Brain Teaser: ಚಿತ್ರದಲ್ಲಿ ಅಡಗಿರುವ ನಂಬರ್ ಯಾವುದು, ನಿಮ್ಮ ಕಣ್ಣು ಸೂಕ್ಷ್ಮವಾಗಿದ್ರೆ ಈ ಪ್ರಶ್ನೆಗೆ 8 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಅಡಗಿರುವ ನಂಬರ್ ಯಾವುದು, ನಿಮ್ಮ ಕಣ್ಣು ಸೂಕ್ಷ್ಮವಾಗಿದ್ರೆ ಈ ಪ್ರಶ್ನೆಗೆ 8 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: ಚಿತ್ರದಲ್ಲಿ ಅಡಗಿರುವ ನಂಬರ್ ಯಾವುದು, ನಿಮ್ಮ ಕಣ್ಣು ಸೂಕ್ಷ್ಮವಾಗಿದ್ರೆ ಈ ಪ್ರಶ್ನೆಗೆ 8 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಪ್ಟಿಕಲ್ ಇಲ್ಯೂಷನ್‌ ಚಿತ್ರವೊಂದು ನಿಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವುದು ಸುಳ್ಳಲ್ಲ. ಗೆರೆಗಳಿಂದ ತುಂಬಿರುವ ಈ ಚಿತ್ರದಲ್ಲಿ ಒಂದು ನಂಬರ್ ಬರೆಯಲಾಗಿದೆ ಆ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯವಲ್ಲ, ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಅಂತೆಲ್ಲಾ ಗಾದೆ ಮಾತುಗಳನ್ನು ನೀವು ಕೇಳಿರಬಹುದು. ಇಂದಿನ ಬ್ರೈನ್ ಟೀಸರ್ ಚಿತ್ರಕ್ಕೆ ಈ ಮಾತು ತುಂಬಾನೇ ಹೊಂದಿಕೆಯಾಗುತ್ತದೆ. ಇಂದಿನ ಬ್ರೈನ್‌ ಟೀಸರ್ ಚಿತ್ರ ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿದೆ. ಬ್ಲರ್ ಆಗಿ ಕಾಣಿಸುವ ಈ ಚಿತ್ರದೊಳಗೆ ಒಂದು ನಂಬರ್ ಇದೆ. ಆ ನಂಬರ್ ಯಾವುದು ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು.

ಕಪ್ಪು ಬಣ್ಣ ಚಿತ್ರದ ಮೇಲೆ ಬಿಳಿ ಬಣ್ಣದ ಗೆರೆಗಳಿಂದ ಕೂಡಿರುವ ಈ ಚಿತ್ರದಲ್ಲಿ ಅಡಗಿರುವ ನಂಬರ್ ಯಾವುದು ಎಂದು ನೀವು ಹೇಳಬೇಕು. ಈ ಚಿತ್ರವನ್ನು ದಿಟ್ಟಿಸಿ ನೋಡಿದ್ರೆ ಕಣ್ಣು ನೋವು ಬರೋದು ಖಂಡಿತ. ಆದರೂ ಇದನ್ನು ದಿಟ್ಟಿಸಿ ನೋಡಿದ್ರೆ ಮಾತ್ರ ನೀವು ಉತ್ತರ ಕಂಡುಹಿಡಿಯಲು ಸಾಧ್ಯವಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬ್ರೈನ್ ಟೀಸರ್ ವೈರಲ್ ಆಗಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಸಲುವಾಗಿ ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಕೆಲವರು ಐದಾರು ಸೆಕೆಂಡ್‌ನಲ್ಲಿ ಸರಿ ಉತ್ತರ ಕಂಡುಹಿಡಿದಿದ್ದಾರೆ. Brainy Bits Hub ಎನ್ನುವ ಎಕ್ಸ್‌ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ನಿಮಗೆ ಚಿತ್ರದಲ್ಲಿ ಯಾವುದಾದ್ರೂ ನಂಬರ್ ಕಾಣ್ತಿದ್ಯಾ ಎಂದು ಪ್ರಶ್ನೆ ಕೇಳಲಾಗಿದೆ.

ಈ ಬ್ರೈನ್ ಟೀಸರ್ ಆರಂಭದಲ್ಲಿ ಸಹಜ ಚಿತ್ರದಂತೆ ಕಂಡರೂ ಸೂಕ್ಷ್ಮವಾಗಿ ನೋಡಿದಾಗ ನಿಮ್ಮ ಕಣ್ಣಿಗೆ ನಂಬರ್ ಒಂದು ಕಾಣಿಸುತ್ತದೆ. ನೀವು 8 ಸೆಕೆಂಡ್‌ ಒಳಗೆ ಸರಿಯಾದ ನಂಬರ್ ಕಂಡುಹಿಡಿಯಲು ಸಾಧ್ಯವಾದರೆ ನಿಮ್ಮ ಕಣ್ಣು ತುಂಬಾನೇ ಶಾರ್ಪ್ ಆಗಿದೆ ಎಂದು ಅರ್ಥ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಈ ಮಕ್ಕಳ ನಿಜವಾದ ತಾಯಿ ಯಾರು, ನೀವು ನಿಜಕ್ಕೂ ಬುದ್ಧಿವಂತರಾದ್ರೆ 5 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ

ನೀವು ತುಂಬಾನೇ ಬುದ್ಧಿವಂತರು, ನಿಮ್ಮ ಬುದ್ಧಿವಂತಿಕೆಗೆ ಸಾಟಿಯಿಲ್ಲ ಅಂತ ಅನ್ನಿಸ್ತಾ ಇದ್ಯಾ, ಹಾಗಾದರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಲ್ಲಿರುವ ಬ್ರೈನ್ ಟೀಸರ್‌ನಲ್ಲಿ ಈ ಮಕ್ಕಳ ನಿಜವಾದ ತಾಯಿ ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು. ಅದು ಕೇವಲ 5 ಸೆಕೆಂಡ್‌ ಒಳಗೆ, ನಿಮ್ಮ ಸಮಯ ಈಗ ಶುರು.

Brain Teaser: 13=10, 26=40 ಆದ್ರೆ 52= ಎಷ್ಟು, ಗಣಿತ ನಿಮ್ಮಿಷ್ಟದ ವಿಷಯವಾದ್ರೆ 15 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ

ಗಣಿತದ ಪಜಲ್‌ಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಮೆದುಳಿಗೆ ಹುಳ ಬಿಡುವ ಈ ಪಜಲ್‌ಗಳಿಗೆ ಉತ್ತರ ಹುಡುಕಲು ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇಂದಿನ ಬ್ರೈನ್ ಟೀಸರ್‌ನಲ್ಲಿ 52= ಎಷ್ಟು ಎಂದು ನೀವು ಕಂಡುಹಿಡಿಯಬೇಕು. ನಿಮಗಿರೋದು 15 ಸೆಕೆಂಡ್ ಸಮಯ.

Whats_app_banner