ಹಾಲು, ಕಾಫಿ ಪೌಡರ್ ಬೆರೆಸಿ ನೂಡಲ್ಸ್ ತಯಾರಿಸಿದ ವ್ಯಕ್ತಿ; ಇದು ವಿಷಕ್ಕೆ ಸಮವೆಂದು ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು -Viral Video
ಕನ್ನಡ ಸುದ್ದಿ  /  ಜೀವನಶೈಲಿ  /  ಹಾಲು, ಕಾಫಿ ಪೌಡರ್ ಬೆರೆಸಿ ನೂಡಲ್ಸ್ ತಯಾರಿಸಿದ ವ್ಯಕ್ತಿ; ಇದು ವಿಷಕ್ಕೆ ಸಮವೆಂದು ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು -Viral Video

ಹಾಲು, ಕಾಫಿ ಪೌಡರ್ ಬೆರೆಸಿ ನೂಡಲ್ಸ್ ತಯಾರಿಸಿದ ವ್ಯಕ್ತಿ; ಇದು ವಿಷಕ್ಕೆ ಸಮವೆಂದು ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು -Viral Video

Viral video: ಬೀದಿ ಬದಿ ವ್ಯಾಪಾರಿಯೊಬ್ಬ ಕಾಫಿ ಮತ್ತು ಹಾಲಿನಿಂದ ಮ್ಯಾಗಿ ತಯಾರಿಸಿರುವ ವಿಡಿಯೊ ವೈರಲ್ ಆಗಿದೆ. ಈತನ ಪ್ರಯೋಗ ಜನರಿಗೆ ಅಸಹ್ಯ ಮೂಡಿಸುವಂತೆ ಮಾಡಿದೆ. ವಿಡಿಯೊ ನೋಡಿ.

ಹಾಲು, ಕಾಫಿ ಪೌಡರ್ ಬೆರೆಸಿ ನೂಡಲ್ಸ್ ತಯಾರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಇದು ವಿಷಯಕ್ಕೆ ಸಮ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.
ಹಾಲು, ಕಾಫಿ ಪೌಡರ್ ಬೆರೆಸಿ ನೂಡಲ್ಸ್ ತಯಾರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಇದು ವಿಷಯಕ್ಕೆ ಸಮ ಎಂದು ಜನರು ಪ್ರತಿಕ್ರಿಯಿಸಿದ್ದಾರೆ. (Instagram/@hnvstreetfood)

ಸಾಮಾನ್ಯವಾಗಿ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಾಯಿಸಿದ ನಂತರ ಅದಕ್ಕೆ ಸ್ವಲ್ಪ ತರಕಾರಿ, ಮಸಾಲೆ ಸೇರಿಸಲಾಗುತ್ತದೆ. ಆನಂತರ ಮ್ಯಾಗಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಬಿಸಿ ಬಿಸಿ ಮ್ಯಾಗಿ ತಿನ್ನಲು ರೆಡಿಯಾಗುತ್ತದೆ.

ಮತ್ತೊಂದೆಡೆ ಚೆನ್ನಾಗಿ ಕಾಯಿಸಿದ ಹಾಲಿಗೆ ಸ್ವಲ್ಪ ಸಕ್ಕರೆ ಮತ್ತು ಕಾಫಿ ಪೌಡರ್ ಹಾಕಿದರೆ ಸ್ವಾದಿಷ್ಟವಾದ ಕಾಫಿ ಸಿದ್ದವಾಗುತ್ತದೆ. ಆದರೆ ಇಲ್ಲಿ ಹೇಳಿರುವ ಕಾಫಿ ಮತ್ತು ಮ್ಯಾಗಿಯನ್ನು ಒಟ್ಟಾಗಿ ಮಿಕ್ಸ್ ಮಾಡಿದ್ರೆ ಹೇಗಿರುತ್ತದೆ? ಇಲ್ಲೊಬ್ಬ ಅಸಾಮಿ ಇಂತಹದೊಂದು ವಿಚಿತ್ರ ಪ್ರಯೋಗ ಮಾಡಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರುವ ಹಾಲು, ಕಾಫಿಯನ್ನು ಬೆರೆಸಿ ಮಾಡಿರುವ ಮ್ಯಾಗಿ ವಿಷಕ್ಕೆ ಸಮ ಎಂದಿದ್ದಾರೆ.

