ಮೊಮ್ಮಗನೊಂದಿಗೆ ಅಜ್ಜಿಯ ಮಸ್ತ್‌ ಡಾನ್ಸ್‌; ಪುಷ್ಪಾ 2 ಸಿನಿಮಾ ಹಾಡಿಗೆ ಹಾಕಿದ್ರು ಸಖತ್ ಸ್ಟೆಪ್‌; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ
ಕನ್ನಡ ಸುದ್ದಿ  /  ಜೀವನಶೈಲಿ  /  ಮೊಮ್ಮಗನೊಂದಿಗೆ ಅಜ್ಜಿಯ ಮಸ್ತ್‌ ಡಾನ್ಸ್‌; ಪುಷ್ಪಾ 2 ಸಿನಿಮಾ ಹಾಡಿಗೆ ಹಾಕಿದ್ರು ಸಖತ್ ಸ್ಟೆಪ್‌; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ

ಮೊಮ್ಮಗನೊಂದಿಗೆ ಅಜ್ಜಿಯ ಮಸ್ತ್‌ ಡಾನ್ಸ್‌; ಪುಷ್ಪಾ 2 ಸಿನಿಮಾ ಹಾಡಿಗೆ ಹಾಕಿದ್ರು ಸಖತ್ ಸ್ಟೆಪ್‌; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ

‘ಪುಷ್ಪ 2 ದಿ ರೂಲ್‌‘ ಸಿನಿಮಾದ ‘ಅಂಗಾರೋ‘ ಹಾಡಿಗೆ ಅಜ್ಜಿ ಮತ್ತು ಮೊಮ್ಮಗ ಡಾನ್ಸ್ ಮಾಡಿದ್ದು ಈ ವಿಡಿಯೊ ಸಖತ್‌ ವೈರಲ್ ಆಗಿದೆ. ಕ್ಯೂಟ್ ಆಗಿ ಎಕ್ಸ್‌ಪ್ರೆಶನ್ ಕೊಟ್ಟಿರುವ ಅಜ್ಜಿಯ ಡಾನ್ಸ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮತ್ತೆ ಮತ್ತೆ ನೋಡಬೇಕು ಎನ್ನಿಸುವಂತಿರುವ ಈ ವಿಡಿಯೊದಲ್ಲಿ ಅಂಥದ್ದೇನಿದೆ ಎಂಬುದನ್ನು ನೀವೂ ನೋಡಿ.

ಮೊಮ್ಮಗನೊಂದಿಗೆ ಪುಷ್ಪಾ 2 ಸಿನಿಮಾ ಹಾಡಿಗೆ ಡಾನ್ಸ್ ಮಾಡುತ್ತಿರುವ ಅಜ್ಜಿ
ಮೊಮ್ಮಗನೊಂದಿಗೆ ಪುಷ್ಪಾ 2 ಸಿನಿಮಾ ಹಾಡಿಗೆ ಡಾನ್ಸ್ ಮಾಡುತ್ತಿರುವ ಅಜ್ಜಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಡಿಯೊಗಳು ತುಂಬಾನೇ ಇಷ್ಟವಾಗುತ್ತವೆ. ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡ್ತಾನೆ ಇರಬೇಕು ಎನ್ನುವಂಥ ಭಾವನೆ ಬರುವುದು ಸುಳ್ಳಲ್ಲ. ಇದೀಗ ಅಂಥದ್ದೊಂದು ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಅದೇನಪ್ಪಾ ಅಂತಹ ವಿಡಿಯೋ ಅಂತೀರಾ, ಅದು ಅಜ್ಜಿ–ಮೊಮ್ಮಗನ ಡಾನ್ಸ್ ವಿಡಿಯೊ.

