Optical Illusion: ಈ ಚಿತ್ರದಲ್ಲಿ ನಾಯಿ ಎಲ್ಲಿದೆ? ನಿಮ್ಮಿಂದ ಕಂಡುಹಿಡಿಯಲು ಸಾಧ್ಯವಾದ್ರೆ ಖಂಡಿತ ನೀವು ಚಾಂಪಿಯನ್
ಹರಡಿಕೊಂಡಿರುವ ಬೆಡ್‌ಶೀಟ್‌ನೊಳಗೆ ನಾಯಿಯೊಂದು ಅಡಗಿದೆ. ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಅಂತಾದ್ರೆ ನಾಯಿ ಎಲ್ಲಿದೆ ಕಂಡು ಹಿಡಿಯಿರಿ. ನಾಯಿ ಹುಡುಕಲು ನಿಮ್ಮಿಂದ ಸಾಧ್ಯವಾದ್ರೆ ನೀವೇ ಚಾಂಪಿಯನ್.

ಸೋಷಿಯಲ್ ಮಿಡಿಯಾ ಸ್ಕ್ರೋಲ್ ಮಾಡುವಾಗ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್‌ಗಳು ಕಣ್ಣಿಗೆ ಬೀಳುತ್ತವೆ. ಈ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ನಮ್ಮ ಕಣ್ಣನ್ನು ಸೆಳೆಯದೇ ಇರುವುದಿಲ್ಲ. ಪ್ರತಿ ಆಪ್ಟಿಕಲ್ ಚಿತ್ರಗಳೂ ಕಣ್ಣಿಗೆ ಸವಾಲು ಹಾಕುವಂತಿರುತ್ತವೆ. ಅಲ್ಲದೇ ಈ ಚಿತ್ರಗಳಲ್ಲಿ ನಮಗೊಂದು ಚಾಲೆಂಜ್ ಇರುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಬಹಳ ಸುಂದರವಾಗಿ ಹಾಗೂ ಬುದ್ಧಿವಂತಿಕೆಯಿಂದ ವಿನ್ಯಾಸ ಮಾಡಿರಲಾಗುತ್ತದೆ. ಸಹಜವಾಗಿ ನೋಡಿದಾಗ ಇದೊಂದು ಚಿತ್ರ ಎಂದು ಎನ್ನಿಸಿದರೂ, ಇದೇ ಚಿತ್ರವನ್ನು ಡೀಪಾಗಿ ನೋಡಿದಾಗ ಚಿತ್ರದಲ್ಲಿರುವ ಸವಾಲಿಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.
ಇಂತಹ ಚಿತ್ರಗಳು ನಮಗೆ ಸಾಕಷ್ಟು ಗೊಂದಲ ಮೂಡಿಸುತ್ತವೆ, ಇಂದಿನ ಚಿತ್ರ ಗಮನಿಸಿ. ಇದರಲ್ಲಿ ಬೆಡ್‌ವೊಂದರ ಮೇಲೆ 2 ಬೆಡ್‌ಶೀಟ್‌ಗಳು ಹರಡಿರುವಂತೆ ಕಾಣುತ್ತಿವೆ. ಕಾಫಿ ಬಣ್ಣದ ಬೆಡ್‌ಶೀಟ್ ಅನ್ನು ಬೆಡ್ ಮೇಲೆ ಹಾಸಲಾಗಿದ್ದರೆ, ಅದರ ಮೇಲೆ ಕೆನೆ ಬಣ್ಣದ ವಿನ್ಯಾಸವಿರುವ ಬಾಂಕ್ಲೆಟ್ ಅನ್ನು ಇರಿಸಲಾಗಿದೆ. ಇದರಲ್ಲಿ ನಾಯಿಯೊಂದು ಕೂಡ ಇದೆ. ಈ ಚಿತ್ರದಲ್ಲಿ ನಾಯಿ ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ಬೆಡ್ ಮೇಲೆ ನಾಯಿ ಮಲಗಿಲ್ಲ ಎಂದು ಮಾತ್ರ ಹೇಳಬೇಡಿ, ಈ ಚಿತ್ರವನ್ನು ಸರಿಯಾಗಿ ಗಮನಿಸಿ. ಖಂಡಿತ ಈ ಚಿತ್ರದಲ್ಲಿ ನಾಯಿ ಇದೆ.
ನಿಮ್ಮ ಕಣ್ಣಿಗೆ ನಾಯಿ ಕಾಣಿಸಿತ್ತಾ, ಸರಿಯಾಗಿ ನೋಡಿದ್ರಾ, ಈಗಲೂ ಕೂಡ ನಾಯಿ ಕಾಣಿಸಿಲ್ಲ ಎಂದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ನಾವು ಇರುವುದು ಕಾಫಿ ಬಣ್ಣ, ಇದು ಕಾಫಿ ಬಣ್ಣದ ಬೆಡ್ ಶೀಟ್ ಮೇಲೆ ಮಲಗಿದೆ. ಆ ಕಾರಣಕ್ಕೆ ಅದು ಕಾಣಿಸುತ್ತಿಲ್ಲ. ಕಾಫಿ ಬಣ್ಣದ ಬೆಡ್‌ಶೀಟ್ ಅನ್ನು ಸರಿಯಾಗಿ ಗಮನಿಸಿದ್ರೆ ನಾಯಿ ನಿಮ್ಮ ಬಣ್ಣಿಗೆ ಬೀಳುತ್ತದೆ.
ನಿಮಗೆ ನಾಯಿ ಹುಡುಕಲು ಸಾಧ್ಯವಾದ್ರೆ ಇನ್ನೇಕೆ ತಡ, ಕೂಡಲೇ ಈ ಚಿತ್ರವನ್ನು ನಿಮ್ಮ ಸ್ನೇಹಿತರು, ಆತ್ಮೀಯರಿಗೆ ಕಳುಹಿಸಿ. ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ. ಅವರ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: ಚಿತ್ರದಲ್ಲಿ ಎಷ್ಟು ಬಾಲ್‌ಗಳಿವೆ, ನೀವು ನಿಜಕ್ಕೂ ಸೂಕ್ಷ್ಮ ದೃಷ್ಟಿ ಹೊಂದಿದ್ರೆ 15 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಿ
ನಿಮ್ಮ ಕಣ್ಣಿನ ದೃಷ್ಟಿ ಸೂಕ್ಷ್ಮವಾಗಿದೆ ಅಂತಂದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಲ್ಲಿರುವ ಚಿತ್ರದಲ್ಲಿ ಒಟ್ಟು ಎಷ್ಟು ಬಾಲ್‌ಗಳಿವೆ ಎಂದು ನೀವು ಹೇಳಬೇಕು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ.