ಸಫಾರಿಗೆ ಹೋದವರಿಗೆ ಎದುರಾದ ಭಾರಿ ಗಾತ್ರದ ಗಜರಾಜ, ಅನಿರೀಕ್ಷಿತ ಆಘಾತದಲ್ಲಿ ಎದೆಗುಂಡಿಗೆ ಕಿತ್ಕೊಂಡು ಬಂದ ಹಾಗಾಗುತ್ತೆ, ಈ ವಿಡಿಯೋ ನೋಡಿ-viral video shocking encounter in pilanesberg safari wild encounter bull elephant lifts and drops safari vehicle uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಫಾರಿಗೆ ಹೋದವರಿಗೆ ಎದುರಾದ ಭಾರಿ ಗಾತ್ರದ ಗಜರಾಜ, ಅನಿರೀಕ್ಷಿತ ಆಘಾತದಲ್ಲಿ ಎದೆಗುಂಡಿಗೆ ಕಿತ್ಕೊಂಡು ಬಂದ ಹಾಗಾಗುತ್ತೆ, ಈ ವಿಡಿಯೋ ನೋಡಿ

ಸಫಾರಿಗೆ ಹೋದವರಿಗೆ ಎದುರಾದ ಭಾರಿ ಗಾತ್ರದ ಗಜರಾಜ, ಅನಿರೀಕ್ಷಿತ ಆಘಾತದಲ್ಲಿ ಎದೆಗುಂಡಿಗೆ ಕಿತ್ಕೊಂಡು ಬಂದ ಹಾಗಾಗುತ್ತೆ, ಈ ವಿಡಿಯೋ ನೋಡಿ

ಪ್ರವಾಸಿಗರಿಗೆ ಎದುರಾದ ಬೃಹತ್ ಗಾತ್ರದ ಆನೆ. ಅದು ಕಾಡಾನೆಯಾದ ಕಾರಣ ಟ್ರಕ್‌ನಲ್ಲಿದ್ದ ಪ್ರವಾಸಿಗರಿಗೆ ಅದು ಅನಿರೀಕ್ಷಿತ ಆಘಾತವಾಗಿತ್ತು. ಪ್ರವಾಸಿಗರ ಟ್ರಕ್ vs ಆಫ್ರಿಕನ್ ಆನೆಯ ಮುಖಾಮುಖಿಯ ವಿಡಿಯೋ ವೈರಲ್ ಆಗಿದೆ. ಅನಿರೀಕ್ಷಿತ ಆಘಾತದಲ್ಲಿ ಎದೆಗುಂಡಿಗೆ ಕಿತ್ಕೊಂಡು ಬಂದ ಹಾಗಾಗುತ್ತೆ.

ಸಫಾರಿಗೆ ಹೋದವರಿಗೆ ಎದುರಾಯಿತು ಅನಿರೀಕ್ಷಿತ ಆಘಾತ. ಬೃಹತ್ ಆನೆಯೊಂದು ಸಫಾರಿ ಟ್ರಕ್‌ಗೆ ಎದುರಾದ ಕ್ಷಣ (ವಿಡಿಯೋ ಚಿತ್ರ)
ಸಫಾರಿಗೆ ಹೋದವರಿಗೆ ಎದುರಾಯಿತು ಅನಿರೀಕ್ಷಿತ ಆಘಾತ. ಬೃಹತ್ ಆನೆಯೊಂದು ಸಫಾರಿ ಟ್ರಕ್‌ಗೆ ಎದುರಾದ ಕ್ಷಣ (ವಿಡಿಯೋ ಚಿತ್ರ)

ಸಫಾರಿಗೆ ಹೋಗೋದು ಅಂದ್ರೆ ಬಹಳ ಜನರಿಗೆ ಇಷ್ಟ. ಹಾಗಾಗಿ ರಜೆ ಸಿಕ್ಕಿದಾಗೆಲ್ಲ ವನ್ಯಜೀವಿ ಸಫಾರಿಗೆ ಹೊರಟುಬಿಡುತ್ತಾರೆ. ಇದು ಸ್ವಲ್ಪ ಸಾಹಸದ ಪ್ರವಾಸವೇ ಸರಿ. ಕೆಲವು ಸಂದರ್ಭದಲ್ಲಿ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ, ಯಾವ ಕ್ಷಣ ಏನು ಬೇಕಾದರೂ ಆಗಬಹುದು. ಅಂತಹ ಒಂದು ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಟ್ರಕ್‌ನಲ್ಲಿ ಸಫಾರಿ ಹೊರಟವರಿಗೆ ಎದುರಾಯಿತು ಬೃಹತ್ ಆನೆ. ಅದೂ ನೇರ ಮುಖಾಮುಖಿ. ಹೇಗಿರಬಹುದು ಪರಿಸ್ಥಿತಿ. ಒಮ್ಮೆ ಊಹಿಸಿ ನೋಡಿ. ಧೈರ್ಯವಂತರಾದರೆ, ಸುಮ್ಮನಿದ್ದರೆ ಅದು ತನ್ನ ಪಾಡಿಗೆ ತಾನು ಹೊರಟು ಹೋಗಬಹುದು ಎಂದು ಆಲೋಚಿಸಿರುತ್ತೀರಿ ಅಲ್ವ.

