Bottle Cleaning Tips: ಎಷ್ಟೇ ತೊಳೆದರೂ ನೀರಿನ ಬಾಟಲ್ ವಾಸನೆಯಿಂದ ಕೂಡಿದ್ಯಾ..ಹಾಗಿದ್ರೆ ಒಮ್ಮೆ ಈ ರೀತಿ ಸ್ವಚ್ಛಗೊಳಿಸಿ ನೋಡಿ
ವಿನೆಗರ್‌ನೊಂದಿಗೆ ಕೂಡಾ ಬಾಟಲಿಯನ್ನು ಸ್ವಚ್ಛಗೊಳಿಸಬಹುದು. ಬಾಟಲಿಗೆ ಸ್ವಲ್ಪ ವಿನೆಗರ್ ಸೇರಿಸಿ, ಅದಕ್ಕೆ ಬಿಸಿ ನೀರು ಸೇರಿಸಿ ಬಾಟಲ್ ಅಲುಗಾಡಿಸಿ. ರಾತ್ರಿಯಿಡೀ ಬಾಟಲಿಯನ್ನು ಹಾಗೇ ಬಿಡಿ. ಬೆಳಗ್ಗೆ ಎದ್ದ ನಂತರ ಬಾಟಲಿಯನ್ನು ಒಮ್ಮೆ ಅಲ್ಲಾಡಿಸಿ. ಶುದ್ಧ ನೀರಿನಿಂದ ತೊಳೆದು ನೀರು ಸೋರಲು ಇಡಿ.
ಮಕ್ಕಳ ಸ್ಕೂಲ್‌ಗಾಗಲೀ, ಹಿರಿಯರು ಹೊರಗೆ ಹೋಗುವುದಾಗಲೀ ಬ್ಯಾಗ್‌ನಲ್ಲಿ ಏನಿಲ್ಲವೆಂದರೂ ಒಂದು ಬಾಟಲ್ ನೀರು ಇರಬೇಕು. ಅದರಲ್ಲೂ ಬೇಸಿಗೆ ಸಮಯದಲ್ಲಂತೂ ತಪ್ಪದೆ ಬಾಟಲ್‌ನಲ್ಲಿ ನೀರು ಕೊಂಡೊಯ್ಯುತ್ತೇವೆ. ದಾಹವಾದಾಗ ಹೊರಗೆ ಕುಡಿಯಲು ನೀರು ದೊರೆಯದಿರಬಹುದು ಅಥವಾ ದೊರೆಯವ ನೀರು ಶುದ್ಧವಾಗಿಲ್ಲದಿರಬಹುದು.
ಆದರೆ ಮನೆಗೆ ವಾಪಸಾದಾಗ ಹಲವರು ನೀರಿನ ಬಾಟಲಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಅದರಲ್ಲೂ ಬಾಟಲಿಯ ಬಾಯಿ ಚಿಕ್ಕದಾಗಿದ್ದರೆ ಒಳಗೆ ಸರಿಯಾಗಿ ಸ್ವಚ್ಛ ಮಾಡಲು ಆಗುವುದಿಲ್ಲ. ಕೆಲವರಂತೂ ತಿಂಗಳುಗಟ್ಟಲೆ ಅದೇ ಬಾಟಲಿಯಲ್ಲಿ ನೀರು ತುಂಬಿಸಿ ಸೇವಿಸುತ್ತಾರೆ. ನೀರಿನ ಬಾಟಲಿಯನ್ನು ಸರಿಯಾಗಿ ಶುಚಿಗೊಳಿಸದಿದ್ದರೆ ಅದರೊಳಗೆ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿದೆ. ನೀವೂ ಕೂಡಾ ಬಾಟಲಿ ನೀರನ್ನು ಒಯ್ಯುತ್ತಿದ್ದರೆ, ಪ್ರತಿದಿನ ಸಾಧ್ಯವಾಗದಿದ್ದರೆ ಕನಿಷ್ಠ ಮೂರು ದಿನಗಳಿಗೊಮ್ಮೆಯಾದರೂ ಬಾಟಲ್ ಕ್ಲೀನ್ ಮಾಡಿ. ಕೆಲವೊಮ್ಮೆ ಆಗ್ಗಾಗ್ಗೆ ಬಾಟಲ್ ಸ್ವಚ್ಛಗೊಳಿಸಿದರೂ ಅದರಿಂದ ವಾಸನೆ ಬರುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಇಲ್ಲಿ ಕೆಲವೊಂದು ಪರಿಹಾರಗಳಿವೆ.
