ಉಚಿತ ಅನಿಯಮಿತ ಡೇಟಾ: ಗ್ರಾಹಕರನ್ನು ಸೆಳೆಯಲು ಬಂಪರ್ ಪ್ಲ್ಯಾನ್ ಮಾಡಿದ ವೊಡಾಫೋನ್ ಐಡಿಯಾ
ಕನ್ನಡ ಸುದ್ದಿ  /  ಜೀವನಶೈಲಿ  /  ಉಚಿತ ಅನಿಯಮಿತ ಡೇಟಾ: ಗ್ರಾಹಕರನ್ನು ಸೆಳೆಯಲು ಬಂಪರ್ ಪ್ಲ್ಯಾನ್ ಮಾಡಿದ ವೊಡಾಫೋನ್ ಐಡಿಯಾ

ಉಚಿತ ಅನಿಯಮಿತ ಡೇಟಾ: ಗ್ರಾಹಕರನ್ನು ಸೆಳೆಯಲು ಬಂಪರ್ ಪ್ಲ್ಯಾನ್ ಮಾಡಿದ ವೊಡಾಫೋನ್ ಐಡಿಯಾ

Vodafone Idea: ಬಿಎಸ್​ಎನ್​​ಎಲ್ ತನ್ನ ಅಗ್ಗದ ಯೋಜನೆಗಳಿಂದ ವೇಗವಾಗಿ ಗ್ರಾಹಕರನ್ನು ಆಕರ್ಷಿಸುತ್ತಿರುವ ಸಮಯದಲ್ಲಿ ವೊಡಾಫೋನ್ ಐಡಿಯಾ ಈ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ನೀವು ಹೆಚ್ಚು ಇಂಟರ್ನೆಟ್ ಬಳಸುವವರಾಗಿದ್ದರೆ ವೊಡಾಫೋನ್ ಐಡಿಯಾದ ಈ ಹೊಸ ಸೂಪರ್‌ ಹೀರೋ ಯೋಜನೆ ತುಂಬಾ ಇಷ್ಟವಾಗುತ್ತದೆ. (ವರದಿ: ವಿನಯ್‌ ಭಟ್)

ವೊಡಾಫೋನ್ ಐಡಿಯಾದಿಂದ ಉಚಿತ ಅನಿಯಮಿತ ಡೇಟಾ
ವೊಡಾಫೋನ್ ಐಡಿಯಾದಿಂದ ಉಚಿತ ಅನಿಯಮಿತ ಡೇಟಾ (PC: Freepik)

ವೊಡಾಫೋನ್ ಐಡಿಯಾ ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ಜಿಯೋ- ಏರ್‌ಟೆಲ್‌ ಬಳಿಕ ವಿಐ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇದೀಗ ವೊಡಾಫೋನ್ ಐಡಿಯಾ ತನ್ನ ಕೋಟಿಗಟ್ಟಲೆ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ. ಇದು ಜಿಯೋ ಮತ್ತು ಏರ್‌ಟೆಲ್‌ನ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ವಿಐ ತನ್ನ ಇಂಟರ್ನೆಟ್ ಡೇಟಾ ಬಳಕೆದಾರರಿಗಾಗಿ ಹೊಸ ಸೂಪರ್ ಹೀರೋ ಯೋಜನೆಯನ್ನು ತಂದಿದೆ. ಈ ಯೋಜನೆಯಲ್ಲಿ, ಕಂಪನಿಯು ಗ್ರಾಹಕರಿಗೆ 12 ಗಂಟೆಗಳವರೆಗೆ ಅನಿಯಮಿತ ಡೇಟಾವನ್ನು ನೀಡುತ್ತಿದೆ.

ಬಿಎಸ್​ಎನ್​​ಎಲ್ ತನ್ನ ಅಗ್ಗದ ಯೋಜನೆಗಳಿಂದ ವೇಗವಾಗಿ ಗ್ರಾಹಕರನ್ನು ಆಕರ್ಷಿಸುತ್ತಿರುವ ಸಮಯದಲ್ಲಿ ವೊಡಾಫೋನ್ ಐಡಿಯಾ ಈ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ನೀವು ಇಂಟರ್ನೆಟ್ ಅನ್ನು ಹೆಚ್ಚು ಬಳಸುವವರಾಗಿದ್ದರೆ ವೊಡಾಫೋನ್ ಐಡಿಯಾದ ಈ ಹೊಸ ಸೂಪರ್‌ ಹೀರೋ ಯೋಜನೆ ತುಂಬಾ ಇಷ್ಟವಾಗುತ್ತದೆ.

ವೊಡಾಫೋನ್ ಐಡಿಯಾದ ಆಫರ್ ಏನು?

ವೊಡಾಫೋನ್ ಐಡಿಯಾ ಈಗಾಗಲೇ ತನ್ನ ಗ್ರಾಹಕರಿಗಾಗಿ ಮಧ್ಯರಾತ್ರಿ 12 ರಿಂದ ಬೆಳಗ್ಗೆ 6 ರವರೆಗೆ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಆದರೆ ಈಗ ಹೊಸ ಯೋಜನೆಯಲ್ಲಿ ನಿಮಗೆ 12 ರಿಂದ 12 ರವರೆಗೆ ಅನಿಯಮಿತ ಡೇಟಾದ ಪ್ರಯೋಜನವನ್ನು ನೀಡಲು ಮುಂದಾಗಿದೆ. ಅರ್ಥಾತ್, ವಿಐ ಬಳಕೆದಾರರು ಈಗ ಮಧ್ಯರಾತ್ರಿ 12 ರಿಂದ ಮಧ್ಯಾಹ್ನ 12 ರವರೆಗೆ ತಮಗೆ ಬೇಕಾದಷ್ಟು ಡೇಟಾವನ್ನು ಬಳಸಬಹುದು. ವೊಡಾಫೋನ್ ಐಡಿಯಾ ನೀಡುತ್ತಿರುವ 12 ಗಂಟೆಗಳ ಅನಿಯಮಿತ ಡೇಟಾ ಆಫರ್‌ಗೆ ಪ್ರತ್ಯೇಕ ಯೋಜನೆ ಇಲ್ಲ. ದಿನಕ್ಕೆ 2GB ಅಥವಾ ಹೆಚ್ಚಿನ ಡೇಟಾವನ್ನು ಒದಗಿಸುವ ಎಲ್ಲಾ ಪ್ಲ್ಯಾನ್​ಗಳಲ್ಲಿ ಈ ಕೊಡುಗೆಯು ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. 2GB ಅಥವಾ ಅದಕ್ಕಿಂತ ಹೆಚ್ಚಿನ ಡೇಟಾ ಹೊಂದಿರುವ ಪ್ಲಾನ್‌ಗಳ ಬೆಲೆ ರೂ. 365 ರಿಂದ ಪ್ರಾರಂಭವಾಗುತ್ತದೆ.

ವಾರಾಂತ್ಯದ ರೋಲ್ ಓವರ್ ಸೌಲಭ್ಯ ಕೂಡ ಲಭ್ಯ

ವೊಡಾಫೋನ್ ಐಡಿಯಾದ ಮತ್ತೊಂದು ವಿಶೇಷವೆಂದರೆ ಈ ರೀತಿಯ ಯೋಜನೆಗಳಲ್ಲಿ ಗ್ರಾಹಕರು ವಾರಾಂತ್ಯದ ರೋಲ್‌ ಓವರ್ ಸೌಲಭ್ಯವನ್ನು ಸಹ ಪಡೆಯುತ್ತಾರೆ. ಇದರ ಪ್ರಮುಖ ಪ್ರಯೋಜನವೆಂದರೆ ಬಳಕೆದಾರರು ವಾರವಿಡೀ ಬಳಸಿಯೂ ಉಳಿದ ಡೇಟಾವನ್ನು ಮುಂದಿನ ದಿನಕ್ಕೆ ಆ್ಯಡ್ ಆಗುತ್ತದೆ. ವಿಐ ನ ಈ ಯೋಜನೆಯು ನಿಮಗೆ ಡೇಟಾ ಆನಂದದ ಸೌಲಭ್ಯವನ್ನು ನೀಡುತ್ತದೆ. ಇದರಲ್ಲಿ, ನೀವು ಯಾವುದೇ ಹೆಚ್ಚುವರಿ ಪಾವತಿ ಇಲ್ಲದೆ ವೊಡಾಫೋನ್ ಐಡಿಯಾ ಅಪ್ಲಿಕೇಶನ್ ಸಹಾಯದಿಂದ ಎರಡು ಬಾರಿ 2GB ವರೆಗೆ ಡೇಟಾವನ್ನು ಬಳಸಬಹುದು.

ವೊಡಾಫೋನ್ ಐಡಿಯಾದ ರೂ. 365 ಯೋಜನೆಯಲ್ಲಿ, ನಿಮಗೆ 28 ​​ದಿನಗಳ ಮಾನ್ಯತೆಯನ್ನು ನೀಡಲಾಗಿದೆ. ನೀವು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಉಚಿತ ಕರೆ ಮಾಡಬಹುದು. ಇದಲ್ಲದೆ, ಸಂಪೂರ್ಣ ಮಾನ್ಯತೆಯಲ್ಲಿ ನೀವು ಒಟ್ಟು 56GB ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ. ಅಂದರೆ ನೀವು ಪ್ರತಿದಿನ 2GB ಡೇಟಾವನ್ನು ಬಳಸಲು ಅವಕಾಶ ನೀಡಲಾಗಿದೆ.

ವರದಿ: ವಿನಯ್ ಭಟ್ 

Whats_app_banner