ಹಸಿರು ಬಣ್ಣದ ಗೌನ್‌ನಲ್ಲಿ ಫ್ಯಾಷನ್ ಐಕಾನ್‌ನಂತೆ ಕಂಡ ಪಿವಿ ಸಿಂಧು, ಹೀಗಿತ್ತು ಬ್ಯಾಡ್ಮಿಂಟನ್ ತಾರೆಯ ಸಂಗೀತ ಕಾರ್ಯಕ್ರಮದ ಲುಕ್
ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತಾವು ಪ್ರೀತಿಸಿದ ಹುಡುಗನ ಜತೆ ಹಸೆಮಣೆ ಏರಿದ್ದಾರೆ. ಅವರ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿವೆ. ಸಂಗೀತ ಕಾರ್ಯಕ್ರಮದಲ್ಲಿ ಹಸಿರು ಬಣ್ಣದ ಗೌನ್ ತೊಟ್ಟಿದ ಪಿವಿ ಸಿಂಧು ಫ್ಯಾಷನ್ ಐಕಾನ್‌ನಂತೆ ಮಿಂಚಿದ್ದಾರೆ. ತಮ್ಮ ಒಲವಿನ ಗೆಳೆಯ ವೆಂಕಟ ದತ್ತ ಸಾಯಿ ಜೊತೆಗಿನ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಜನಪ್ರಿಯ ಬಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ತಮ್ಮ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಿ ಪ್ರಿಯಕರ ವೆಂಕಟ ದತ್ತ ಸಾಯಿ ಅವರನ್ನು ವರಿಸಿದ್ದಾರೆ. ಇದೀಗ ಎಲ್ಲಿ ನೋಡಿದರೂ ಪಿವಿ ಸಿಂಧು ಅವರ ಮದುವೆಗೆ ಸಂಬಂಧಿಸಿದ ಪೋಟೊಗಳೇ ಕಾಣ ಸಿಗುತ್ತಿವೆ. ಅದರಲ್ಲೂ ಪಿವಿ ಸಿಂಧು ಸಂಗೀತ ಕಾರ್ಯಕ್ರಮದ ಫೋಟೊಗಳು ಸಖತ್ ವೈರಲ್ ಆಗುತ್ತಿವೆ. ಹಸಿರು ಬಣ್ಣದ ಗೌನ್ ತೊಟ್ಟ ಸಿಂಧು ಯಾವುದೇ ಫ್ಯಾಷನ್ ಐಕಾನ್‌ಗೆ ಕಡಿಮೆಯಿಲ್ಲ ಎಂಬಂತೆ ಮಿಂಚಿದ್ದಾರೆ.
ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸ ಮಾಡಿರುವ ಗೌನ್ ಇದಾಗಿದೆ. ಈ ಬ್ಯಾಕ್‌ಲೆಸ್ ಗೌನ್‌ನಲ್ಲಿ ಸಿಂಧು ತುಂಬಾ ಮುದ್ದಾಗಿ ಮಾತ್ರವಲ್ಲ, ಸಖತ್ ಸ್ಟೈಲಿಶ್ ಆಗಿಯೂ ಕಾಣುತ್ತಿದ್ದಾರೆ. ವೆಂಕಟ ದತ್ತ ಸಾಯಿ ಜೊತೆಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಸಿಂಧು. ಈ ಜೋಡಿಯ ಫೋಟೊಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಪಚ್ಚೆ ಹಸಿರು ಬಣ್ಣದ ಈ ಗೌನ್ ಅನ್ನು ಬಹಳ ವಿಶೇಷವಾಗಿ ವಿನ್ಯಾಸ ಮಾಡಿದ್ದಾರೆ ವಿನ್ಯಾಸಕಾರರು. ಈ ಉಡುಪು ಸಿಂಧು ಅವರ ಬಾಡಿ ಶೇಪ್‌ಗೆ ಹೇಳಿ ಮಾಡಿಸಿದಂತಿದೆ. ಬ್ಯಾಕ್‌ಲೆಸ್ ಡಿಸೈನ್ ಇಂದಿನ ಫ್ಯಾಷನ್ ಟ್ರೆಂಡ್‌ಗೆ ಹೇಳಿ ಮಾಡಿಸಿದಂತಿದೆ. ಈ ಗೌನ್ ಧರಿಸಿ ಡಾನ್ಸ್ ಮಾಡಿದ್ದ ಸಿಂಧು ಎಲ್ಲರ ಗಮನ ಸೆಳೆದಿದ್ದರು.
ಎಮರಾಲ್ಡ್ ಹರಳುಗಳ ಕಿವಿಯೋಲೆ, ಬ್ರಾಸ್‌ಲೈಟ್ ಈ ಗೌನ್‌ನ ಅಂದವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ಡ್ರೆಸ್ ಜೊತೆ ತಮ್ಮ ಕೂದಲಿಗೆ ಪೋನಿಟೇಲ್ ಹಾಕಿಕೊಂಡಿದ್ದರು ಸಿಂಧು. ಇದರೊಂದಿಗೆ ನ್ಯೂಡ್ ಮೇಕಪ್ ಮಾಡಿದ್ದು ಇವರ ಅಂದ ಬೆಳಕಿನ ಕಿರಣಗಳೊಂದಿಗೆ ಪೈಪೋಟಿ ನಡೆಸಿತ್ತು.