‘ಪುಷ್ಪ 2 ದಿ ರೂಲ್‘ ಚಿತ್ರದ ಸಖತ್ ಫೇಮಸ್ ಹಾಡು ‘ಅಂಗಾರೋ‘ ಹಾಡಿಗೆ ಅಜ್ಜಿಯೊಬ್ಬರು ಸಖತ್ ಸ್ಟೆಪ್ ಹಾಕಿರುವುದು ಮಾತ್ರವಲ್ಲ, ಶ್ರೀವಲ್ಲಿಯಂತೆ ಎಕ್ಸ್‌ಪ್ರೆಶನ್ ಕೂಡ ನೀಡಿದ್ದಾರೆ. ಈ ಅಜ್ಜಿನ ಜೊತೆ ಮೊಮ್ಮಗ ಕೂಡ ಸೇರಿಕೊಂಡು ಡಾನ್ಸ್‌ಗೆ ಸಾಥ್‌ ನೀಡಿದ್ದಾರೆ. ಅಜ್ಜಿ–ಮೊಮ್ಮಗ ಕಾಂಬಿನೇಷನ್‌ ಈ ಡಾನ್ಸ್ ವಿಡಿಯೊ ಇದೀಗ ಸಖತ್ ವೈರಲ್ ಆಗಿದೆ. ಇವರ ಡಾನ್ಸ್ ನೆಟ್ಟಿಗರ ಮನ ಕದ್ದಿರುವುದು ಸುಳ್ಳಲ್ಲ.

ಸಂಕೇತ್ ದಾವಲ್ಕರ್ ಎನ್ನುವವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನ ಮನೆಯವರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸುತ್ತಿರುವ ಸಂದರ್ಭ ಅಜ್ಜಿ ಎಲ್ಲರೆದುರು ಶ್ರೀವಲ್ಲಿಯಾಗಿ ಡಾನ್ಸ್ ಮಾಡಿದ್ದಾರೆ. ಮುದ್ದಾಗಿ ಕಾಣುವ ಅಜ್ಜಿಯ ಡಾನ್ಸ್‌ಗೆ ಮನೆಯವರು ಮಾತ್ರವಲ್ಲ, ಇದೀಗ ನೆಟ್ಟಿಗರು ಫಿದಾ ಆಗಿದ್ದಾರೆ. ‌

ವಿಡಿಯೊದಲ್ಲಿ ಏನಿದೆ?

ಹ್ಯಾಪಿ ಬರ್ತ್‌ ಡೇ ಎಂದು ಗೋಡೆಯ ಮೇಲೆ ಅಂಟಿಸಿರುವ ಸ್ಟಿಕ್ಟರ್, ಎದುರು ನಿಂತಿರುವ ಅಜ್ಜಿ ಪುಷ್ಪಾ ಸಿನಿಮಾ ಹಾಡು ಬಂದ ಕೂಡಲೇ ಶ್ರೀವಲ್ಲಿಯಂತೆ ಎಕ್ಸ್‌ಪ್ರೆಶನ್ ಕೊಡುತ್ತಾರೆ. ಅಂಗಾರೋ ಹಾಡು ಬರುತ್ತಿದ್ದಂತೆ ಅಜ್ಜಿ ಸೆಪ್ಟ್ ಹಾಕಲು ಶುರು ಮಾಡುತ್ತಾರೆ. ಕೆಲ ಹೊತ್ತಿಗೆ ಮೊಮ್ಮಗ ಕೂಡ ಅಜ್ಜಿ ಜೊತೆ ಹೆಜ್ಜೆ ಹಾಕುತ್ತಾನೆ. ಇಬ್ಬರೂ ಸೇರಿ ಸಖತ್ ಆಗಿಯೇ ಸ್ಟೆಪ್ ಹಾಕುತ್ತಾರೆ.

ಈ ವಿಡಿಯೊ ಈಗ ವೈರಲ್ ಆಗಿದ್ದು ಅಜ್ಜಿ ಮೊಮ್ಮಗನ ಕಾಂಬಿನೇಷನ್‌ ಡಾನ್ಸ್‌ಗೆ ನೆಟ್ಟಿಗರು ಬಹುಪಾರಕ್ ಎಂದಿದ್ದಾರೆ. ನನ್ನ ಶ್ರೀವಲ್ಲಿ ಜೊತೆ ಎಂದು ಶೀರ್ಷಿಕೆ ಬರೆದುಕೊಂಡು ಸಾಕೇತ್ ಪೋಸ್ಟ್ ಮಾಡಿರುವ ಈ ವಿಡಿಯೊಗೆ ಹಲವರು ಲೈಕ್, ಕಾಮೆಂಟ್ ಮಾಡಿದ್ದಾರೆ.