ಬಿಸಿ ನೀರು ಹಾಗೂ ಸಾಬೂನು
ಪ್ರತಿದಿನ ಬಳಸುವ ಬಾಟಲಿಯನ್ನು ಸಾಬೂನು ಹಾಗೂ ಬಿಸಿ ನೀರಿನಿಂದ ಸ್ವಚ್ಛಗೊಳಿಸಿ. ನಿಮ್ಮ ನೀರಿನ ಬಾಟಲಿಯನ್ನು ಬಿಸಿ ನೀರಿನಿಂದ ತುಂಬಿಸಿ ಮತ್ತು ಅದಕ್ಕೆ ಸೋಪ್ ಸೇರಿಸಿ. ನಂತರ ಅದನ್ನು ಅಲುಗಾಡಿಸಿ 15 ನಿಮಿಷಗಳ ಕಾಲ ಬಿಡಿ. ನಂತರ ಬಾಟಲಿಯಿಂದ ನೀರನ್ನು ಹೊರಗೆ ಚೆಲ್ಲಿ ಬ್ರಷ್‌ನಿಂದ ಒಳಭಾಗವನ್ನು ಸ್ವಚ್ಛಗೊಳಿಸಿ. ಮತ್ತೊಮ್ಮೆ ಶುದ್ಧವಾದ ನೀರಿನಿಂದ ಸ್ವಚ್ಚಗೊಳಿಸಿ. 4-5 ಬಾರಿ ತೊಳೆದ ನಂತರ ಒಂದು ಕಡೆ ಬಾಟಲಿಯನ್ನು ಬೋರಲಾಗಿ ಇಡಿ. ಹೀಗೆ ಮಾಡುವುದರಿಂದ ಬಾಟಲಿಯಿಂದ ಬರುವ ವಾಸನೆಯೂ ತಪ್ಪುತ್ತದೆ, ಬ್ಯಾಕ್ಟೀರಿಯಾಗಳು ಕೂಡಾ ನಾಶವಾಗುತ್ತದೆ. ಒಂದು ವೇಳೆ ನೀವು ಪ್ಲಾಸ್ಟಿಕ್ ಬಾಟಲ್ ಬಳಸುತ್ತಿದ್ದರೆ ಬೆಚ್ಚನೆ ನೀರು ಬಳಸಿ. ಆದರೆ ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲಿಯನ್ನು ದೀರ್ಘ ಕಾಲ ಬಳಸುವುದು ಒಳ್ಳಯದಲ್ಲ.
ವಿನೆಗರ್ ಹಾಗೂ ಬಿಸಿನೀರು
ನೀವು ವಿನೆಗರ್‌ನೊಂದಿಗೆ ಕೂಡಾ ಬಾಟಲಿಯನ್ನು ಸ್ವಚ್ಛಗೊಳಿಸಬಹುದು. ಬಾಟಲಿಗೆ ಸ್ವಲ್ಪ ವಿನೆಗರ್ ಸೇರಿಸಿ, ಅದಕ್ಕೆ ಬಿಸಿ ನೀರು ಸೇರಿಸಿ ಬಾಟಲ್ ಅಲುಗಾಡಿಸಿ. ರಾತ್ರಿಯಿಡೀ ಬಾಟಲಿಯನ್ನು ಹಾಗೇ ಬಿಡಿ. ಬೆಳಗ್ಗೆ ಎದ್ದ ನಂತರ ಬಾಟಲಿಯನ್ನು ಒಮ್ಮೆ ಅಲ್ಲಾಡಿಸಿ. ಶುದ್ಧ ನೀರಿನಿಂದ ತೊಳೆದು ನೀರು ಸೋರಲು ಇಡಿ.
ಅಡಿಗೆ ಸೋಡಾ ಹಾಗೂ ಬಿಸಿ ನೀರು
ಅಡಿಗೆ ಸೋಡಾ ಬಾಟಲಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಬಾಟಲಿಗೆ ಎರಡು ಚಮಚ ಅಡಿಗೆ ಸೋಡಾ ಸೇರಿಸಿ ಮತ್ತು ಕುದಿಯುವ ನೀರನ್ನು ಸುರಿಯಿರಿ. ಈಗ ಬಾಟಲಿಯನ್ನು ಮುಚ್ಚಳ ಮತ್ತು ಅಲ್ಲಾಡಿಸಿ. ನಂತರ ಮುಚ್ಚಳ ತೆಗೆದು ಸ್ವಲ್ಪ ಸಮಯ ಬಿಡಿ. ನಂತರ ಬಾಟಲ್‌ನಿಂದ ನೀರು ತೆಗೆದು ಶುದ್ಧ ನೀರಿನಿಂದ 3-4 ಬಾರಿ ತೊಳೆದು ನೀರು ಸೋರಿಸಿ.
ಬಾಟಲ್ ಸುತ್ತಲಿನ ರಿಂಗ್‌ನಲ್ಲಿ ಕೊಳೆ ಸಂಗ್ರಹವಾಗಿರುತ್ತದೆ ಆದ್ದರಿಂದ ರಿಂಗನ್ನು ಬ್ರಷ್‌ನಿಂದ ಸ್ವಚ್ಛಗೊಳಿಸಿ. ಎಲ್ಲಕ್ಕಿಂತ ಮುಖ್ಯವಾಗಿ ಬಾಟಲ್ ಕ್ಯಾಪ್‌ನಲ್ಲಿ ಹೆಚ್ಚಿನ ಕೊಳೆ ಇರುತ್ತದೆ. ಅದಕ್ಕೆಂದೇ ಒಂದು ಪುಟ್ಟ ಟೂತ್ ಬ್ರಷನ್ನು ಪ್ರತ್ಯೇಕವಾಗಿ ತೆಗೆದಿಟ್ಟು ಕೊಳೆ ಸಂಗ್ರಹವಾಗದಂತೆ ನೀಟಾಗಿ ಉಜ್ಜಿ ಕ್ಲೀನ್ ಮಾಡಿ.
ವಿಭಾಗ