Weight Loss: ಜೇನುತುಪ್ಪದಿಂದ ದಾಲ್ಚಿನ್ನಿಯವರೆಗೆ: ತೂಕ ಇಳಿಕೆಗೆ ಈ ಆಯುರ್ವೇದ ಆಹಾರ ಬೆಸ್ಟ್-weight loss ayurvedic weight loss tips weight loss for ayurvedic foods prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ಜೇನುತುಪ್ಪದಿಂದ ದಾಲ್ಚಿನ್ನಿಯವರೆಗೆ: ತೂಕ ಇಳಿಕೆಗೆ ಈ ಆಯುರ್ವೇದ ಆಹಾರ ಬೆಸ್ಟ್

Weight Loss: ಜೇನುತುಪ್ಪದಿಂದ ದಾಲ್ಚಿನ್ನಿಯವರೆಗೆ: ತೂಕ ಇಳಿಕೆಗೆ ಈ ಆಯುರ್ವೇದ ಆಹಾರ ಬೆಸ್ಟ್

ತೂಕ ಇಳಿಕೆಗೆ ಆಹಾರ ಪದ್ಧತಿಯಲ್ಲಿ ಬದಲಾವಣೆ, ಬೆವರು ಹರಿಸಿದ್ರೂ ಯಾವುದೇ ವ್ಯತ್ಯಾಸವಾಗುತ್ತಿಲ್ವಾ? ತೂಕ ಇಳಿಕೆ ಗುರಿಯನ್ನು ತಲುಪಲು ನೀವು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದೀರಾ?ಹಾಗಿದ್ದರೆ ಈ ಆಯುರ್ವೇದ ಆಹಾರಗಳನ್ನು ಸೇವಿಸಿ ಫಲಿತಾಂಶ ಪಡೆಯಿರಿ.

ತೂಕ ಇಳಿಕೆ ಗುರಿಯನ್ನು ತಲುಪಲು ನೀವು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದರೆ ಈ ಆಯುರ್ವೇದ ಆಹಾರಗಳನ್ನು ಸೇವಿಸಿ
ತೂಕ ಇಳಿಕೆ ಗುರಿಯನ್ನು ತಲುಪಲು ನೀವು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದರೆ ಈ ಆಯುರ್ವೇದ ಆಹಾರಗಳನ್ನು ಸೇವಿಸಿ (shutterstock)

ಇಂದು ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ಇದಕ್ಕಾಗಿ ದೇಹವನ್ನು ಫಿಟ್ ಆಗಿರಿಸಲು ಡಯೆಟ್ ಮಾಡುವುದು, ಜಿಮ್‍ನಲ್ಲಿ ಬೆವರು ಹರಿಸುವುದು ಇತ್ಯಾದಿಗಳನ್ನು ಪ್ರಯತ್ನಿಸುತ್ತಾರೆ. ಆದರೂ ತೂಕ ಇಳಿಕೆ ಆಗುತ್ತಿಲ್ಲ ಎಂದು ಬೇಸರ ಹೊರಹಾಕುತ್ತಾರೆ. ನೀವು ಕೂಡ ತೂಕ ಇಳಿಕೆಗೆ ಹೆಣಗಾಡುತ್ತಿದ್ದೀರಾ? ಆಹಾರಕ್ರಮ, ಕಠಿಣ ತಾಲೀಮು ಯೋಜನೆ, ತೂಕವನ್ನು ಕಳೆದುಕೊಳ್ಳಲು ಪೂರಕಗಳನ್ನು ಅನುಸರಿಸುತ್ತಾರೆ. ಈ ವಿಧಾನಗಳು ಸಾಮಾನ್ಯವಾಗಿ ಶಾಶ್ವತ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುವುದಿಲ್ಲ. ತೂಕ ನಿರ್ವಹಣೆಗೆ ಆಯುರ್ವೇದವು ಉತ್ತಮ ಪರಿಹಾರವಾಗಿದೆ. ತೂಕ ನಷ್ಟ ಗುರಿಗಳನ್ನು ತಲುಪಲು ಹೆಚ್ಚು ಪರಿಣಾಮಕಾರಿ ಮಾರ್ಗವನ್ನು ನೀವು ಹುಡುಕುತ್ತಿದ್ದರೆ, ಈ ಆಯುರ್ವೇದವನ್ನು ನೀವು ಟ್ರೈ ಮಾಡಬಹುದು. ತೂಕ ಇಳಿಕೆಗೆ ಪ್ರಯತ್ನಿಸುವವರು ಈ ಏಳು ಆಯುರ್ವೇದ ಆಹಾರಗಳನ್ನು ಸೇವಿಸಬಹುದು.