ಕಾಮೆಂಟ್‌ಗಳ ಮೂಲಕ ಪ್ರೀತಿಯ ಸುರಿಮಳೆ

ಈ ವಿಡಿಯೊ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಹವಾ ಮೂಡಿಸಿದೆ. ಕೆಲವೇ ಗಂಟೆಗಳಲ್ಲಿ ಲೆಕ್ಕವಿಲ್ಲದಷ್ಟು ಲೈಕ್‌ಗಳು ಮತ್ತು ಶೇರ್‌ಗಳನ್ನು ಪಡೆದುಕೊಂಡಿದೆ. ಇವರಿಬ್ಬರ ಅದ್ಭುತ ಕೆಮಿಸ್ಟ್ರಿ ಮತ್ತು ಅಜ್ಜಿಯ ಉತ್ಸಾಹಭರಿತ ಡಾನ್ಸ್‌ ಸ್ಟೆಪ್‌ಗಳಿಗೆ ಪ್ರಶಂಸೆ ಮಹಾಪೂರವೇ ಹರಿದು ಬಂದಿದೆ.

ಈ ವಿಡಿಯೊ ತುಂಬಾ ಸೂಪರ್ ಆಗಿದೆ, ಇದು ನನ್ನ ದಿನವನ್ನು ವಿಶೇಷವನ್ನಾಗಿಸಿದೆ ಎಂದು ಇನ್‌ಸ್ಟಾಗ್ರಾಂ ಬಳಕೆದಾರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಅಜ್ಜಿ ಸ್ವಾಗ್‌ ಸೂಪರ್‌‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಲವರು ಈ ವಯಸ್ಸಿನಲ್ಲೂ ಅಜ್ಜಿಯ ಉತ್ಸಾಹ ಕಂಡು ಶಹಬ್ಬಾಸ್ ಎಂದಿದ್ದಾರೆ.

ಕೆಲವರು ಈ ವಿಡಿಯೊ ನೋಡಿ ನಾಸ್ಟಾಲಜಿಗೆ ಜಾರಿದ್ದಾರೆ. ಇದರ ಬಗ್ಗೆ ಮಾತನಾಡುತ್ತಾ, ಒಬ್ಬರು, 'ಇದು ನನ್ನ ಅಜ್ಜಿಯನ್ನು ನೆನಪಿಸುತ್ತದೆ, ಅಮೂಲ್ಯ ನೆನಪುಗಳು!' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಸಂಕೇತ್ ಅವರು ಹಂಚಿಕೊಂಡ ಈ ಸುಂದರ ಮತ್ತು ಹೃದಯಸ್ಪರ್ಶಿ ವಿಡಿಯೊಗಾಗಿ ಹಲವರು ಅವರನ್ನು ಶ್ಲಾಘಿಸಿದ್ದಾರೆ. ಕೆಲವು ವೀಕ್ಷಕರಿಗೆ ಈ ಅಜ್ಜಿ ಮತ್ತು ಮೊಮ್ಮಗನ ನಡುವಿನ ಕೆಮಿಸ್ಟ್ರಿ ತುಂಬಾ ಇಷ್ಟವಾಗಿದೆ. ‘ನೀವಿಬ್ಬರೂ ಒಟ್ಟಿಗೆ ನೃತ್ಯ ಮಾಡುವ ರೀತಿ ತುಂಬಾ ಅದ್ಭುತವಾಗಿದೆ‘ ಎಂದು ಕಾಮೆಂಟ್ ಮಾಡಿದ್ದಾರೆ.

Whats_app_banner