Belly fat: ಹೊಟ್ಟೆಯ ಬೊಜ್ಜು ಹೇಗೆ ಕರಗಿಸುವುದು ಅನ್ನೋ ಯೋಚನೆನಾ: ಈ ಐದು ತರಕಾರಿಗಳನ್ನು ಸೇವಿಸಿ ಚಿಂತೆ ದೂರ ಮಾಡಿ-weight loss belly fat vegetables helps in reducing belly fat how to lose belly fat diet plan to reduce belly fat rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Belly Fat: ಹೊಟ್ಟೆಯ ಬೊಜ್ಜು ಹೇಗೆ ಕರಗಿಸುವುದು ಅನ್ನೋ ಯೋಚನೆನಾ: ಈ ಐದು ತರಕಾರಿಗಳನ್ನು ಸೇವಿಸಿ ಚಿಂತೆ ದೂರ ಮಾಡಿ

Belly fat: ಹೊಟ್ಟೆಯ ಬೊಜ್ಜು ಹೇಗೆ ಕರಗಿಸುವುದು ಅನ್ನೋ ಯೋಚನೆನಾ: ಈ ಐದು ತರಕಾರಿಗಳನ್ನು ಸೇವಿಸಿ ಚಿಂತೆ ದೂರ ಮಾಡಿ

ಹೊಟ್ಟೆ ಬೊಜ್ಜು ಕರಗಿಸುವ ಆಸೆ ಯಾರಿಗೆ ಇರುವುದಿಲ್ಲ? ಆದರೆ, ಆಸೆಪಟ್ಟಷ್ಟು ಸುಲಭದಲ್ಲಿ ಹೊಟ್ಟೆ ಬೊಜ್ಜನ್ನು ಕರಗಿಸಲು ಸಾಧ್ಯವಿಲ್ಲ. ಆದರೆ ಈ ಐದು ತರಕಾರಿಗಳ ಸೇವನೆಯು ನಿಮ್ಮ ಹೊಟ್ಟೆ ಬೊಜ್ಜು ಕರಗಿಸುವ ಪ್ರಯಾಣವನ್ನು ಇನ್ನಷ್ಟು ಸರಾಗಗೊಳಿಸಬಲ್ಲದು. ಈ ಬಗ್ಗೆ ಇಲ್ಲಿದೆ ಮಾಹಿತಿ.

ಈ ಐದು ತರಕಾರಿಗಳ ಸೇವನೆಯು ಹೊಟ್ಟೆ ಬೊಜ್ಜು ಕರಗಿಸುವ ಪ್ರಯಾಣವನ್ನು ಇನ್ನಷ್ಟು ಸರಾಗಗೊಳಿಸಬಲ್ಲದು.
ಈ ಐದು ತರಕಾರಿಗಳ ಸೇವನೆಯು ಹೊಟ್ಟೆ ಬೊಜ್ಜು ಕರಗಿಸುವ ಪ್ರಯಾಣವನ್ನು ಇನ್ನಷ್ಟು ಸರಾಗಗೊಳಿಸಬಲ್ಲದು.

