Viral Video: ಮುಳುಗುತ್ತಿರುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದೇನು ಗೊತ್ತಾ; ವಿಡಿಯೊ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ
ನೀರಿನಲ್ಲಿ ತೇಲುತ್ತಿರುವ ಹಡಗಿನ ಮೇಲೆ ಕುಳಿತ ಪ್ರೇಯಸಿ, ಮುಳುಗುತ್ತಿರುವ ಪ್ರೇಮಿ, ಮುಳುಗುವ ಬರದಲ್ಲೂ ಮೊಬೈಲ್ ಫೋನ್ ನೆನಪಾಗಿ ಕೈ ಚಾಚುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದಾದ್ರೂ ಏನು ಗೊತ್ತಾ, ಈ ವಿಡಿಯೊ ನೋಡಿದ್ರೆ ನೀವು ನಗದೇ ಇರೋಕೆ ಸಾಧ್ಯನೇ ಇಲ್ಲ.
ಸಾಮಾಜಿಕ ಜಾಲಗಳಲ್ಲಿ ಹರಿದಾಡುವ ವಿಡಿಯೊಗಳು, ಪೋಟೊಗಳು, ಮೀಮ್ಸ್‌ಗಳು ನಮ್ಮ ಮನಸ್ಸಿಗೆ ಮಜಾ ಕೊಡೋದು ಸುಳ್ಳಲ್ಲ. ಇಂತಹ ವಿಡಿಯೊಗಳನ್ನು, ಮೀಮ್ಸ್‌ಗಳನ್ನು ನೋಡ್ತಾ ಇದ್ರೆ ಮತ್ತೆ ಮತ್ತೆ ನೋಡಬೇಕು ಅನ್ನಿಸುವುದು ಸಹಜ. ಇಲ್ಲೊಂದು ಅಂತಹದ್ದೇ ವಿಡಿಯೊ ವೈರಲ್ ಆಗಿದೆ. ಇದನ್ನು ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ, ನಗೋದು ಬಿಡಿ ʼಅಯ್ಯೋ, ನನ್ ಲೈಫ್ ಕಥೆನೂ ಇದೇ ಕಣ್ರಿʼ ಅಂತ ಅನ್ನಿಸಿದೇ ಇರದು.
ಹೌದಾ, ಹಾಗಾದ್ರೆ ಅದೆಂಥಾ ವಿಡಿಯೊ ಅಂದ್ಕೋತೀರಾ, ಸಖತ್ ಮಜಾ ಇದೆ ನೋಡಿ ಈ ವಿಡಿಯೊ. ಟ್ವಿಟರ್‌ನಲ್ಲಿ ವೈರಲ್ ಆದ ವಿಡಿಯೊಗೆ ʼಟೈಟಾನಿಕ್ 2023ʼ ಎಂದು ಶೀರ್ಷಿಕೆ ನೀಡಲಾಗಿದೆ.
ʼಓಹೋ, ಹಾಗಾದ್ರೆ ಇಲ್ಲೊಂದು ಸುಂದರ ಪ್ರೇಮಕಥೆ ಇರಬಹುದುʼ ಎಂದು ನೀವು ಅಂದುಕೊಳ್ಳುತ್ತಿದ್ದರೆ, ನಿಮ್ಮ ಊಹೆ ಖಂಡಿತ ತಪ್ಪು.
ಆ ಟೈಟಾನಿಕ್ ಸುಂದರ ಪ್ರೇಮಕಥೆಯನ್ನು ನೆನಪಿಸಿದ್ರೆ, ಈ ಟೈಟಾನಿಕ್ ಮಜಾ ಕೊಡುವ ದುರಂತ ಪ್ರೇಮಕಥೆಯಾಗಿದೆ. ಅಲ್ಲದೆ ಇದು ಸದ್ಯ ನಮ್ಮೆಲ್ಲರ ಜೀವನದ ದುರಂತ ಕಥೆಯೂ ಹೌದು. ಇದನ್ನು ನೋಡಿದ ಮೇಲೆ ನಿಮಗೆ ಮನಸ್ಸಲ್ಲೇ ʼಈ ವಿಡಿಯೊದಲ್ಲಿರುವ ಪ್ರೇಮಿಗಳು ನಾವೇʼ ಎಂದು ಅನ್ನಿಸದೇ ಇರದು.
