ಸ್ಯಾಮ್‌ಸಂಗ್‌ಗೆ ಶುರುವಾಯಿತು ನಡುಕ: ವಿವೋದಿಂದ ಬರುತ್ತಿದೆ ಮೊಟ್ಟ ಮೊದಲ 200MP ಕ್ಯಾಮೆರಾ ಫೋನ್
Vivo Upcoming Mobile: ವಿವೋ ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಕಂಪನಿಯು ಬರೋಬ್ಬರಿ 200MP ಕ್ಯಾಮೆರಾ ಫೋನ್ ಅನ್ನು ಬಿಡುಗಡೆ ಮಾಡಲು ವೇದಿಕೆ ಸಜ್ಜುಗೊಳಿಸುತ್ತಿದೆ, ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಆಲ್ಟ್ರಾಗೆ ಕಠಿಣ ಸ್ಪರ್ಧೆ ನೀಡಲಿದೆ. (ವರದಿ: ವಿನಯ್ ಭಟ್)
ಟೆಕ್ ಮಾರುಕಟ್ಟೆಯಲ್ಲಿ ಇಂದು ಕ್ಯಾಮೆರಾ ಫೋನುಗಳಿಗೆ ಭರ್ಜರಿ ಬೇಡಿಕೆ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ಗಳು ಅತಿ ಹೆಚ್ಚು ಮೆಗಾ ಪಿಕ್ಸಲ್ ಕ್ಯಾಮೆರಾ ಸ್ಮಾರ್ಟ್ಫೋನ್ಗಳನ್ನು ಅನಾವರಣ ಮಾಡುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ಅದ್ಭುತ ಕ್ಯಾಮೆರಾವನ್ನು ಹೊಂದಿರುವ ಫೋನೆಂದರೆ ಸ್ಯಾಮ್‌ಸಂಗ್ ಕಂಪನಿಯ ಗ್ಯಾಲಕ್ಸಿ S24 ಆಲ್ಟ್ರಾ. ಇದು ಬರೋಬ್ಬರಿ 200 ಮೆಗಾ ಪಿಕ್ಸಲ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ.
ಇದೀಗ ಸ್ಯಾಮ್‌ಸಂಗ್‌ಗೆ ಪೈಪೋಟಿ ನೀಡಲು ಚೀನಾ ಮೂಲದ ವಿವೋ ಕಂಪನಿ ಮುಂದಾಗಿದೆ. ವಿವೋ ಹೊಸ ಸ್ಮಾರ್ಟ್‌ಫೋನ್ ವಿವೋ X200 ಪ್ರೊ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ವಿಶೇಷ ಎಂದರೆ ಈ ಫೋನ್ 200 ಮೆಗಾ ಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರಲಿದೆ.
ಇದನ್ನೂ ಓದಿ: ಕಾರಿನ ಹಿಂಬದಿಯ ಕನ್ನಡಿ ಮೇಲೆ ಕೆಂಪು ಗೆರೆಗಳು ಏಕೆ ಇರುವುದು ಗೊತ್ತೇ? ಇಲ್ಲಿದೆ ಕುತೂಹಲಕಾರಿ ವಿಷಯ
ವಿವೋ X200 ಪ್ರೊ ಫೋನ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಯಾವುದೇ ದೃಢೀಕೃತ ದಿನಾಂಕವಿಲ್ಲ. ಆದರೆ, ಸೋರಿಕೆಯಾದ ವರದಿಯ ಪ್ರಕಾರ, 2025 ರ ಮೊದಲಾರ್ಧದಲ್ಲಿ ಈ ಫೋನ್ ಮಾರುಕಟ್ಟೆಗೆ ಅಪ್ಪಳಿಸಲಿದೆ. ಕೆಲವು ವರದಿಗಳಲ್ಲಿ, 2024 ರ ಹಬ್ಬದ ಋತುವನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಫೋನ್ ಮೊದಲು ಚೀನಾದಲ್ಲಿ ಬಿಡುಗಡೆಯಾಗಲಿದೆಯಂತೆ. ವಿವೋ X200 ಪ್ರೊ ಫೋನಿನ ಹಿಂದಿನ ವರ್ಷನ್ ವಿವೋ X100 ಪ್ರೊ ಸ್ಮಾರ್ಟ್‌ಫೋನ್ ಪ್ರಸ್ತುತ ಭಾರತದಲ್ಲಿ ಲಭ್ಯವಿದೆ.
