಹಾಯ ಮಾಡಿ.
Brain Teaser: 11+11=4, 13+13=8 ಆದರೆ 14+14= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಈ ಪ್ರಶ್ನೆಗೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದಕ್ಕೆ 950ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಇಲ್ಲಿರುವ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ನೋಡಿ. ನಿಮಗಿರೋದು ಕೇವಲ 20 ಸೆಕೆಂಡ್ ಸಮಯ. ನಿಮ್ಮ ಸಮಯ ಈಗ ಶುರು.