ಬಳಕುವ ಬಳ್ಳಿಯಂಥಾ ದೇಹವನ್ನು ಹೊಂದುವುದು ಕೆಲವರಿಗೆ ದೇವರು ಕೊಟ್ಟ ವರವಾದರೆ ಇನ್ನೂ ಕೆಲವರು ಸಾಕಷ್ಟು ಕಷ್ಟಪಟ್ಟು ದೇಹವನ್ನು ದಂಡಿಸಿ, ಆಹಾರ ಕ್ರಮದಲ್ಲಿ ಶಿಸ್ತನ್ನು ಕಾಪಾಡಿಕೊಂಡು ಇದನ್ನು ಪಾಲಿಸಬೇಕಾಗುತ್ತದೆ. ಕೇವಲ ತೂಕ ಇಳಿಕೆ ಮಾತ್ರವಲ್ಲ ಉತ್ತಮ ಆರೋಗ್ಯದ ದೃಷ್ಟಿಯಿಂದಲೂ ವ್ಯಾಯಾಮ ಹಾಗೂ ಉತ್ತಮ ಜೀವನಶೈಲಿಯು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಕೆಲವು ತರಕಾರಿಗಳು ನಿಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತವೆ. ಇವುಗಳಲ್ಲಿ ಇರುವ ಪೋಷಕಾಂಶಗಳು ಹಾಗೂ ಕಡಿಮೆ ಕ್ಯಾಲೋರಿಗಳು ನಿರ್ದಿಷ್ಟವಾಗಿ ನಿಮ್ಮ ಹೊಟ್ಟೆಯ ಭಾಗದಲ್ಲಿರುವ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ನೀವು ಆರೋಗ್ಯಕರ ಮೈಕಟ್ಟನ್ನು ಹೊಂದಬಹುದಾಗಿದೆ. ಈ ರೀತಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿರುವ ತರಕಾರಿಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ:

ಪಾಲಕ್ ಸೊಪ್ಪು: ಇದು ಪೌಷ್ಠಿಕಾಂಶದ ಅತ್ಯುತ್ತಮ ಶಕ್ತಿ ಕೇಂದ್ರವಾಗಿದೆ. ಹೊಟ್ಟೆಯ ಕೊಬ್ಬು ಕರಗಿಸುವ ಪ್ರಯತ್ನದಲ್ಲಿ ಇರುವವರು ನಿಮ್ಮ ಆಹಾರ ಕ್ರಮದಲ್ಲಿ ಪಾಲಾಕ್ ಸೊಪ್ಪಿಗೆ ಅಗ್ರಗಣ್ಯ ಸ್ಥಾನ ನೀಡಬೇಕು. ಇವುಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು, ಫೈಬರ್ ಅಂಶವನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುತ್ತವೆ. ಇದರಿಂದ ನಿಮಗೆ ಹೆಚ್ಚಿನ ಸಮಯದವರೆಗೆ ಹೊಟ್ಟೆ ತುಂಬಿದಂಥ ಅನುಭವ ಇರುತ್ತದೆ. ಇದರಿಂದ ನಿಮಗೆ ಪದೇ ಪದೇ ತಿನ್ನಬೇಕೆಂಬ ಬಯಕೆ ಉಂಟಾಗುವುದಿಲ್ಲ. ಪಾಲಾಕ್ ಸೊಪ್ಪಿನಲ್ಲಿ ಮೆಗ್ನಿಷಿಯಂ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಪಾಲಾಕ್ ಸೊಪ್ಪಿಗೆ ಇನ್ಸುಲಿನ್ ಮಟ್ಟ ನಿಯಂತ್ರಣಕ್ಕೆ ತರುವ ಶಕ್ತಿ ಇರುವುದರಿಂದ ಕಿಬ್ಬೊಟ್ಟೆಯ ಸುತ್ತ ಕೊಬ್ಬು ಶೇಖರಣೆ ಆಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಬ್ರೊಕೊಲಿ: ಹೊಟ್ಟೆಯ ಕೊಬ್ಬು ಕರಗಿಸುವ ಪ್ರಯತ್ನದಲ್ಲಿರುವವರಿಗೆ ಮತ್ತೊಂದು ಹೇಳಿ ಮಾಡಿಸಿದಂತಹ ತರಕಾರಿ ಎಂದರೆ ಅದು ಬ್ರೊಕೊಲಿ. ಇದರಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಹಾಗೂ ಫೈಬರ್ ಸಮೃದ್ಧವಾಗಿದೆ. ಬ್ರೊಕೊಲಿಯಲ್ಲಿರುವ ಅಗಾಧ ಪ್ರಮಾಣದ ಫೈಬರ್ ಅಂಶವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಇದರಿಂದ ತೂಕ ನಿರ್ವಹಣೆ ಕೂಡ ಸುಲಭವಾಗುತ್ತದೆ. ಅಲ್ಲದೆ ಬ್ರೊಕೊಲಿಯಲ್ಲಿರುವ ಸಲ್ಫೋರಾಫೆನ್ ಎಂಬ ಫೈಟೊಕೆಮಿಕಲ್‌ ಅಂಶವು ಕೊಬ್ಬು ಕರಗಿಸಲು ಸಹಕಾರಿಯಾಗಿದೆ.