ಪವರ್ ಜೋಡಿ ಸ್ಟೈಲ್ ಹೀಗಿತ್ತು
ಸಿಂಧು ಜೊತೆ ತಾನು ಏನು ಕಡಿಮೆಯಿಲ್ಲ ಎನ್ನುವಂತೆ ಸ್ಟೈಲಿಶ್ ಆಗಿ ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚಿದ್ದರು ವೆಂಕಟ ದತ್ತ ಸಾಯಿ. ಅವರು ಕ್ಲಾಸಿಕ್ ನೀಲಿ ಡ್ರೆಸ್‌ನ ಮೇಲೆ ಜರಿ ಚಿತ್ತಾರದ ಕೋಟ್ ಧರಿಸಿದ್ದರು. ಈ ಬಹುವರ್ಣದ ಬ್ಲಿಂಗ್ ಜಾಕೆಟ್ ವೆಂಕಟ ದತ್ತ ಅವರಿಗೆ ಹೇಳಿ ಮಾಡಿಸಿದಂತಿತ್ತು. ಈ ಇಬ್ಬರೂ ಮಾರ್ಡನ್ ಸ್ಟೈಲ್‌ನಲ್ಲಿ ತಮ್ಮ ಸಂಗೀತ ಕಾರ್ಯಕ್ರಮಕ್ಕೆ ಅಲಂಕಾರ ಮಾಡಿಕೊಂಡಿದ್ದರು.
ಅವರ ಸಂಗೀತ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನೆರವೇರಿತು. ಅಲ್ಲಿ ಡಾನ್ಸ್, ಹಾಡು, ನಗು, ಸಂಭ್ರಮ ಎಲ್ಲವೂ ಇತ್ತು. ಪಿವಿ ಸಿಂಧು ಕೂಡ ಆಕರ್ಷಕವಾಗಿ ಡಾನ್ಸ್ ಮಾಡುತ್ತಾ ಹೆಜ್ಜೆ ಹಾಕಿ ಗಮನ ಸೆಳೆಯುವ ಜೊತೆಗೆ, ತಾವು ಆಟಕಷ್ಟೇ ಅಲ್ಲ, ಸ್ಟೈಲ್‌ಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಪಿವಿ ಸಿಂಧು ಹಾಗೂ ವೆಂಕಟ ದತ್ತ ಸಾಯಿ ಇಬ್ಬರು ಸಂಗೀತ ಕಾರ್ಯಕ್ರಮದಲ್ಲಿ ಫ್ಯಾಷನ್ ಐಕಾನ್‌ಗಳಂತೆ ಕಂಡಿದ್ದು ಸುಳ್ಳಲ್ಲ. ಪಿವಿ ಸಿಂಧು ತಮ್ಮ ಸಂಗೀತ ಸಮಾರಂಭದ ಉಡುಗೆಯೊಂದಿಗೆ ಮದುವೆಯ ಫ್ಯಾಷನ್‌ಗೆ ಹೊಸ ಮಾನದಂಡವನ್ನು ರೂಪಿಸಿದ್ದಾರೆ ಎನ್ನಬಹುದು. ಸಂಪ್ರದಾಯ ಮತ್ತು ಆಧುನಿಕತೆಯನ್ನು ಒಟ್ಟುಗೂಡಿಸಿದ ಅವರ ಈ ನೋಟವು ಆಧುನಿಕ ವಧುಗಳಿಗೆ ಸ್ಫೂರ್ತಿಯಾಗಿದೆ.
ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ಈಗ ಎಲ್ಲಿ ನೋಡಿದರೂ ಪಿವಿ ಸಿಂಧು ಹಾಗೂ ವೆಂಕಟ ದತ್ತ ಸಾಯಿಯವರ ಮದುವೆ ಫೋಟೊಗಳೇ ಕಣ್ಣಿಗೆ ಬೀಳುತ್ತಿವೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡುವುದು ಸುಳ್ಳಲ್ಲ.
ಕ್ರೀಡಾಪಟುವಾಗಿದ್ದರೂ ಯಾವುದೇ ಸಿನಿಮಾ ಸೆಲೆಬ್ರಿಟಿಗೂ ಕಡಿಮೆ ಇಲ್ಲದಂತೆ ಅಂದವಾಗಿ ಅಲಂಕರಿಸಿಕೊಂಡು ಸಂಪ್ರದಾಯಿಕ ಹಾಗೂ ಪಾಶ್ಚಿಮಾತ್ಯ ಎರಡೂ ರೀತಿಯ ಉಡುಪುಗಳಲ್ಲಿ ಗಮನ ಸೆಳೆದಿದ್ದಾರೆ ಬ್ಯಾಡ್ಮಿಂಟನ್ ತಾರೆ.
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.