ಮ್ಯಾಗಿ ನೂಡಲ್ಸ್ ವ್ಯಕ್ತಿಯ ಅಭಿರುಚಿಗೆ ಅನುಗುಣವಾಗಿ ತ್ವರಿತವಾಗಿ ತಯಾರಿಸಬಹುದಾದ ಮತ್ತು ಸುಲಭವಾಗಿ ಕಸ್ಟಮೈಸ್ ಮಾಡಬಹುದಾದ ಭಕ್ಷ್ಯಗಳಲ್ಲಿ ಒಂದಾಗಿದೆ. ನೀವು ಅದರ ಮಸಾಲೆಯುಕ್ತ ಅಥವಾ ಚೀಸ್ ಆವೃತ್ತಿಗಳನ್ನು ಹೊಂದಿದ್ದರೂ, ನೀವು ಎಂದಾದರೂ ಕಾಫಿಯೊಂದಿಗೆ ಬೆರೆಸಿದ ಮ್ಯಾಗಿಯನ್ನು ಪ್ರಯತ್ನಿಸುತ್ತೀರಾ? ಖಂಡಿತ ಹೀಗೆ ನೀವು ಪ್ರಯತ್ನ ಮಾಡಿರುವುದಿಲ್ಲ. ಇತ್ತೀಚೆಗೆ, ಬೀದಿ ಬದಿ ವ್ಯಾಪಾರಿಯೊಬ್ಬರು ಕಾಫಿ ಮತ್ತು ಹಾಲಿನಿಂದ ಮ್ಯಾಗಿಯನ್ನು ತಯಾರಿಸುತ್ತಿರುವುದು ಕಂಡುಬಂದಿದೆ. ಈತನ ಪ್ರಯೋಗವು ಜನರನ್ನ ಅಸಹ್ಯಗೊಳಿಸಿದೆ.

ಈ ಬೀದಿ ಬದಿ ವ್ಯಾಪಾರಿ ಈ ವಿಶಿಷ್ಟ ಖಾದ್ಯವನ್ನು ತಯಾರಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ 'ಎಚ್ಎನ್‌ವಿ ಸ್ಟ್ರೀಟ್‌ಫುಡ್' ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿಯು ಬಾಣಲೆಯಲ್ಲಿ ಹಾಲನ್ನು ಕುದಿಸಿ ಅದಕ್ಕೆ ಮ್ಯಾಗಿ ನೂಡಲ್ಸ್ ಸೇರಿಸುವುದನ್ನು ವಿಡಿಯೊದಲ್ಲಿ ಕಾಣಬಹುದು. ಅವನು ಕೆಲವು ತರಕಾರಿಗಳು, ಮ್ಯಾಗಿ ಟೇಸ್ಟ್ ಪೌಡರ್ ಹಾಕ್ತಾನೆ. ನಂತರ ಕಾಫಿ ಪುಡಿ ಮತ್ತು ಅರಿಶಿನ ಪುಡಿಯನ್ನು ಸಹ ಅದರಲ್ಲಿ ಬೆರೆಸುತ್ತಾನೆ. ನಂತರ ಅದನ್ನು 'ಅದ್ಭುತ' ಎಂದು ವಿವರಿಸುತ್ತಾರೆ.

ಈ ಕಾಫಿ ಮ್ಯಾಗಿಯ ವೀಡಿಯೊವನ್ನು ಇಲ್ಲಿ ನೋಡಿ

ಈ ಪೋಸ್ಟ್ ಅನ್ನು ಫೆಬ್ರವರಿ 9 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ, ಇದು 3,900 ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಅನೇಕರು ಪೋಸ್ಟ್ ನ ಕಾಮೆಂಟ್ ವಿಭಾಗಕ್ಕೆ ಹೋಗಿ ಈ ಖಾದ್ಯದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಹಾಲು, ಕಾಫಿ ಪುಡಿ ಬೆರೆಸಿ ಮಾಡಿದ ಮ್ಯಾಗಿಗೆ ಜನರಿಂದ ತೀವ್ರ ಅಸಮಾಧಾನ

ಒಬ್ಬ ವ್ಯಕ್ತಿ ಹೀಗೆ ಪ್ರತಿಕ್ರಿಯಿಸಿದ್ದಾನೆ. “ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ.”ಈ ವಿಡಿಯೊವನ್ನು ನೋಡುವ ಮೂಲಕ ನನ್ನ ಹೊಟ್ಟೆಯಲ್ಲಿ ತಿರುವುತ್ತಿದೆ" ಎಂದು ಮತ್ತೊಬ್ಬರು ಹೇಳಿದರು.

ಈ ವಿಡಿಯೊ ಬಗ್ಗೆ ಮತ್ತೊಬ್ಬರು ಕಾಮೆಂಟ್ ಮಾಡಿದ್ದು, "ಇದು ಮ್ಯಾಗಿ ಅಲ್ಲ, ಇದು ವಿಷ" ಎಂದು ಪೋಸ್ಟ್ ಮಾಡಿದ್ದಾರೆ."ಇದು ಯಾರನ್ನಾದರೂ ಅನಾರೋಗ್ಯಕ್ಕೆ ದೂಡಬಹುದು" ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ಆಹಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇಂಥ ಆಹಾರವನ್ನು ನೀವು ಎಂದಾದರೂ ಟೇಸ್ಟ್ ಮಾಡಿದ್ದೀರಾ? ಖಂಡಿತ ಮಾಡಿರುವುದಿಲ್ಲ. ಇದು ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರಬಹುದು ಅನ್ನೋದನ್ನು ತಿಳಿಯಬೇಕಿದೆ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner