Weight Loss: ತೂಕ ಇಳಿಕೆಗೆ ಬೆಳಗ್ಗಿನ ತಿಂಡಿಯಿಂದಲೇ ಆರಂಭಿಸಿ ದಿನಚರಿ: ಈ ಕಡಿಮೆ ಕ್ಯಾಲೊರಿ ಇರುವ ಉಪಹಾರಗಳು ಬೆಸ್ಟ್
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ತೂಕ ಇಳಿಕೆಗೆ ಬೆಳಗ್ಗಿನ ತಿಂಡಿಯಿಂದಲೇ ಆರಂಭಿಸಿ ದಿನಚರಿ: ಈ ಕಡಿಮೆ ಕ್ಯಾಲೊರಿ ಇರುವ ಉಪಹಾರಗಳು ಬೆಸ್ಟ್

Weight Loss: ತೂಕ ಇಳಿಕೆಗೆ ಬೆಳಗ್ಗಿನ ತಿಂಡಿಯಿಂದಲೇ ಆರಂಭಿಸಿ ದಿನಚರಿ: ಈ ಕಡಿಮೆ ಕ್ಯಾಲೊರಿ ಇರುವ ಉಪಹಾರಗಳು ಬೆಸ್ಟ್

ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಬೆಳಗ್ಗಿನ ದಿನಚರಿಯಿಂದಲೇ ಶುರು ಮಾಡುವುದು ಉತ್ತಮ. ಕಡಿಮೆ ಕ್ಯಾಲೋರಿ ಇರುವ ಉಪಹಾರವನ್ನು ಸೇವಿಸುವುದರಿಂದ ತೂಕ ನಿರ್ವಹಣೆ ಹಾಗೂ ದೇಹದ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ. ಐದು ರುಚಿಕರವಾದ ಮತ್ತು ಆರೋಗ್ಯಕರವಾದ ಉಪಹಾರ ಆಯ್ಕೆಗಳು ಇಲ್ಲಿವೆ.

ಐದು ರುಚಿಕರವಾದ ಮತ್ತು ಆರೋಗ್ಯಕರವಾದ ಉಪಹಾರ ಆಯ್ಕೆಗಳು ಇಲ್ಲಿವೆ.
ಐದು ರುಚಿಕರವಾದ ಮತ್ತು ಆರೋಗ್ಯಕರವಾದ ಉಪಹಾರ ಆಯ್ಕೆಗಳು ಇಲ್ಲಿವೆ.

ತೂಕ ಇಳಿಕೆ ಇಂದಿನ ದಿನಗಳಲ್ಲಿ ಹೆಚ್ಚು ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಅಧಿಕ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಿದರೆ ತೂಕ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ನಾಲಿಗೆಯ ರುಚಿಗಾಗಿ ಬಹುತೇಕ ಮಂದಿ ತಮಗಿಷ್ಟ ಬಂದಂತೆ ತಿನಿಸುಗಳನ್ನು ಸೇವಿಸುತ್ತಾರೆ. ಇದರಿಂದ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ತೂಕ ಹೆಚ್ಚಾಗುತ್ತಿದ್ದಂತೆ ತೂಕ ಇಳಿಕೆ ಹೇಗೆ ಎಂಬ ಬಗ್ಗೆ ಚಿಂತಿಸುತ್ತಾರೆ. ತೂಕ ಇಳಿಕೆ ಎಂದರೆ ಕಡಿಮೆ ಊಟ ಮಾಡುವುದಲ್ಲ. ಪೌಷ್ಟಿಕಾಂಶಭರಿತ ಆಹಾರ ಸೇವಿಸುವುದು ಮುಖ್ಯ. ಬೆಳಗ್ಗಿನ ಉಪಹಾರದಿಂದಲೇ ಕಡಿಮೆ ಕ್ಯಾಲೋರಿ ಇರುವ ಪೌಷ್ಟಿಕಾಂಶಭರಿತ ಆಹಾರ ಸೇವಿಸಬಹುದು. ತೂಕವನ್ನು ನಿರ್ವಹಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಉಪಹಾರದೊಂದಿಗೆ ದಿನವನ್ನು ಪ್ರಾರಂಭಿಸುವುದು ಅತ್ಯಗತ್ಯ. ಭಾರತೀಯ ಪಾಕಪದ್ಧತಿಯಲ್ಲಿ ಕಡಿಮೆ ಕ್ಯಾಲೋರಿ ಇರುವ ಉಪಹಾರಗಳು ಹಲವಾರಿವೆ. ಇವು ತಿನ್ನಲು ನಾಲಿಗೆಗೂ ರುಚಿ, ಆರೋಗ್ಯಕ್ಕೂ ಬಹಳ ಉಪಯುಕ್ತವಾಗಿವೆ. ತೂಕ ಇಳಿಕೆ ಪ್ರಯಾಣದಲ್ಲಿ ನೀವು ಸೇವಿಸಲೇಬೇಕಾದ ಉಪಹಾರಗಳು ಯಾವ್ಯಾವು ಇಲ್ಲಿದೆ ಮಾಹಿತಿ:

ತೂಕ ಇಳಿಕೆಗೆ ಸಹಕಾರಿಯಾಗಿರುವ ಉಪಹಾರಗಳು

ಅವಲಕ್ಕಿ: ಅವಲಕ್ಕಿ (Poha) ದಕ್ಷಿಣ ಭಾರತದ ಜನಪ್ರಿಯ ಉಪಹಾರವಾಗಿವೆ. ಕಡಿಮೆ ಕ್ಯಾಲೋರಿ ಇರುವ ಅವಲಕ್ಕಿಯು ಬೆಳಗ್ಗಿನ ತಿಂಡಿಗೆ ಬಹಳ ಉತ್ತಮ. ಇದನ್ನು ತಯಾರಿಸುವುದು ಕೂಡ ತುಂಬಾನೇ ಸಿಂಪಲ್. ಒಂದೆರಡು ಚಮಚ ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಾಣಲೆಗೆ ಹಾಕಿ, ಈರುಳ್ಳಿ, ಕರಿಬೇವುಸೊಪ್ಪು, ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಬೇಕು. ಪ್ರಿಯವಾದ ತರಕಾರಿಗಳನ್ನು ಸಹ ಸೇರಿಸಬಹುದು. ನಂತರ ಸ್ವಲ್ಪ ಕಾಲ ನೀರಿನಲ್ಲಿ ನೆನೆಸಿಟ್ಟ ಅವಲಕ್ಕಿಯನ್ನು ಸೇರಿಸಿ ಮಿಕ್ಸ್ ಮಾಡಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಕರವಾದ ಅವಲಕ್ಕಿ ಸವಿಯಲು ಸಿದ್ಧ.

ಇಡ್ಲಿ: ಇದೊಂದು ಆವಿಯಲ್ಲಿ ಬೇಯಿಸಿದ ಉಪಹಾರವಾಗಿದ್ದು, ದಕ್ಷಿಣ ಭಾರತದ ಪ್ರತಿ ಮನೆಗಳಲ್ಲೂ ತಯಾರಿಸಲಾಗುತ್ತದೆ. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ಹುದುಗಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇಡ್ಲಿಯು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಜೀರ್ಣಿಸಿಕೊಳ್ಳುವುದು ಸಹ ತುಂಬಾನೇ ಸುಲಭ. ಸಮತೋಲಿತ ಉಪಹಾರಕ್ಕಾಗಿ ಇಡ್ಲಿಯನ್ನು ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಬಹುದು.

