Brain Teaser: 1+3=2, 2+6=4 ಆದ್ರೆ 3+9= ಎಷ್ಟು; ಗಣಿತ ಪ್ರೇಮಿ ನೀವಾದ್ರೆ 15 ಸೆಕೆಂಡ್ ಒಳಗೆ ಉತ್ತರ ಹೇಳಿ
ನೀವು ತುಂಬಾನೇ ಬುದ್ಧಿವಂತರು ಎಂಬ ಬಿರುದು ಪಡೆದಿದ್ದೀರಾ, ಗಣಿತದಲ್ಲಿ ನಿಮ್ಮನ್ನು ಮೀರಿಸುವವರಿಲ್ವಾ? ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿರುವ ಗಣಿತದ ಪಜಲ್‌ಗೆ ನೀವು 15 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಇದು ನಿಮ್ಮ ಬುದ್ಧಿವಂತಿಕೆಗೆ ಸವಾಲ್ ಅಷ್ಟೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಾಕಷ್ಟು ಬ್ರೈನ್ ಟೀಸರ್‌ಗಳು ದಿನಕ್ಕೊಂದು ವೈರಲ್ ಆಗುತ್ತಿರುತ್ತವೆ. ಇದರಲ್ಲಿ ಹೆಚ್ಚಾಗಿ ಗಣಿತದ ಪಜಲ್‌ಗಳೇ ಇರುತ್ತವೆ ಎಂಬುದು ವಿಶೇಷ. ಈ ಪಜಲ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿ, ಟ್ರಿಕ್ಕಿಯಾಗಿ, ಮೆದುಳಿಗೆ ಸವಾಲು ಹಾಕುವಂತಿರುತ್ತವೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅದೇ ರೀತಿ ಇಂದಿನ ಬ್ರೈನ್ ಟೀಸರ್‌ನಲ್ಲೂ ಮೆದುಳಿಗೆ ಹುಳ ಬಿಡುವಂತಹದ್ದೇ ಪ್ರಶ್ನೆಯೊಂದಿದೆ.
Brainy Quiz ಎನ್ನುವ ಎಕ್ಸ್ ಪುಟದಲ್ಲಿ ಹಂಚಿಕೊಳ್ಳಲಾದ ಬ್ರೈನ್ ಟೀಸರ್ ಇದಾಗಿದೆ. ಈ ಬ್ರೈನ್ ಟೀಸರ್‌ಗೆ ಸರಿಯಾದ ಉತ್ತರ ಕಂಡುಹಿಡಿಯಲು ಸಾಧ್ಯವಾಗದೇ ಹಲವರು ಮೆದುಳು ಕೆರೆದುಕೊಂಡಿದ್ದಾರೆ. ಏಕೆಂದರೆ ಈ ಪ್ರಶ್ನೆ ಬಹಳ ಸುಲಭವಾಗಿ ಕಂಡರೂ, ಪ್ರಶ್ನೆಯಷ್ಟು ಸುಲಭವಾಗಿ ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ.
ಈ ಬ್ರೈನ್ ಟೀಸರ್ ಪ್ರಶ್ನೆ ಹೀಗಿದೆ. 1+3=2, 2+6= 4 ಆದ್ರೆ 3+9= ಎಷ್ಟು ಎಂದು ನೀವು ಕಂಡುಹಿಡಿಯಬೇಕು. ಈ ಪ್ರಶ್ನೆಗೆ ನೀವು ಕೇವಲ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು. ಗಣಿತದಲ್ಲಿ ನೀವು ಬುದ್ಧಿವಂತರಾದ್ರೆ ಅಥವಾ ನೀವು ತುಂಬಾ ಜಾಣರಾಗಿದ್ರೆ, ಇದಕ್ಕೆ ಉತ್ತರ ಕಂಡುಕೊಳ್ಳುವುದು ಖಂಡಿತ ಕಷ್ಟವೇನಲ್ಲ. ಸರಿ, ಕೊಂಚ ಯೋಚಿಸಿ ಉತ್ತರ ಹೇಳಿ.
ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳನ್ನು ಚುರುಕು ಮಾಡುತ್ತವೆ. ನಾವು ಸಾಕಷ್ಟು ಯೋಚಿಸುವಂತೆ ಮಾಡುವ ಕಾರಣ ನಮ್ಮಲ್ಲಿ ಯೋಚನಾಶಕ್ತಿ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ಇದು ಮನಸ್ಸಿಗೆ ಮೋಜು ನೀಡುವ ಪ್ರಕ್ರಿಯೆಯೂ ಹೌದು. ಈ ಬ್ರೈನ್ ಟೀಸರ್‌ಗೆ ನಿಮ್ಮಿಂದ ಉತ್ತರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ಸ್ನೇಹಿತರು, ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 5*5=11, 8*8=20 ಆದ್ರೆ 10*10= ಎಷ್ಟು; ಗಣಿತದಲ್ಲಿ ನೀವು ಪಂಟರಾದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತ ಎಲ್ಲರಿಗೂ ಸುಲಭವಲ್ಲ, ಹಾಗಂತ ಇದು ಕಬ್ಬಿಣದ ಕಡಲೆ ಖಂಡಿತ ಅಲ್ಲ. ನೀವು ಗಣಿತಪ್ರೇಮಿಯಾಗಿದ್ದು, ಪಜಲ್ ಬಿಡಿಸೋದು ನಿಮಗೆ ಇಷ್ಟ ಅಂದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದರಲ್ಲಿರುವ ಪ್ರಶ್ನೆಗೆ ನೀವು 20 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮಗೊಂದು ಹೊಸ ಚಾಲೆಂಜ್.
Brain Teaser: ಕಿಟಕಿ ಬಾಗಿಲುಗಳಿಲ್ಲದ ರೂಮ್ ಯಾವುದು; ಬುದ್ಧಿವಂತರಾದ್ರೆ ಯೋಚಿಸಿ ಉತ್ತರ ಹೇಳಿ, ನಿಮ್ಮ ಮೆದುಳಿಗೊಂದು ಸವಾಲ್
ಎಕ್ಸ್‌ನಲ್ಲಿ ವೈರಲ್ ಆದ ಪ್ರಶ್ನೆಯೊಂದು ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ನೀವು 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮ್ಮಲ್ಲಿ ಅಸಾಧಾರಣ ಬುದ್ಧಿವಂತಿಕೆ ಇದ್ರೆ ಮಾತ್ರ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯ. ಹಾಗಾದರೆ ಕಿಟಕಿ, ಬಾಗಿಲುಗಳಲ್ಲಿದ ರೂಮ್ ಯಾವುದು ಉತ್ತರ ಹೇಳಿ.