ಹೂಕೋಸು: ತೂಕ ನಷ್ಟ ಹಾಗೂ ಹೊಟ್ಟೆಯ ಕೊಬ್ಬು ಕರಗಿಸುವವರ ಪಾಲಿಗೆ ಹೂಕೋಸನ್ನು ಸೂಪರ್ ಫುಡ್ ಎಂದು ವ್ಯಾಖ್ಯಾನಿಸಬಹುದಾಗಿದೆ. ಇವುಗಳು ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಹೊಂದಿದ್ದು, ಫೈಬರ್ ಅಂಶವನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುತ್ತದೆ. ಇದರಿಂದ ನಿಮಗೆ ಬಹುಬೇಗನೆ ಹಸಿವಿನ ಅನುಭವ ಆಗುವುದಿಲ್ಲ. ಇದರಿಂದ ತೂಕ ನಿರ್ವಹಣೆ ಸುಲಭವಾಗುತ್ತದೆ. ಇವುಗಳಲ್ಲಿ ಗ್ಲುಕೋಸಿನೊಲೇಟ್‌ಗಳೆಂಬ ಸಂಯುಕ್ತವಿದ್ದು, ಇವುಗಳು ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ.

ಮುಳ್ಳುಸೌತೆ: ಮುಳ್ಳುಸೌತೆಯು ರುಚಿಕರವಾದ ತರಕಾರಿ ಮಾತ್ರವಲ್ಲದೇ ಹೊಟ್ಟೆಯಲ್ಲಿ ಶೇಖರಣೆಗೊಂಡಿರುವ ಕೊಬ್ಬಿನ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು, ಫೈಬರ್ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ. ಇವುಗಳು ನೈಸರ್ಗಿಕ ಮೂತ್ರವರ್ಧಕಗಳಾಗಿವೆ. ಇದರಿಂದ ನಿಮ್ಮ ದೇಹದಲ್ಲಿ ಶೇಖರಣೆಗೊಳ್ಳುವ ಹೆಚ್ಚುವರಿ ನೀರನ್ನು ಹೊರಹಾಕಲು ಸಹಕರಿಸುತ್ತದೆ. ಕೊಬ್ಬನ್ನು ಕರಗಿಸುವ ಸಾಮರ್ಥ್ಯ ಹೊಂದಿರುವ ಈ ತರಕಾರಿಯು ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸೌತೆಕಾಯಿ: ಸೌತೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಕಡೆಗಣಿಸುವವರೇ ಜಾಸ್ತಿ. ಆದರೆ ನಮ್ಮ ದೇಹವನ್ನು ಹೈಡ್ರೇಟ್ ಆಗಿ ಇಡುವಂತಹ ಸಾಮರ್ಥ್ಯ ಹೊಂದಿರುವ ಈ ತರಕಾರಿಯು ಹೊಟ್ಟೆಯಲ್ಲಿ ಶೇಖರಣೆಗೊಂಡಿರುವ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೌತೆಕಾಯಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಇರುತ್ತದೆ. ದೇಹದಲ್ಲಿ ನೀರಿನ ಸಂಚಲನವನ್ನು ಹೆಚ್ಚಿಸುವ ಸೌತೆಕಾಯಿಯು, ದೇಹದಲ್ಲಿರುವ ಟಾಕ್ಸಿನ್ ಹೊರಹಾಕಲು ಸಹಾಯ ಮಾಡುತ್ತದೆ.

mysore-dasara_Entry_Point