ತರಕಾರಿ ಉಪ್ಪಿಟ್ಟು: ಇದು ದಕ್ಷಿಣ-ಭಾರತೀಯ ಜನಪ್ರಿಯ ಮತ್ತು ರುಚಿಕರ ಖಾದ್ಯಗಳಲ್ಲೊಂದಾಗಿದೆ. ಇದನ್ನು ತಯಾರಿಸುವುದು ಕೂಡ ತುಂಬಾನೇ ಸರಳ. ಬಾಣಲೆಗೆ ಒಂದೆರಡು ಚಮಚ ಆಲಿವ್ ಎಣ್ಣೆ ಹಾಕಿ ಬೆಳ್ಳುಳ್ಳಿ, ಸಾಸಿವೆ, ಕರಿಬೇವು ಸೊಪ್ಪು, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೊ ಹಾಕಿ ಫ್ರೈ ಮಾಡಬೇಕು. ಬೇಕಿದ್ದರೆ ತರಕಾರಿಗಳನ್ನು ಕೂಡ ಸೇರಿಸಬಹುದು ನಂತರ ನೀರು ಹಾಕಿ ಹುರಿದಿಟ್ಟ ರವಾ ಹಾಕಿ ಮಿಕ್ಸ್ ಮಾಡಿದರೆ ರುಚಿಕರವಾದ ತರಕಾರಿ ಉಪ್ಪಿಟ್ಟು ಸವಿಯಬಹುದು. ಇದು ಕಡಿಮೆ ಕ್ಯಾಲೊರಿಯನ್ನು ಹೊಂದಿದೆ.

ಹೆಸರು ಕಾಳು ಅಥವಾ ಹೆಸರು ಬೇಳೆಯ ಉಪಹಾರ: ಹೆಸರು ಕಾಳು ಉಪಹಾರವನ್ನು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಶುಭ ಕಾರ್ಯಕ್ರಮಗಳಲ್ಲಿ ಬೆಳಗ್ಗಿನ ತಿಂಡಿಯಲ್ಲಿ ಈ ಉಪಹಾರವನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಮೊಳಕೆ ಬಂದಿರುವ ಹೆಸರು ಕಾಳುವಾದ್ರೆ ಇನ್ನೂ ಒಳ್ಳೆಯದೆ. ಇದನ್ನು ನೀರು ಹಾಕಿ ಬೇಯಿಸಬೇಕು. ನಂತರ ತುರಿದ ತೆಂಗಿನಕಾಯಿ, ಒಗ್ಗರಣೆ (ಈರುಳ್ಳಿ ಫ್ರೈ ಮಾಡಬಹುದು) ಹಾಕಿದರೆ ಹೆಸರು ಕಾಳಿನ ಉಪಹಾರ ಸವಿಯಲು ಸಿದ್ಧ. ಹಾಗೆಯೇ ಹೆಸರು ಬೇಳೆಯಲ್ಲೂ ಉಪಹಾರ ಮಾಡಬಹುದು. ಹೆಸರು ಬೇಳೆಯ ದೋಸೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇವು ಹೆಚ್ಚಿನ ಪ್ರೊಟೀನ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಉಪಹಾರಕ್ಕೆ ಪರಿಪೂರ್ಣ ಆಯ್ಕೆಯಾಗಿದೆ.

ಚಿಯಾ ಪುಡ್ಡಿಂಗ್ (Chia Pudding): ಇದರಲ್ಲಿ ಪ್ರೊಟೀನ್ ಅಧಿಕ ಮಟ್ಟದಲ್ಲಿದ್ದು, ಕಡಿಮೆ ಕ್ಯಾಲೋರಿ ಇರುವುದರಿಂಗ ಬೆಳಗ್ಗಿನ ಉಪಹಾರಕ್ಕೆ ಬಹಳ ಆರೋಗ್ಯಯುತವಾದ ಆಹಾರವಾಗಿದೆ. ಕಾಮಕಸ್ತೂರಿ ಬೀಜ ಅಂತಲೇ ಹೇಳಲಾಗುವ ಚಿಯಾ ಬೀಜಗಳಿಗೆ ತಾಜಾ ಹಣ್ಣುಗಳು, ಒಣ ಹಣ್ಣುಗಳು, ಬೀಜಗಳು, ಬಾದಾಮಿ ಹಾಲು, ಜೇನುತುಪ್ಪವನ್ನು ಸೇರಿಸಬಹುದು. ತಿನ್ನಲು ಬಹಳ ರುಚಿಕರವಾಗಿರುವುದಲ್ಲದೆ, ತೂಕ ಇಳಿಕೆಗೂ ಸಹಕಾರಿಯಾಗಿದೆ.

Whats_app_banner