ಕನ್ನಡ ಸುದ್ದಿ  /  Lifestyle  /  Viral Video Woman Iron A Shirt Using Pressure Cooker Leaves Netizens In Splits Cloth Ironing Tips Mgb

Viral Video: ಏನ್​ ಐಡಿಯಾನಮ್ಮಿ! ಪ್ರೆಶರ್ ಕುಕ್ಕರ್​​ನಿಂದ ಶರ್ಟ್​ ಇಸ್ತ್ರಿ​ ಮಾಡಿದ ಯುವತಿ

Viral Video: ಯುವತಿಯೊಬ್ಬಳು ವಿಭಿನ್ನ ರೀತಿಯಲ್ಲಿ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದನ್ನು ಕಂಡ ನೆಟ್ಟಿಗರು ಎಂಥಾ ಬ್ರಿಲಿಯಂಟ್​ ಐಡಿಯಾ ಎನ್ನುತ್ತಿದ್ದಾರೆ.

ಕುಕ್ಕರ್​​ನಿಂದ ಶರ್ಟ್​ ಇಸ್ತ್ರಿ​ ಮಾಡಿದ ಯುವತಿ
ಕುಕ್ಕರ್​​ನಿಂದ ಶರ್ಟ್​ ಇಸ್ತ್ರಿ​ ಮಾಡಿದ ಯುವತಿ

ಸೋಶಿಯಲ್​ ಮೀಡಿಯಾ ಕೆಲವೊಂದು ಬಾರಿ ನಮಗೆ ಅನೇಕ ಟಿಪ್ಸ್​ಗಳನ್ನ ನೀಡತ್ತೆ. ಓ ಹೌದಲ್ವ, ಇಷ್ಟು ದಿನ ಈ ಐಡಿಯಾ ನಮಗೆ ಬರಲೇ ಇಲ್ಲ ಅಲ್ವಾ ಅಂತ ನಾವು ವಿಡಿಯೋಗಳನ್ನು ನೋಡಿ ಅಂದುಕೊಂಡದ್ದುಂಟು. ಈಗ ಅಂತದ್ದೇ ವಿಡಿಯೋವೊಂದು ಇಲ್ಲಿದೆ. ಯುವತಿಯೊಬ್ಬಳು ವಿಭಿನ್ನ ರೀತಿಯಲ್ಲಿ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಎಕ್ಸ್​​ (ಟ್ವಟರ್​)ನಲ್ಲಿ 17 ಸಾವಿರ ಫಾಲೋವರ್ಸ್ ಹೊಂದಿರುವ ಶುಭಾಂಗಿ ಪಂಡಿತ್ ಎಂಬವರು ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಪ್ರೆಶರ್ ಕುಕ್ಕರ್ ಬಳಸಿ ಶರ್ಟ್ ಅನ್ನು​ ಇಸ್ತ್ರಿ ಮಾಡಿದ್ದಾಳೆ. ಅಡುಗೆ ಮನೆಯಲ್ಲಿ ಎಲೆಕ್ಟ್ರಿಕ್ ಒಲೆಯ ಮೇಲೆ ಕುಕ್ಕರ್ ಇಟ್ಟಿರುವ ಈಕೆ ಅದು ವಿಸಿಲ್​ ಹೊಡೆಯುತ್ತಿದ್ದಂತೆಯೇ ಕುಕ್ಕರ್​ ಅನ್ನು ಎತ್ತಿಕೊಂಡು ಕೋಣೆಯೊಂದಕ್ಕೆ ಬರುತ್ತಾಳೆ. ಅಲ್ಲಿ ಬೆಡ್​​ ಮೇಲೆ ಇರಿಸಲಾಗಿದ್ದ ಶರ್ಟ್​ ಅನ್ನು ಬಿಸಿ ಕುಕ್ಕರ್​ ಬಳಸಿ ಐರನ್​ ಮಾಡುತ್ತಾಳೆ.

ಆಕೆಯ ಟೆಕ್ನಿಕ್​ ವರ್ಕ್​ ಆಗಿದೆ. ಶರ್ಟ್ ಅಚ್ಚುಕಟ್ಟಾಗಿ ಮತ್ತು ಗರಿಗರಿಯಾಗಿ ಕಾಣುತ್ತಿದೆ. ತಮ್ಮ ಪೋಸ್ಟ್​ಗೆ ಶುಭಾಂಗಿ, "ಪ್ರೀತಿಯ ಅಕ್ಕನಿಗೆ ಸಾಷ್ಟಾಂಗ ನಮಸ್ಕಾರಗಳು" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಸುಮಾರು 3 ಲಕ್ಷ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಈ ವಿಡಿಯೋ ಕಂಡ ನೆಟ್ಟಿಗರು ಪರಿಪರಿಯಾಗಿ ಕಾಮೆಂಟ್​ ಮಾಡಿದ್ದಾರೆ.

"ಹೊಸ ಇನೋವೇಷನ್​. ಅಕ್ಕ ಪೇಟೆಂಟ್ ಪ್ರಮಾಣಪತ್ರವನ್ನು ಪಡೆಯಲು ರೆಡಿಯಾಗಿ" ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ. "ಇದೊಂದು ಬ್ರಿಲಿಯಂಟ್​ ಐಡಿಯಾ, ಇದನ್ನ ಹಿಂದೆಂದೂ ಯೋಚಿಸಿರಲಿಲ್ಲ" ಎಂದು ಮತ್ತೊಬ್ಬರು ಹೇಳಿದ್ದಾರೆ. "ಬಾಲ್ಯದಲ್ಲಿ, ನಾವು ಪಾತ್ರೆಯಿಂದ ಬಟ್ಟೆಗಳ ಐರನ್​ ಮಾಡುತ್ತಿದ್ದೆವು. ಆ ಸಮಯದಲ್ಲಿ ಕುಕ್ಕರ್ ಇರಲಿಲ್ಲ." ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಐಡಿಯಾ ನಿಜಕ್ಕೂ ಚೆನ್ನಾಗಿದೆ. ಈ ವಿಡಿಯೋದಲ್ಲಿ ಆಕೆ ಎಲೆಕ್ಟ್ರಿಕ್ ಸ್ವವ್​ ಮೇಲೆ ಕುಕ್ಕರ್ ಇಟ್ಟು ನಂತರ ಅದರಿಂದ ಬಟ್ಟೆ ಇಸ್ತ್ರಿ ಮಾಡಿದ್ದಾರೆ. ಆದರೆ ಗ್ಯಾಸ್​ ಸ್ಟವ್​ ಮೇಲೆ ಅಡುಗೆ ಮಾಡಿ ಕುಕ್ಕರ್​ ಬಳಸಿ ನಾವು ಬಟ್ಟೆ ಐರನ್​ ಮಾಡಬಹುದು. ಕರೆಂಟ್​ ಇಲ್ಲದಾಗ ಈ ತಂತ್ರ ಉಪಯೋಗಕ್ಕೆ ಬರುತ್ತದೆ.

ವಿಭಾಗ