ಕನ್ನಡ ಸುದ್ದಿ  /  Lifestyle  /  Viral Video Bull Enters Cricket Match Field While Local People Playing Cricket Ipl Rajastan Royals Comments Rsa

Viral video: ಕ್ರಿಕೆಟ್ ಮೈದಾನದಲ್ಲಿ ಪ್ರತ್ಯಕ್ಷವಾಯ್ತು ಹೋರಿ, ಬ್ಯಾಟ್‌ ಬಾಲ್‌ ಬಿಟ್ಟು ಜೂಟಾಟ ಆಡಿದ ಹುಡುಗರು; ವಿಡಿಯೋ ನೋಡಿ

Viral Video; ಗಲ್ಲಿ ಕ್ರಿಕೆಟ್ ಪಂದ್ಯಗಳನ್ನು ನೀವು ನೋಡಿರುತ್ತೀರಿ. ಆಡಿಯೂ ಇರುತ್ತೀರಿ. ನೀವು ಕ್ರಿಕೆಟ್ ಪಂದ್ಯದಲ್ಲಿ ಮಗ್ನರಾಗಿರುವಾಗ ಎಲ್ಲಿಂದಲೂ ಬಂದ ಹೋರಿಯೊಂದು ನಿಮ್ಮ ಅಟ್ಟಾಡಿಸಿಬಿಟ್ಟರೆ ನಿಮ್ಮ ಸ್ಥಿತಿ ಏನಾಗಬಹುದು.? ಅಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ, ನೋಡಿ.

ಕ್ರಿಕೆಟ್‌ ಆಡುತ್ತಿದ್ದವರನ್ನು ಅಟ್ಟಾಡಿಸಿದ ಹೋರಿ
ಕ್ರಿಕೆಟ್‌ ಆಡುತ್ತಿದ್ದವರನ್ನು ಅಟ್ಟಾಡಿಸಿದ ಹೋರಿ (PC: Mufaddal Vohra)

Viral video: ಕ್ರಿಕೆಟ್ ಮ್ಯಾಚ್ ಆಡೋದು ಎಂದರೆ ಯುವಕರ ಗುಂಪೇ ಸೇರುತ್ತದೆ. ಕ್ರಿಕೆಟ್ ಮ್ಯಾಚ್ ಎಂದರೆ ನಂಗಿಷ್ಟವಿಲ್ಲ ಎನ್ನುವ ಯುವಕರನ್ನು ಹುಡುಕುವುದೇ ಕಷ್ಟ. ಅಂತದ್ರಲ್ಲಿ ನಿಮ್ಮ ಹೈ ವೋಲ್ಟೇಜ್ ಕ್ರಿಕೆಟ್ ಮ್ಯಾಚ್‌ಗೆ ಅತಿಥಿಯಾಗಿ ಹೋರಿಯೊಂದು ಎಂಟ್ರಿ ಕೊಟ್ಟರೆ ನಿಮ್ಮ ಪರಿಸ್ಥಿತಿ ಏನಾಗಬಹುದು ಎಂದು ಎಂದಾದರೂ ಊಹಿಸಿದ್ದೀರೇ..? ಆದರೆ ಇಂತಹದ್ದೇ ಒಂದು ಘಟನೆ ಸಂಭವಿಸಿದ್ದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಸ್ಥಳೀಯರು ಆಡುತ್ತಿದ್ದ ಕ್ರಿಕೆಟ್ ಪಂದ್ಯದ ನಡುವೆ ಸಿಟ್ಟಿಗೆದ್ದ ಹೋರಿಯೊಂದು ನುಗ್ಗಿ ಬಂದಿದ್ದು ಕ್ರಿಕೆಟ್ ಆಟಗಾರರನ್ನು ಅಟ್ಟಾಡಿಸಿಕೊಂಡು ಹೋಗಿದೆ. ಕ್ರಿಕೆಟ್ ಪಂದ್ಯವನ್ನು ಅಲ್ಲಿಯೇ ಬಿಟ್ಟ ಆಟಗಾರರು ಮೊದಲ ಜೀವ ಕಾಪಾಡಿಕೊಳ್ಳಬೇಕು ಎಂದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಈ ವಿಡಿಯೋವನ್ನು ಮಾಜಿ ಟ್ವಿಟರ್ ಎಕ್ಸ್‌ನಲ್ಲಿ ಸಮೀರ್ ಅಲ್ಲಾನಾ ಎನ್ನುವವರು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹೋರಿಯಿಂದ ತಪ್ಪಿಸಿಕೊಳ್ಳಲು ಆಟಗಾರರು ಓಡುತ್ತಿರುವುದನ್ನು ಕಾಣಬಹುದಾಗಿದೆ. ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಸಾಕಷ್ಟು ಪ್ರತಿಕ್ರಿಯೆಯನ್ನು ಪಡೆದಿದೆ. ಈ ವಿಡಿಯೋಗೆ ಹೋರಿಯೂ ಕ್ರಿಕೆಟ್ ಪಂದ್ಯವಾಡಲು ಇಚ್ಛಿಸಿದರೆ.... ಎಂದು ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋ ಆನ್‌ಲೈನ್‌ಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕರು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಿನಲ್ಲಿ ತುಂಬಿಸಿದ್ದಾರೆ. ಹೆಚ್ಚುವರಿ ಫೀಲ್ಡರ್ ಮೈದಾನಕ್ಕೆ ಆಗಮಿಸಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಹೋರಿಯು ತನಗೆ ತಿಳಿಸಲಾದ ನಿಯಮದಂತೆ ಆಡುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಈಗ ಕ್ರಿಕೆಟ್ ಆಡಿ ನೋಡೋಣ ಎಂದು ಸವಾಲೆಸೆದಿದ್ದಾರೆ. ವಿಶೇಷ ಏನೆಂದರೆ ಈ ವಿಡಿಯೋಗೆ ಐಪಿಎಲ್‌ ರಾಜಸ್ಥಾನ ರಾಯಲ್ಸ್ ತಂಡದ ಅಧಿಕೃತ ಪೇಜ್ ಕೂಡ #bazbull ಎಂದು ಪ್ರತಿಕ್ರಿಯೆ ನೀಡಿದೆ. ಅಂದಹಾಗೆ ಈ ವಿಡಿಯೋವನ್ನು ಕಂಡು ನಿಮಗೆ ಏನೆನಿಸಿತು..? ನೀವೂ ಕ್ರಿಕೆಟ್‌ ಆಡುವಾಗ ಇಂಥದ್ದೇ ಘಟನೆ ಎಂದಾದರೂ ನಡೆದಿತ್ತಾ ಕಾಮೆಂಟ್‌ ಮಾಡಿ.