ಆದರೆ ಇಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ಆನೆಯ ದಾರಿಗೆ ಪ್ರವಾಸಿಗರ ಟ್ರಕ್ ಅಡ್ಡ ಇದೆ. ಟ್ರಕ್ ಹಿಂದೆ ಹೋಗುವಂತಿಲ್ಲ. ಹಾಗಂತ ಮುಂದೆ ಹೋಗುವಂತೆಯೂ ಇಲ್ಲ. ಎರಡೂ ಅಪಾಯವೇ ಸರಿ. ಮುಂದೇನಾಯಿತು? ಗೆಸ್ ಮಾಡ್ತೀರಾ. ಯಾವುದಕ್ಕೂ ಅನಿರೀಕ್ಷಿತ ಆನೆ ದಾಳಿಯ ಈ ವಿಡಿಯೋ ನೋಡಿ. ಈ ಘಟನೆ ಎಲ್ಲಿ ನಡೆಯಿತು ಎಂಬುದನ್ನು ಮುಂದೆ ವಿವರಿಸುತ್ತೇವೆ.

ಸಫಾರಿಗೆ ಹೋದವರಿಗೆ ಎದುರಾದ ಗಜರಾಜ, ಸುಮ್ನೇ ಹೋದ ಅಂದ್ಕೋಬೇಡಿ- ವಿಡಿಯೋ ನೋಡಿ

ಹೌದು ನೀವು ನೋಡಿದ್ದು ನಿಜ. ಆ ಆನೆ ಪ್ರವಾಸಿಗರಿದ್ದ ಟ್ರಕ್ ಅನ್ನು ಎತ್ತಿ ಎತ್ತಿ ಹಾಕುತ್ತಿರುವ ದೃಶ್ಯ. ಅಬ್ಬಾ.. ನೋಡ್ತಾ ಇದ್ರೆ ಮೈ ಎಲ್ಲ ನಡುಕ ಹತ್ತಿಕೊಂಡು ಬಿಡುತ್ತೆ. ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗೆ ಒಳಗಾಗಿದ್ದು, 1,700ಕ್ಕೂ ಹೆಚ್ಚು ಮೆಚ್ಚುಗೆ ಪಡೆದಿದೆ.

ಪಿಲಾನೆಸ್‌ಬರ್ಗ್‌ ಸಫಾರಿ ವೇಳೆ ನಡೆದ ಘಟನೆ

ದಕ್ಷಿಣ ಆಫ್ರಿಕಾದ ಫಿಲಾನೆಸ್‌ಬರ್ಗ್‌ ನ್ಯಾಷನಲ್ ಪಾರ್ಕ್‌ನಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಇದನ್ನು ದೂರದಿಂದ ವೀಕ್ಷಿಸಿದ ಹೆಂಡ್ರಿ ಬ್ಲೋಮ್ ಎಂಬುವವರು ಇದರ ವಿಡಿಯೋವನ್ನು ಲೇಟೆಸ್ಟ್‌ಸೈಟಿಂಗ್ಸ್ ತಾಣಕ್ಕೆ ಹಂಚಿಕೊಂಡಿದ್ದಾರೆ.