ಅಂದಿನ ಟೈಟಾನಿಕ್ ಪ್ರೇಮಕಥೆ ಬೇಸರ ಮೂಡಿಸಿ ನಿಮ್ಮ ಕಣ್ಣಲ್ಲಿ ಕಣ್ಣೀರು ತರಿಸಿದ್ರೆ, ಇಂದಿನ 2023ರ ಟೈಟಾನಿಕ್ ನೋಡಿ ನಕ್ಕು ನಕ್ಕು ಕಣ್ಣೀರು ಬರುತ್ತೆ. ಅಷ್ಟೊಂದು ಮಜಾ ಕೊಡೊ ವಿಡಿಯೊ ಏನದು ಕೇಳ್ತೀರಾ, ನೋಡಿ ಇಲ್ಲಿದೆ ವಿವರ.
ನಿಮ್ದು ಈ ವಿಡಿಯೊ ಕಥೆನೇ, ಅಲ್ವಾ?
ʼಅಲ್ರಿ, ಇದೆಂಥಾ ಕಾಲ ಬಂತು ಅಂತೀನಿ, ನೀರಿನಲ್ಲಿ ಮುಳುಗಿ ಸಾಯ್ತಾ ಇರೋ ವ್ಯಕ್ತಿ ತಟ್ ಅಂತ ಮೇಲೆದ್ದು ಕೈ ಚಾಚ್ತಾನೆ, ಏನು ಬದುಕೋ ಆಸೆಗೆ ಯಾರಾದ್ರೂ ಕಾಪಾಡ್ಲಿ ಅಂತ ಇರಬೋದು ಅಂತ ನೀವ್ ಅಂದ್ಕೊಂಡ್ರೆ ಖಂಡಿತ ತಪ್ಪು, ಆತನ ಕೈ ಚಾಚಿದ್ದು ತನ್ನ ಮೊಬೈಲ್‌ಗಾಗಿ ಕಣ್ರಿ. ಎಲ್ಲಿ ತನ್ನ ಮೊಬೈಲ್ ಅನ್ನು ಪ್ರೇಯಸಿ ನೋಡ್ತಾಳೆ ಅನ್ನೋ ಭಯಕ್ಕೆ ಸಾವಿನ ದವಡೆಯಲ್ಲಿದ್ರೂ ಮೊಬೈಲ್ ಹಿಡಿದೇ ಬಿಡಲಿಲ್ಲ ಆ ಮಹಾಶಯ. ಇನ್ನೂ ಅವನ ಪ್ರೇಯಸಿಯ ಕಥೆ ಅದಕ್ಕೂ ಮೀರಿದ್ದು. ಮುಳುಗುತ್ತಿರುವ ಪ್ರೇಮಿಯ ಕೈ ಹಿಡಿದು ಎಳೆದ ಆಕೆ ಮೇಲೆತ್ತಲು ನೋಡುತ್ತಾಳೆ ಅಂದೊಂಡ್ರಾ, ಛೇ, ಖಂಡಿತ ಹಾಗಲ್ಲ. ಆಕೆ ಆತನ ಕೈ ಹಿಡಿದು ಎತ್ತಿದ್ದು ಫೋನ್ ಫಿಂಗರ್ ಪ್ರಿಂಟ್ ಲಾಕ್ ಓಪನ್ ಮಾಡೋಕೆ. ಫಿಂಗರ್ ಪ್ರಿಂಟ್ ಓಪನ್ ಮಾಡಿ ಮೊಬೈಲ್ ನೋಡಿದ್ದೆ ತಡ, ಅರ್ಧ ಮುಳುಗಿದ್ದ, ಆ ಅಸಾಮಿಯನ್ನು ಪೂರ್ತಿ ಮುಳುಗಿಸಿಯೇ ಬಿಡ್ತಾಳೆ ಅವರ ಪ್ರೇಯಸಿʼ ಈ ಫನ್ನಿ ವಿಡಿಯೊ ನೋಡಿದ ಮೇಲೆ ಅನ್ನಿಸಿಲ್ವಾ ನಿಮ್ದೆ ಸ್ಟೋರಿ ಅಂತ.
ನೋಡಿ ಎಂಥಾ ಕಾಲ ಬಂತು, ಯೋಚನೆ ಮಾಡಿ ಮೊಬೈಲ್‌ಗೆ ಫಿಂಗರ್ ಪ್ರಿಂಟ್ ಇಡ್ತೀರಾ, ಪಾಸ್‌ವರ್ಡ್ ಇಡ್ತೀರಾ, ಇನ್ ಮುಂದೆ ಆಯ್ಕೆ ನಿಮಗೆ ಬಿಟ್ಟಿದ್ದು ಸ್ವಾಮಿ.
ಇದು ಇತ್ತೀಚೆಗೆ ಹಲವರ ಜೀವನದಲ್ಲಿ ನಡೆಯುವ ಕಥೆ, ಈ ವಿಡಿಯೊ ನೋಡಿದ್ರೆ ಶೇ 90 ರಷ್ಟು ಮಟ್ಟಿಗೆ ಇದು ನಮ್ಮದೇ ಕಥೆ ಅನ್ನಿಸಿಲ್ಲಾ ಅಂದ್ರೆ ಚಾಲೆಂಜ್ ಮಾಡ್ತೀನಿ.
@TheFigen_ ಎನ್ನುವ ಬಳಕೆದಾರರು ಈ ವಿಡಿಯೊವನ್ನು ಇಂದು (ಜುಲೈ 31) ಮಧ್ಯರಾತ್ರಿ 2 ಗಂಟೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊವನ್ನು ಈಗಾಗಲೇ 17000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 3,624ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. 17000ಕ್ಕೂ ಹೆಚ್ಚು ಲೈಕ್ ಬಂದಿದೆ.
ಕಾಮೆಂಟ್‌ಗಳು ಹೀಗಿವೆ
ಈ ವಿಡಿಯೊಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ʼಈ ಸ್ಟೋರಿಯ ನೀತಿಕಥೆ ಏನೆಂದರೆ ಯಾವಾಗಲೂ ಕೋಡ್ ಬಳಕೆ ಮಾಡಿʼ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ʼನಾನು ಮುಳುಗುವ ಮೊದಲು ಫೋನ್ ಮುಳುಗಿಸುತ್ತಿದೆ. ಆಕೆ ಖಂಡಿತ ಫೋನ್ ಸಿಗಲು ಬಿಡುತ್ತಿರಲಿಲ್ಲʼ ಎಂದು ಇನ್ನೊಬ್ಬ ಬಳಕೆದಾರರು ತಿಳಿಸಿದ್ದಾರೆ. ʼನಾನಿದ್ದಕ್ಕೆ ನಗುವುದೋ ಅಳುವುದೋʼ ಎಂದು ಟ್ವಿಟರ್ ಬಳಕೆದಾರೊಬ್ಬರು ಕಾಮೆಂಟ್ ಮಾಡಿದ್ದಾರೆ. ʼನನ್ನ ವಿಚಾರದಲ್ಲಿ ಫೋನ್ ಡಿಬಗ್ ಮಾಡಲು, ಆತ ಈಗಾಗಲೇ ಪ್ರೋಗ್ರಾಮಿಂಗ್ ಮಾಡಿದ್ದಾನೆʼ ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೊಗೆ ಹಲವರು ಗಹಗಹಿಸಿ ನಗುವ ಸ್ಮೈಲಿ ಹಾಕಿದ್ದಾರೆ.