Brain Teaser: ನನಗೆ ಬೆಕ್ಕಿನಂತೆ ತಲೆ, ಪಾದವಿದೆ, ಆದರೆ ಬೆಕ್ಕಲ್ಲ; ಹಾಗಾದರೆ ನಾನ್ಯಾರು? ಥಟ್‌ ಅಂತ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನನಗೆ ಬೆಕ್ಕಿನಂತೆ ತಲೆ, ಪಾದವಿದೆ, ಆದರೆ ಬೆಕ್ಕಲ್ಲ; ಹಾಗಾದರೆ ನಾನ್ಯಾರು? ಥಟ್‌ ಅಂತ ಉತ್ತರ ಹೇಳಿ

Brain Teaser: ನನಗೆ ಬೆಕ್ಕಿನಂತೆ ತಲೆ, ಪಾದವಿದೆ, ಆದರೆ ಬೆಕ್ಕಲ್ಲ; ಹಾಗಾದರೆ ನಾನ್ಯಾರು? ಥಟ್‌ ಅಂತ ಉತ್ತರ ಹೇಳಿ

ಇಲ್ಲೊಂದು ಸಖತ್‌ ಇಂಟ್ರೆಸ್ಟಿಂಗ್‌ ಆಗಿರೋ ಪ್ರಶ್ನೆ ಇದೆ. ಈ ಪ್ರಶ್ನೆ ಕೇಳೋಕೆ ಮಜಾ ಇದೆ. ಹಾಗಂತ ಉತ್ತರ ಹೇಳೋದು ಖಂಡಿತ ಸುಲಭವಲ್ಲ. ಯಾಕಂದ್ರೆ ಇದು ನಿಮ್ಮ ಮೆದುಳಿಗೆ ಹುಳ ಬಿಡುತ್ತೆ. ಪಾದ, ತಲೆ ಬೆಕ್ಕಿನಂತೆ ಕಂಡ್ರೂ ಇಲ್ಲಿರೋದು ಬೆಕ್ಕಲ್ಲ, ಹಾಗಾದ್ರೆ ಏನದು ಎಂಬುದನ್ನು ನೀವು ಕಂಡುಹಿಡಿಯಬೇಕು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್ ಟೀಸರ್‌ ಹಲವರಿಗೆ ಫೇವರಿಟ್ ಆಗುತ್ತಿದೆ. ಟೈಮ್‌ಪಾಸ್‌ ಮಾಡೋಕೆ ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ ಎನ್ನಬಹುದು. ಮಾತ್ರವಲ್ಲ ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗಳು ಮೆದುಳಿಗೆ ಹುಳ ಬಿಡುವಂತೆ ಇದ್ದರೂ ಇದಕ್ಕೆ ಉತ್ತರ ಕಂಡುಹಿಡಿಯುವುದು ಕಷ್ಟವೇನಲ್ಲ.

ನೀವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಾದರೆ ಇಂತಹ ಪ್ರಶ್ನೆಗಳು ಸಾಮಾನ್ಯಜ್ಞಾನ ಪತ್ರಿಕೆಯಲ್ಲಿ ಇರುತ್ತದೆ. ಇದು ಕೊಂಚ ಟ್ರಿಕ್ಕಿ ಎನ್ನಿಸಿದ್ದರೂ ಇದಕ್ಕಾಗಿ ನಾವು ಸಾಕಷ್ಟು ಯೋಚಿಸುವ ಕಾರಣ ನಮ್ಮ ಬುದ್ಧಿಶಕ್ತಿ ಚುರುಕಾಗುತ್ತದೆ, ನಮ್ಮಲ್ಲಿ ಏಕಾಗ್ರತೆ ಬೆಳೆಯುತ್ತದೆ. ಇದು ನಮ್ಮ ಗಮನಶಕ್ತಿಯನ್ನು ವೃದ್ಧಿಸುವ ಕೆಲಸ ಮಾಡುತ್ತದೆ. ಹಾಗಾದರೆ ಇಂದಿನ ಬ್ರೈನ್ ಟೀಸರ್‌ನಲ್ಲಿ ಏನಿದೆ ನೋಡಿ.

ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂಥರಾ ಮಜವಾಗಿರುವ ಪ್ರಶ್ನೆ ಇದೆ. ನನಗೆ ಬೆಕ್ಕಿನಂತೆ ತಲೆ ಇದೆ. ಬೆಕ್ಕಿನಂತೆ ಪಾದವೂ ಇದೆ. ಆದರೆ ನಾನು ಬೆಕ್ಕಲ್ಲ, ಹಾಗಾದರೆ ನಾನ್ಯಾರು ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ನೀವು ಥಟ್‌ ಅಂತ ಉತ್ತರ ಹೇಳಬೇಕು. ಇದಕ್ಕೆ ಸರಿಯಾದ ಉತ್ತರ ಹೇಳಲು ನಿಮ್ಮಿಂದ ಸಾಧ್ಯವಾದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ, ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ. ಅವರ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ, 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇವತ್ತು ಮಂಗಳವಾರವಾದ್ರೆ, ಮುಂದಿನ 53 ದಿನಗಳ ನಂತರ ಇದು ಯಾವ ದಿನವಾಗಿರುತ್ತೆ ಅನ್ನೋದು ಪ್ರಶ್ನೆಯಾಗಿದೆ. ಇದಕ್ಕೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

Brain Teaser: ಶೇ 99ರಷ್ಟು ಮಂದಿಗೆ ಸಾಧ್ಯವಾಗದ ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ; 8*8 ಎಷ್ಟು?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದಕ್ಕೆ ಶೇ 99 ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗಿಲ್ಲ. ಇಲ್ಲಿರುವುದು ಸುಲಭ ಗಣಿತವಾದ್ರೂ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. 8*8 ಎಷ್ಟು ಎಂದು ಹೇಳಬೇಕಾಗಿರುವುದು ನಿಮಗಿರುವ ಸವಾಲು. ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪರೀಕ್ಷಿಸಿ.

Whats_app_banner