ಅವರು ಹೇಳಿಕೊಂಡಿರುವುದು ಇಷ್ಟು- ಅಲ್ಲೇ ಸಮೀಪದ ರತ್ಲೋಗೊ ಹೈಡ್‌ನಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ನಿಂತಿದ್ದಾಗ ಪಾರ್ಕಿಂಗ್ ಏರಿಯಾಕ್ಕೆ ಬಂದಿದ್ದ ಆನೆ ಈ ಕೃತ್ಯವೆಸಗಿತ್ತು. ಪ್ರವಾಸಿ ಮಾರ್ಗದರ್ಶಿ ಮತ್ತು ಕೆಲವು ಪ್ರವಾಸಿಗರು ವಾಹನದಲ್ಲಿದ್ದರು. ಚಾಲಕನೂ ಇದ್ದ. ಆನೆ ಆ ವಾಹನವನ್ನು ಎತ್ತಿ ಎತ್ತಿ ಹಾಕುತ್ತಿರಬೇಕಾದರೆ ಅದರಲ್ಲಿದ್ದರು ಭಯಭೀತರಾಗಿ ಕಿರುಚಾಡುತ್ತಿದ್ದರು.

ಅದೃಷ್ಟವಶಾತ್ ನಾವು ಆ ವಾಹನದಿಂದ ಕೆಳಗಿಳಿದು ವಾಶ್‌ರೂಮ್‌ ಕಡೆಗೆ ಹೋಗಿದ್ದೆವು. ಭೀಕರ ಸದ್ದಿಗೆ ಹೊರಬಂದು ನೋಡಿದಾಗ ಈ ದೃಶ್ಯ ಕಾಣಿಸಿತ್ತು. ಪ್ರವಾಸಿ ಮಾರ್ಗದರ್ಶಿ ವಾಹನದ ಬಾಗಿಲಿಗೆ ಬಡಿದು ಆನೆಯನ್ನು ಅಲ್ಲಿಂದ ದೂರ ಸರಿಸುವ ಪ್ರಯತ್ನ ಮುಂದುವರಿಸಿದ್ದ.

ಆದರೆ ಆನೆ ಹಿಂದೆ ಹೋಗಿ ಪುನಃ ಮುಂದೆ ಬಂದು ವಾಹನದ ಮೇಲೆ ದಾಳಿ ನಡೆಸಿದ್ದು ಕಂಡುಬಂತು. ಎಲ್ಲರೂ ಕಳವಳಕ್ಕೀಡಾಗಿದ್ದರು. ಆ ವಾಹನದಲ್ಲಿದ್ದವರ ಕಥೆ ಮುಗಿಯಿತು ಎಂದು ಭಯಭೀತರಾಗಿದ್ದರು. ಎರಡು ಬಾರಿ ಆನೆ ಆ ವಾಹನವನ್ನು ಎತ್ತಿ ಕೆಳಗೆ ಹಾಕಿದಾಗ ಆನೆ ಮತ್ತು ವಾಹನದ ನಡುವೆ ಅಂತರ ಉಂಟಾಯಿತು.

ಅದರ ಪ್ರಯೋಜನ ಪಡೆದ ಪ್ರವಾಸದ ಮಾರ್ಗದರ್ಶಿ/ ಚಾಲಕ ವಾಹನವನ್ನು ಇನ್ನಷ್ಟು ಹಿಂದೆ ತಗೊಂಡು ಬಂದ. ಎಲ್ಲರೂ ಅದರಿಂದ ಇಳಿದು ಸುರಕ್ಷಿತ ಪ್ರದೇಶದಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದರು. ಮಾರ್ಗದರ್ಶಿ ಆಗ, ಆ ಆನೆ ವಾಪಸ್ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ ಕಾರಣ, ತುಸು ಹೊತ್ತು ನೋಡಿ ಬಳಿಕ ಅಲ್ಲಿಂದು ಮುಂದುವರಿಯಲಾಯಿತು. ಎಲ್ಲರೂ ಸುರಕ್ಷಿತವಾಗಿದ್ದೆವು ಎಂದು ಹೆಂಡ್ರಿ ಹೇಳಿದ್ಧಾಗಿ ಲೇಟೆಸ್ಟ್‌ಸೈಟಿಂಗ್ಸ್ ತಾಣದ ವರದಿ ವಿವರಿಸಿದೆ.

ವೈರಲ್‌ ವಿಡಿಯೋದ ಕೆಳಗೆ 250ಕ್ಕೂ ಹೆಚ್ಚು ಕಾಮೆಂಟ್‌ಗಳಿದ್ದು, ಬಹುತೇಕರು ಆ ಆಘಾತಕಾರಿ ಕ್ಷಣಗಳ ಬಗ್ಗೆ ಕಳವಳವ್ಯಕ್ತಪಡಿಸಿರುವುದು ಕಂಡುಬಂದಿದೆ.

mysore-dasara_Entry_Point