ತೂಕ ಇಳಿಕೆಗೆ ಇವು ಸಹಕಾರಿ

ಜೇನುತುಪ್ಪ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಸ್ವಲ್ಪ ಜೇನುತುಪ್ಪ ಹಾಕಿ ಸೇವಿಸುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹಾಗೆಯೇ ಅನಾರೋಗ್ಯಕರ ತಿಂಡಿಗಳ (ಫಾಸ್ಟ್ ಫುಡ್, ಬೇಕರಿ ತಿಂಡಿ ಇತ್ಯಾದಿ) ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ.

ನೆಲ್ಲಿಕಾಯಿ: ಇದು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಹೆಚ್ಚು ಪರಿಗಣಿಸಲಾಗಿದೆ. ಇದು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದ್ದು, ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ. ನೆಲ್ಲಿಕಾಯಿಯಲ್ಲಿ ನಾರಿನಂಶವಿರುವುದರಿಂದ ಸರಿಯಾದ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಅರಿಶಿನ: ಅರಿಶಿನದಲ್ಲಿನ ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ಶುಂಠಿ: ಆಯುರ್ವೇದದಲ್ಲಿ ಜೀರ್ಣಕಾರಿ ಮತ್ತು ಕೊಬ್ಬನ್ನು ಬರ್ನ್ ಮಾಡುವಲ್ಲಿ ಶುಂಠಿಯ ಪಾತ್ರ ಮಹತ್ವದ್ದು. ಇದೊಂದು ಬಹಳ ಅಮೂಲ್ಯ ಮಸಾಲೆಯಾಗಿದ್ದು, ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.

ಜೀರಿಗೆ: ಆಯುರ್ವೇದ ಪಾಕಪದ್ಧತಿಯಲ್ಲಿ ಜೀರಿಗೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಜೀರ್ಣಕಾರಿ ಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡಲು ಸಹಕಾರಿಯಾಗಿದೆ. ಆಹಾರದ ಸರಿಯಾದ ವಿಭಜನೆಗೆ ಸಹಾಯ ಮಾಡುತ್ತದೆ. ಇದು ದೇಹದಿಂದ ಟಾಕ್ಸಿನ್ ಹೊಕಹಾಕಲು ಮತ್ತು ಚಯಾಪಚಯ ಕ್ರಿಯೆ ಸುಧಾರಿಸಲು ಸಹಕಾರಿಯಾಗಿದೆ.

ಸೋಂಪು ಕಾಳು: ಸೋಂಪು ಕಾಳು ಜೀರ್ಣಕಾರಿ ಕ್ರಿಯೆ ಸುಧಾರಿಸಲು ಮತ್ತು ಟಾಕ್ಸಿನ್ ಹೊರಹಾಕಲು ಸಹಕಾರಿಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.

ಗ್ರೀನ್ ಟೀ: ಗ್ರೀನ್ ಟೀ (Green Tea) ಯು ಅದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ದಾಲ್ಚಿನ್ನಿ: ದಾಲ್ಚಿನ್ನಿಯು ಸುವಾಸನೆಯನ್ನು ಹೊಂದಿರುವ ಮಸಾಲೆ ಮಾತ್ರವಲ್ಲದೆ ತೂಕ ನಷ್ಟವನ್ನು ಬೆಂಬಲಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು, ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

mysore-dasara_Entry_Point