Viral Video: ಜೋರಾಗಿ ಹಾಡು ಹಾಕಿದ್ದಕ್ಕೆ ಟೇಪ್‌ರೆಕಾರ್ಡರ್‌ ಕಿತ್ತು ಚಕ್ರದಡಿ ಇಟ್ಟ ಪೊಲೀಸ್‌; ನಿಂಗಿದು ಆಗಬೇಕಿತ್ತು ಅಂದ್ರು ನೆಟ್ಟಿಗರು
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ಜೋರಾಗಿ ಹಾಡು ಹಾಕಿದ್ದಕ್ಕೆ ಟೇಪ್‌ರೆಕಾರ್ಡರ್‌ ಕಿತ್ತು ಚಕ್ರದಡಿ ಇಟ್ಟ ಪೊಲೀಸ್‌; ನಿಂಗಿದು ಆಗಬೇಕಿತ್ತು ಅಂದ್ರು ನೆಟ್ಟಿಗರು

Viral Video: ಜೋರಾಗಿ ಹಾಡು ಹಾಕಿದ್ದಕ್ಕೆ ಟೇಪ್‌ರೆಕಾರ್ಡರ್‌ ಕಿತ್ತು ಚಕ್ರದಡಿ ಇಟ್ಟ ಪೊಲೀಸ್‌; ನಿಂಗಿದು ಆಗಬೇಕಿತ್ತು ಅಂದ್ರು ನೆಟ್ಟಿಗರು

ಸಾರ್ವಜನಿಕರಿಗೆ ತೊಂದರೆಯಾಗುವಂತೆ ಗಟ್ಟಿಯಾಗಿ ಹಾಡು ಹಾಕಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ ಅನ್ನು ನಿಲ್ಲಿಸಿ, ಟೇಪ್‌ ರೆಕಾರ್ಡ್‌ ಕಿತ್ತ ಪೊಲೀಸ್‌ ಈಗ ಜನ ಮೆಚ್ಚುಗೆ ಪಡೆದಿದ್ದಾರೆ. ಅಲ್ಲದೆ, ಟ್ರ್ಯಾಕ್ಟರ್‌ ಅಡ್ಡ ಹಾಕಿ ಟೇಪ್‌ ರೆಕಾರ್ಡರ್‌ ಕಿತ್ತು ಇರಿಸಿಕೊಂಡ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಟ್ರ್ಯಾಕ್ಟರ್‌ ಡ್ರೈವರ್‌ (ಅಶ್ವಮೇಧ ಪ್ಲಸ್‌ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಳ್ಳಲಾದ ವಿಡಿಯೊದ ಸ್ಕ್ರೀನ್‌ ಶಾಟ್‌)
ಟ್ರ್ಯಾಕ್ಟರ್‌ ಡ್ರೈವರ್‌ (ಅಶ್ವಮೇಧ ಪ್ಲಸ್‌ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಳ್ಳಲಾದ ವಿಡಿಯೊದ ಸ್ಕ್ರೀನ್‌ ಶಾಟ್‌)

ಸಾಮಾಜಿಕ ಜಾಲತಾಣ ಎಂಬುದು ಒಂದು ವಿಶ್ವಕೋಶದಂತೆ. ಇಲ್ಲಿ ಒಳ್ಳೆಯದ್ದೂ ಕೆಟ್ಟದ್ದೂ ಎಲ್ಲವೂ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಕೆಲವೊಂದು ವಿಡಿಯೊಗಳು ನಮ್ಮ ಮೊಗದಲ್ಲಿ ನಗು ತರಿಸಿದರೆ, ಇನ್ನೂ ಕೆಲವು ಪಾಠ ಕಲಿಸುತ್ತವೆ.

ಇಲ್ಲೊಂದು ಅಂತಹದ್ದೇ ವಿಡಿಯೊ ವೈರಲ್‌ ಆಗಿದೆ. ಇದನ್ನ ನೋಡಿದ್ರೆ ನಿಜಕ್ಕೂ ನೀವು ಮೆಚ್ಚುಗೆ ಸೂಚಿಸುವುದು ಖಂಡಿತ. ಹಾಗಾದ್ರೆ ಏನಿದೆ ಆ ವಿಡಿಯೊದಲ್ಲಿ ಅಂತೀರಾ? ಮುಂದೆ ಓದಿ.

