Viral Video: ಬಾಹ್ಯಾಕಾಶದಲ್ಲಿ ಒದ್ದೆ ಟವಲ್‌ ಹಿಂಡಿದ ಗಗನಯಾತ್ರಿ, ನಂತರ ಏನಾಯ್ತು? ಈ ವಿಡಿಯೋದಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ಬಾಹ್ಯಾಕಾಶದಲ್ಲಿ ಒದ್ದೆ ಟವಲ್‌ ಹಿಂಡಿದ ಗಗನಯಾತ್ರಿ, ನಂತರ ಏನಾಯ್ತು? ಈ ವಿಡಿಯೋದಲ್ಲಿದೆ ಉತ್ತರ

Viral Video: ಬಾಹ್ಯಾಕಾಶದಲ್ಲಿ ಒದ್ದೆ ಟವಲ್‌ ಹಿಂಡಿದ ಗಗನಯಾತ್ರಿ, ನಂತರ ಏನಾಯ್ತು? ಈ ವಿಡಿಯೋದಲ್ಲಿದೆ ಉತ್ತರ

Viral Video: ಬಾಹ್ಯಾಕಾಶದಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನಗಳು ನಮ್ಮನ್ನು ರೋಮಾಂಚನಗೊಳಿಸುತ್ತದೆ. ಎಂದಾದರೂ ಬಾಹ್ಯಾಕಾಶದಲ್ಲಿ ಒದ್ದೆ ಟವಲ್‌ ಹಿಂಡಿದರೆ ಏನಾಗಬಹುದು ಎಂದು ಯೋಚಿಸಿದ್ದೀರೇ..? ಈ ವೈರಲ್‌ ವಿಡಿಯೋ ನೋಡಿದರೆ ನೀವು ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ.!

ಬಾಹ್ಯಾಕಾಶದಲ್ಲಿ ಒದ್ದೆ ಟವಲ್‌ ಹಿಂಡಿದ ಗಗನಯಾತ್ರಿ
ಬಾಹ್ಯಾಕಾಶದಲ್ಲಿ ಒದ್ದೆ ಟವಲ್‌ ಹಿಂಡಿದ ಗಗನಯಾತ್ರಿ (PC: gnoledgeofficial )

Viral Video: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳಿಗೆ ಆಗುವ ವಿಚಿತ್ರ ಅನುಭಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಅಲ್ಲಿ ಗಗನಯಾತ್ರಿಗಳು ಜೀವಿಸುವ ರೀತಿಯನ್ನು ನೋಡುವುದೇ ಮಜಾ ಎನಿಸುತ್ತದೆ. ಜೊತೆಗೆ ಆಶ್ಚರ್ಯವಾಗದೇ ಇರದು. ಇದೀಗ ಇಂತದ್ದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಡೆ ಸದ್ದು ಮಾಡುತ್ತಿದೆ.

ಈ ವಿಡಿಯೋದಲ್ಲಿ ಗಗನಯಾತ್ರಿಯೊಬ್ಬರು ತಮ್ಮ ಟವಲ್‌ ಹಿಂಡಲು ಮಾಡುವ ಹರಸಾಹಸ ನೋಡುಗರಿಗೆ ನಗು ತರಿಸುವಂತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.ಅಂದಹಾಗೆ ಇದೇನು ಹೊಸ ವಿಡಿಯೋವಲ್ಲ. 10 ವರ್ಷಗಳ ಹಿಂದೆ ಯುಟ್ಯೂಬ್‌ನಲ್ಲಿ ಕೆನಡಿಯನ್ ಸ್ಪೇಸ್ ಏಜನ್ಸಿಯು ಈ ವಿಡಿಯೋವನ್ನು ಶೇರ್ ಮಾಡಿತ್ತು. ಈ ವಿಡಿಯೋದ ಸಣ್ಣ ತುಣುಕು ಇದೀಗ ಇನ್ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ.

ಕೆನಡಾದ ಸ್ಪೇಸ್ ಏಜೆನ್ಸಿ ಗಗನಯಾತ್ರಿ ಹ್ಯಾಡ್ಫೀಲ್ಡ್, ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ವಿಜ್ಞಾನದ ಸರಳವಾದ ಪ್ರಯೋಗವೊಂದನ್ನು ಮಾಡಿ ತೋರಿಸಿದ್ದಾರೆ. ನೋವಾ ಸ್ಕಾಟಿಯಾದ 10ನೇ ತರಗತಿ ವಿದ್ಯಾರ್ಥಿಗಳು ಕೆನಡಾದ ಸ್ಪೇಸ್ ಏಜೆನ್ಸಿ ನಡೆಸಿದ ಪ್ರಯೋಗದಲ್ಲಿ ಗೆದ್ದಿದ್ದಾರೆ ಎಂದು ಬಾಹ್ಯಾಕಾಶ ಸಂಸ್ಥೆಯು ಈ ವಿಡಿಯೋದೊಂದಿಗೆ ಮಾಹಿತಿ ಹಂಚಿಕೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಗನಯಾತ್ರಿ ಹ್ಯಾಡ್ಫೀಲ್ಡ್ ಬಾಹ್ಯಾಕಾಶದಲ್ಲಿ ಒದ್ದೆ ಬಟ್ಟೆಯನ್ನು ಹಿಂಡಿದರೆ ಏನಾಗುತ್ತದೆ ಎಂಬುದನ್ನು ತೋರಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ಈಗಾಗಲೇ 6 ಲಕ್ಷದಷ್ಟು ವೀವ್ಸ್ ಸಂಪಾದಿಸಿದೆ ಹಾಗೂ 15 ಸಾವಿರಕ್ಕೂ ಅಧಿಕ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅನೇಕರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಬಾಕ್ಸಿನಲ್ಲಿ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ನಮಗೆ ಏನನ್ನಾದರೂ ಕಲಿಸಲು ಗಗನಯಾತ್ರಿಗಳು ತೋರುವ ಉತ್ಸಾಹಕ್ಕೆ ನಾವು ಗೌರವ ನೀಡಲೇಬೇಕು ಅಂತಾ ಈ ವಿಡಿಯೋಗೆ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದೇ ಕಾರಣಕ್ಕೆ ನನಗೆ ಭೌತಶಾಸ್ತ್ರ ಎಂದರೆ ಇಷ್ಟ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ತೋರಿಸಿರುವಂತೆ, ಗಗನಯಾತ್ರಿಯು ಒದ್ದೆ ಟವಲ್‌ ಹಿಂಡಲು ಹೋಗಿದ್ದಾರೆ. ಭೂಮಿಯ ಮೇಲಾದರೆ ಗುರುತ್ವಾಕರ್ಷಣೆಯ ಕಾರಣದಿಂದಾಗಿ ಟವಲ್‌ನಲ್ಲಿದ್ದ ನೀರು ಕೆಳಗೆ ಸುರಿಯುತ್ತಿತ್ತು. ಆದರೆ ಬಾಹ್ಯಾಕಾಶದಲ್ಲಿ ನೀರು ಟವಲ್‌ನಿಂದ ಕೆಳಗೆ ಬೀಳುವುದು ಬಿಟ್ಟು ಒಂದು ಪದರದಂತೆ ಟವಲ್‌ ಸುತ್ತವೇ ಸುತ್ತಿಕೊಂಡಿರುವುದನ್ನು ಕಾಣಬಹುದಾಗಿದೆ.

Whats_app_banner