Brain Teaser: 1+4=5, 3+6=21 ಆದರೆ 8+11= ಎಷ್ಟು? ಗಣಿತದಲ್ಲಿ ಪಂಟರಾದ್ರೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ
ಫೇಸ್‌ಬುಕ್‌ನಲ್ಲಿ ವೈರಲ್ ಆದ ಗಣಿತದ ಪಜಲ್‌ವೊಂದು ಸಾಮಾಜಿಕ ಜಾಲತಾಣ ಬಳಕೆದಾರರ ಮೆದುಳಿಗೆ ಹುಳ ಬಿಟ್ಟಿದೆ. ಇಲ್ಲಿರುವ ಪ್ರಶ್ನೆಗೆ ಸರಿ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಸ್ಕ್ರೋಲ್ ಮಾಡುವಾಗ ಸಾಕಷ್ಟು ಬ್ರೈನ್ ಟೀಸರ್ ಚಿತ್ರಗಳು ಕಣ್ಣಿಗೆ ಬೀಳುತ್ತವೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. ಇವು ನಮ್ಮ ಮೆದುಳಿಗೆ ಹುಳ ಬಿಡುವಂತೆ ಇರುತ್ತವೆ. ಆದರೆ ಇವು ಮೋಜು ಕೂಡ ನೀಡುತ್ತವೆ. ಅಂತಹ ವೈರಲ್ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ.
ಈ ಬ್ರೈನ್ ಟೀಸರ್‌ನಲ್ಲಿರುವುದು ಗಣಿತದ ಪಜಲ್, ಕೂಡಿಸುವ ಲೆಕ್ಕಾಚಾರವಿರುವ ಈ ಬ್ರೈನ್ ಟೀಸರ್‌ಗೆ ಸುಲಭವಾಗಿ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ 3+6=9 ಅಲ್ಲ, 3+6=21. ಹಾಗಾದರೆ 8+11= ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು.
Minion Quotes ಎನ್ನುವ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಚಿತ್ರ ಇದಾಗಿದೆ. ಈ ಬ್ರೈನ್ ಟೀಸರ್ ಈಗ ಹಲವರ ಗಮನ ಸೆಳೆದಿದೆ. “1 + 4 = 5, 2 + 5 = 12, 3 + 6 = 21, 8 + 11 = ಎಷ್ಟು ಎನ್ನುವುದು ಚಿತ್ರದಲ್ಲಿರುವ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಸರಿ ಉತ್ತರ ಹೇಳಲು ಸಾಧ್ಯವಾಗಿದೇ ಹಲವರು ಮೆದುಳಿಗೆ ಹುಳ ಬಿಟ್ಟು ಕೊಂಡಿದ್ದಾರೆ. ಕೆಲವರು ಸರಿ ಉತ್ತರ ಹೇಳಿ ತಮ್ಮ ಬುದ್ಧಿವಂತಿಕೆಯನ್ನು ಸಾಬೀತು ಮಾಡಿದ್ದಾರೆ. ಆದರೂ ಇದಕ್ಕೆ ಉತ್ತರ ಹೇಳುವುದು ಒಂಥರಾ ಸವಾಲು ಎನ್ನಿಸುವುದು ಸುಳ್ಳಲ್ಲ.
ಇಂತಹ ಪ್ರಶ್ನೆಗಳು ನೋಡಲು ಸುಲಭವಿದ್ದರೂ ಸರಿಯಾದ ಉತ್ತರ ಕಂಡುಹಿಡಿಯಲು ಸಾಕಷ್ಟು ಪರದಾಟ ಮಾಡಬೇಕಾಗುತ್ತದೆ. ಈ ಪ್ರಶ್ನೆಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುವ ಜೊತೆಗೆ ನಮ್ಮ ಯೋಚನಾಶಕ್ತಿ ವೃದ್ಧಿಯಾಗುವಂತೆಯೂ ಮಾಡುತ್ತದೆ. ಜೊತೆಗೆ ಇದು ನಮಗೆ ಟೈಮ್ ಪಾಸ್ ಮಾಡಲು ಕೂಡ ಹೇಳಿ ಮಾಡಿಸಿದ್ದು.
ಸರಿ ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮಿಂದ ಸರಿ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ, ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಈ ಬ್ರೈನ್ ಟೀಸರ್ ಚಿತ್ರವನ್ನು ಕಳುಹಿಸಿ ಅವರಿಂದ ಏನು ಉತ್ತರ ಬರುತ್ತದೆ ನಿರೀಕ್ಷಿಸಿ.