ನಮ್ಮೂರಿನ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳು ಓಡಾಡುವಾಗ ಗಟ್ಟಿಯಾಗಿ, ಡ್ರೈವರ್‌ಗಳು ಗಟ್ಟಿಯಾಗಿ ಹಾಡು ಹಾಕಿಕೊಂಡು ಹೋಗುತ್ತಿರುವುದನ್ನು ನೋಡುತ್ತಿರುತ್ತೇವೆ. ಇವರು ಎಷ್ಟು ಗಟ್ಟಿಯಾಗಿ ಹಾಡು ಹಾಕಿರುತ್ತಾರೆ ಅಂದ್ರೆ ನಮಗೆ ತಲೆನೋವು ಬರಬೇಕು, ಮನೆಯೊಳಗೆ ಕುಳಿತಿದ್ದರೂ ಅಷ್ಟು ಗಟ್ಟಿಯಾಗಿ ಹಾಡಿನ ಶಬ್ದ ಕಿವಿಗೆ ಬೀಳುತ್ತದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವುದು ಖಂಡಿತ. ಹಾಗಂತ ಅವರಿಗೆ ಹೇಳಿದರೆ ಅವರು ಹಾಡನ್ನು ನಿಧಾನ ವ್ಯಾಲ್ಯುಮ್‌ನಲ್ಲಿ ಇರಿಸುವುದು ಇಲ್ಲ. ತಾವೂ ಮಾಡಿದ್ದೇ ಸರಿ ಎಂಬಂತೆ ರಾಜಾರೋಷವಾಗಿ ರಸ್ತೆಯಲ್ಲಿ ತಿರುಗುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಟ್ರ್ಯಾಕ್ಟರ್‌ ಡ್ರೈವರ್‌ಗೆ ಸರಿಯಾಗಿ ಪಾಠ ಕಲಿಸಿದ್ದಾರೆ ಪೊಲೀಸ್‌. ಇದೀಗ ಪೊಲೀಸ್‌ ಹಾಗೂ ಟ್ರ್ಯಾಕ್ಟರ್‌ ಡ್ರೈವರ್‌ ನಡುವಿನ ವಿಡಿಯೊ ವೈರಲ್‌ ಆಗಿದ್ದು, ಇದು ಎಲ್ಲಾ ಟ್ರ್ಯಾಕ್ಟರ್‌ ಡ್ರೈವರ್‌ಗಳಿಗೂ ಪಾಠ ಎಂಬಂತಿದೆ.

ಏನಿದೆ ವಿಡಿಯೊದಲ್ಲಿ?

ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ವೊಂದನ್ನು ಪೊಲೀಸ್‌ ಸಿಬ್ಬಂದಿ ಅಡ್ಡಗಟ್ಟುತ್ತಾರೆ. ಡ್ರೈವರ್‌ ಬಳಿ ಇರುವ ಟೇಪ್‌ರೆಕಾರ್ಡ್‌ ಅನ್ನು ಕಿತ್ತು ಅದನ್ನು ಚಕ್ರದಡಿ ಇರಿಸುತ್ತಾರೆ. ನಂತರ ಗಾಡಿ ಚಲಾಯಿಸಿಕೊಂಡು ಹೋಗು ಎನ್ನುವ ಪೊಲೀಸ್‌ ಟೇಪ್‌ ರೆಕಾರ್ಡ್‌ ಪುಡಿಯಾಗುವಂತೆ ಮಾಡುತ್ತಾರೆ. ಇದಕ್ಕೆ ಕಾರಣ ಏನು ಅಂತೀರಾ, ಖಂಡಿತ ಕಾರಣ ಇದೆ. ಇದಕ್ಕೆ ಕಾರಣ ಆ ಟ್ರ್ಯಾಕ್ಟರ್‌ ಡ್ರೈವರ್‌ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಗಟ್ಟಿಯಾಗಿ ಹಾಡು ಹಾಕಿಕೊಂಡ ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಬರುತ್ತಿದ್ದ. ಇದನ್ನು ನೋಡಿದ ಪೊಲೀಸ್‌ ಕೋಪಗೊಂಡು ಟೇಪ್‌ ರೆಕಾರ್ಡರ್‌ ಅನ್ನು ಚಕ್ರದಡಿ ಇಟ್ಟು ಪುಡಿ ಮಾಡುತ್ತಾರೆ.

ಈ ವಿಡಿಯೊ ನಿಜಕ್ಕೂ ಒಂದು ಪಾಠ ಎನ್ನಬಹುದು. ಹಲವರು ತಮ್ಮ ವಾಹನಗಳಲ್ಲಿ ಗಟ್ಟಿಯಾಗಿ ಹಾಡು ಹಾಕಿಕೊಂಡು ಸಾಗುವ ಮೂಲಕ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಾರೆ. ಹಲವರಿಗೆ ಇದರ ಬಗ್ಗೆ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತಹವರು ಈ ವಿಡಿಯೊ ನೋಡಿ ಪಾಠ ಕಲಿಯಬೇಕಿದೆ.

ಅಶ್ವಮೇಧ ಪ್ಲಸ್‌ ಎಂಬ ಫೇಸ್‌ಬುಕ್‌ ಪುಟದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಡಿಸೆಂಬರ್‌ 4 ರಂದು ಹಂಚಿಕೊಂಡ ಈ ವಿಡಿಯೊವನ್ನು ಈಗಾಗಲೇ 1.4 ಮಿಲಿಯನ್‌ ಮಂದಿ ವೀಕ್ಷಿಸಿದ್ದಾರೆ. 14000 ಮಂದಿ ಲೈಕ್‌ ಮಾಡಿದ್ದರೆ, 2000ದಷ್ಟು ಜನ ಕಾಮೆಂಟ್‌ ಮಾಡಿದ್ದಾರೆ. ಹಲವರು ಪೊಲೀಸ್‌ ಸಿಬ್ಬಂದಿಯ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಸಾಕಷ್ಟು ಮಂದಿ ಪೊಲೀಸರ ಈ ಕಾರ್ಯವನ್ನು ಮೆಚ್ಚಿ ಸೂಪರ್‌, ಗ್ರೇಟ್‌ ವರ್ಕ್‌ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ಹಲವರು ತಮ್ಮ ತಮ್ಮ ಊರಿನ ಹೆಸರು ಹೇಳಿ ಇಲ್ಲಿ ಕೂಡ ಹೀಗೆ ಮಾಡಿ, ನಮ್ಮೂರಿಗೂ ಬನ್ನಿ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

Whats_app_banner