Brain Teaser: ಈ ಸರಳ ಗಣಿತದ ಪಜಲ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ, 9=63, 6=24 ಆದ್ರೆ 4= ಎಷ್ಟು?
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಸರಳ ಗಣಿತದ ಪಜಲ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ, 9=63, 6=24 ಆದ್ರೆ 4= ಎಷ್ಟು?

Brain Teaser: ಈ ಸರಳ ಗಣಿತದ ಪಜಲ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ, 9=63, 6=24 ಆದ್ರೆ 4= ಎಷ್ಟು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ಮೆದುಳಿಗೆ ಹುಳ ಬಿಡುವಂತಿದೆ. ಈ ಪ್ರಶ್ನೆ ಸರಳವಾಗಿದ್ದರೂ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. ಇಲ್ಲಿ 9=63 ಆದರೆ 4= ಎಷ್ಟು ಎಂದು ನೀವು ಹೇಳಬೇಕು. ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಆದ್ರೆ ಉತ್ತರ ಹೇಳೋಕೆ ಟ್ರೈ ಮಾಡಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್ ((X/@brainyquiz))

ಗಣಿತದಲ್ಲಿ ನೀವು ಪಂಟರಾಗಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಬಹುದು. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಲವರ ಮೆದುಳಿಗೆ ಹುಳ ಬಿಟ್ಟಿದ್ದ ಪ್ರಶ್ನೆ ಇದು. ಪ್ರಶ್ನೆ ನೋಡೋಕೆ ಸುಲಭ ಇದ್ರೂ ಉತ್ತರ ಹೇಳೋದು ಖಂಡಿತ ಸುಲಭವಲ್ಲ. ಯಾಕೆಂದರೆ ಅದಕ್ಕೆ ಉತ್ತರ ಹೇಳಲು ನಿಮ್ಮ ಬುದ್ಧಿವಂತಿಕೆ ಅಸಾಧಾರಣವಾಗಿರಬೇಕು. 

ಇಂತಹ ಸಾಕಷ್ಟು ಬ್ರೈನ್ ಟೀಸರ್‌ಗಳು ಎಕ್ಸ್‌, ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತವೆ. ಹಲವಾರು ಪಜಲ್‌ ಪ್ರೇಮಿಗಳು ಬ್ರೈನ್ ಟೀಸರ್ ಅಪ್‌ಲೋಡ್ ಆಗುವುದನ್ನೇ ಕಾಯುತ್ತಿರುತ್ತಾರೆ. ಮಾತ್ರವಲ್ಲ ಸರಿಯಾದ ಉತ್ತರ ಕಂಡುಹಿಡಿದು ಕಾಮೆಂಟ್ ಮೂಲಕ ತಾವು ಕಂಡುಕೊಂಡ ಉತ್ತರವೇನು ಎಂಬುದನ್ನು ತಿಳಿಸುತ್ತಾರೆ. ಹಾಗಾದರೆ ಇವತ್ತಿನ ಬ್ರೈನ್ ಟೀಸರ್‌ನಲ್ಲಿ ಏನಿದೆ ಎಂಬುದನ್ನು ನೋಡೋಣ.

ಇಂದಿನ ಬ್ರೈನ್ ಟೀಸರ್‌ನಲ್ಲಿರುವುದು ಗಣಿತದ ಪಜಲ್‌. ಚಿತ್ರದಲ್ಲಿ ಬರೆದಿರುವಂತೆ ಇದೊಂದು ಸುಲಭದ ಪ್ರಶ್ನೆ. ಆದರೆ ಉತ್ತರ ಸುಲಭ ಇರುತ್ತೆ ಅಂತ ಅಂದುಕೊಳ್ಳಬೇಡಿ. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆ ಹೀಗಿದೆ: 9=63, 8=48, 7=35, 6=24 ಆದರೆ 4= ಎಷ್ಟು?. ಇದಕ್ಕೆ ನೀವು ಸರಿಯಾದ ಉತ್ತರ ಹೇಳಬೇಕು.

Brainy Quiz ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಇದಾಗಿದೆ. ಈ ಪ್ರಶ್ನೆ ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಇಂತಹ ಪ್ರಶ್ನೆಗಳು ನಮ್ಮನ್ನು ಸೃಜನಾತ್ಮಕ ಚಿಂತನೆಗೆ ಒಡ್ಡುತ್ತವೆ. ಇದಕ್ಕಾಗಿ ನಾವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಸರಿಯಾದ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ.

ಅದೆಲ್ಲಾ ಬಿಡಿ, ಈ ಪ್ರಶ್ನೆಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಯ್ತಾ, 4= ಎಷ್ಟು ಎಂದು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾದರೆ ಈ ಪ್ರಶ್ನೆಯನ್ನು ನಿಮ್ಮ ಸ್ನೇಹಿತರೂ, ಆತ್ಮೀಯರೊಂದಿಗೂ ಹಂಚಿಕೊಳ್ಳಿ. ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ, ಆ ಮೂಲಕ ಅವರ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ, 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ ಅನ್ನೋದು ಪ್ರಶ್ನೆಯಾಗಿದೆ. ಇದಕ್ಕೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಚುರುಕಾಗಿದ್ರೆ ಈ ಚಿತ್ರದಲ್ಲಿರುವ ನಂಬರ್ ಯಾವುದು ಹೇಳಿ, ನಿಮಗಿರೋದು 10 ಸೆಕೆಂಡ್ ಸಮಯ

ಇಂದಿನ ಬ್ರೈನ್ ಟೀಸರ್ ಚಿತ್ರವು ನಿಮಗೆ ತಲೆನೋವು ತರಿಸಬಹುದು.ಯಾಕೆಂದರೆ ಈ ಚಿತ್ರವನ್ನು ನೋಡುತ್ತಲೇ ಇದ್ದರೆ ತಲೆನೋವು ಬರೋದು ಖಂಡಿತ. ಹಾಗಂತ ನೋಡದೇ ಇದ್ದರೆ ಚಿತ್ರದಲ್ಲಿರುವ ನಂಬರ್ ಕಂಡುಹಿಡಿಯಲು ಸಾಧ್ಯವಿಲ್ಲ. ಕೇವಲ 10 ಸೆಕೆಂಡ್‌ನಲ್ಲಿ ಇಲ್ಲಿರುವ ಆಪ್ಟಿಕಲ್ ಇಲ್ಯೂಷನ್ ನಂಬರ್ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು…

Whats_app_banner