ಕ್ಯಾಮೆರಾ ಸಂವೇದಕ
ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೈಬೊದಲ್ಲಿ ಬಿಡುಗಡೆಯಾದ ಪೋಸ್ಟ್ ಪ್ರಕಾರ, ವಿವೋ ಎಕ್ಸ್ 200 ಸ್ಮಾರ್ಟ್‌ಫೋನ್ ಸರಣಿಯಲ್ಲಿ ಪೆರಿಸ್ಕೋಪಿಕ್ ಟೆಲಿಫೋಟೋ ಕ್ಯಾಮೆರಾವನ್ನು ಒದಗಿಸಲಾಗಿದೆ. ಇದುವೇ 200MP ಕ್ಯಾಮೆರಾ ಸಂವೇದಕವನ್ನು ನೀಡಬಹುದು. ಅಲ್ಲದೆ 1/1.4 ಇಂಚಿನ ಗಾತ್ರ ಮತ್ತು f/2.67 ದ್ಯುತಿರಂಧ್ರದೊಂದಿಗೆ ಬರುತ್ತದೆ. ಇದರ ಫೋಕಲ್ ಲೆಂತ್ 85 ಮಿಮೀ ಇರುತ್ತದೆ. ಇದರಲ್ಲಿ ಸ್ಯಾಮ್‌ಸಂಗ್ S5KHP9 ಪೆರಿಸ್ಕೋಪಿಕ್ ಟೆಲಿಫೋಟೋ ಕ್ಯಾಮೆರಾವನ್ನು ಒದಗಿಸಲಾಗುವುದು.
ವಿವೋ X200 ಪ್ರೊ ಫೀಚರ್ಸ್
ವಿವೋ X200 ಪ್ರೊ ಸ್ಮಾರ್ಟ್‌ಫೋನ್ 6.5 ಇಂಚಿನ ಫ್ಲಾಟ್ OLED ಪ್ಯಾನೆಲ್ ಅನ್ನು ಹೊಂದಿರುತ್ತದೆ. ಇದು ದೊಡ್ಡ OLED ಡಿಸ್ಪ್ಲೇಯೊಂದಿಗೆ ಬರುವ ನಿರೀಕ್ಷೆಯಿದೆ. 1.5k ರೆಸಲ್ಯೂಶನ್ ನೀಡಬಹುದು. 120Hz ರಿಫ್ರೆಶ್ ರೇಟ್ ಬೆಂಬಲವನ್ನು ಫೋನ್‌ನಲ್ಲಿ ಒದಗಿಸಲಾಗುತ್ತದೆ. ಪ್ರೊಸೆಸರ್ ಬೆಂಬಲವಾಗಿ, ಫೋನ್‌ನಲ್ಲಿ ಡೈಮೆನ್ಸಿಟಿ 9400 ಅಥವಾ ಸ್ನಾಪ್‌ಡ್ರಾಗನ್ 8 ಜನ್ 4 SoC ಚಿಪ್‌ಸೆಟ್ ಅನ್ನು ಅಳವಡಿಸಬಹುದು ಎಂಬ ಮಾತಿದೆ. ಬಲಿಷ್ಠ ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜರ್ ಸೌಲಭ್ಯ ಕೂಡ ನೀಡುತ್ತಾರಂತೆ. ಇದು 100W ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
ವರದಿ: ವಿನಯ್ ಭಟ್